– ಮನೆ ಎದುರು ಅಂಗಲಾಚಿದರೂ ಒಪ್ಪದ ಮನೆಯವರು

ಕೋಲಾರ: ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾದ ಬಳಿಕ ಜಾತಿ ಹೆಸರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಮತ್ತೊಂದು ಮದುವೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ತನ್ನ ಪತಿಗಾಗಿ ಮಕ್ಕಳೊಂದಿಗೆ ಪತಿಯ ಮನೆ ಬಳಿ ಅತ್ತೆಯನ್ನು ಅಂಗಲಾಚಿದರೂ ಮನೆಗೆ ಸೇರಿಸಿಕೊಳ್ಳದೆ, ಅವಮಾನ ಮಾಡಿದ್ದಾರೆ.

5 ವರ್ಷದ ಹಿಂದೆ ಬಂಗಾರಪೇಟೆ ತಾಲೂಕಿನ ದೊಡ್ಡ ಚಿನ್ನಹಳ್ಳಿಯ ಸುನಿಲ್, ಚಿಕ್ಕ ಅಂಕಂಡಹಳ್ಳಿಯ ಕಾವ್ಯಾ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ 4 ವರ್ಷದ ಹಾಗೂ 9 ತಿಂಗಳ ಎರಡು ಗಂಡು ಮಕ್ಕಳಿವೆ. ಈ ಮಧ್ಯೆ ಪತಿ ತನ್ನ ತಾಯಿಯ ಮನೆಗೆ ಹೋಗಿ ಬರುತ್ತಿದ್ದು, ಮನೆಯವರ ಮಾತು ಕೇಳಿರುವ ಸುನಿಲ್, ಮತ್ತೊಂದು ಮದುವೆಯಾಗಿದ್ದಾನೆ ಎಂದು ಕಾವ್ಯಾ ಆರೋಪಿಸಿದ್ದಾರೆ. ಹೀಗಾಗಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಹಾಯ ಪಡೆದು ಪತಿಯ ಮನೆ ಎದುರು ಮನೆಗೆ ಸೇರಿಸಿಕೊಳ್ಳುವಂತೆ ಬೇಡಿಕೊಂಡಿದ್ದಾರೆ.

ಕಾಲಿಗೆ ಬೀಳುವೆ, ಕೈ ಮುಗಿಯುವೆ ಅಂದರೂ ಜಾತಿ ನೆಪ ಹೇಳಿ ಗಂಡನ ಮನೆಯವರು ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ. ಇದರಿಂದ ನೊಂದ ಮಹಿಳೆ ಕೆಲಕಾಲ ಗಂಡನೆ ಮನೆ ಎದುರು ಪ್ರತಿಭಟನೆ ಮಾಡಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾಳೆ. ಪತಿ ಸುನಿಲ್ ಮದುವೆಯಾಗಿ ಮೋಸ ಮಾಡಿದ್ದು, ಜಾತಿ ನೆಪದಲ್ಲಿ ನನ್ನನ್ನು ನಿರಾಕರಿಸುತ್ತಿದ್ದಾನೆ ಎಂದು ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕಾವ್ಯಾ ದೂರು ನೀಡಿದ್ದಾಳೆ.

The post ಪ್ರೀತಿಸಿ ಮದುವೆಯಾಗಿ, ಮಕ್ಕಳಾದ ಬಳಿಕ ಜಾತಿ ನೆಪ- ಪತ್ನಿ, ಮಕ್ಕಳನ್ನು ಮನೆಯಿಂದ ಹೊರ ಹಾಕಿದ ಪಾಪಿ appeared first on Public TV.

Source: publictv.in

Source link