‘ಪ್ರೀತಿಸುವ ಮುನ್ನ ಯೋಚಿಸಿ’; ಅಕ್ಕಿನೇನಿ ಕುಟುಂಬದ ಕಡೆಯಿಂದ ರಿಲೇಶನ್​ಶಿಪ್ ಟಿಪ್ಸ್​ | Think Before Getting Into A Relationship Akhil Akkineni Gave Relationship tips

‘ಪ್ರೀತಿಸುವ ಮುನ್ನ ಯೋಚಿಸಿ’; ಅಕ್ಕಿನೇನಿ ಕುಟುಂಬದ ಕಡೆಯಿಂದ ರಿಲೇಶನ್​ಶಿಪ್ ಟಿಪ್ಸ್​

ಅಕ್ಕಿನೇನಿ ಫ್ಯಾಮಿಲಿ

ಅಕ್ಕಿನೇನಿ ಕುಟುಂಬ ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿದೆ. ಇದಕ್ಕೆ ಕಾರಣ ನಾಗ ಚೈತನ್ಯ ಹಾಗೂ ಸಮಂತಾ ಅವರ ವಿಚ್ಛೇದನ. ಈ ವಿಚಾರ ಇನ್ನೂ ಚರ್ಚೆಯಲ್ಲಿರುವಾಗಲೇ ಅಕ್ಕಿನೇನಿ ಕುಟುಂಬದ ಕಡೆಯಿಂದ ರಿಲೇಶನ್​​ಶಿಪ್​ ಟಿಪ್ಸ್​ ಸಿಕ್ಕಿದೆ. ಅಷ್ಟಕ್ಕೂ ಇದನ್ನು ಕೊಟ್ಟಿದ್ದು ಯಾರು? ಆ ಪ್ರಶ್ನೆಗೆ ಉತ್ತರ ನಾಗ ಚೈತನ್ಯ ಸಹೋದರ ಅಖಿಲ್​.

ಅಖಿಲ್​ ಅವರ ನಟನೆಯ ‘ಮೋಸ್ಟ್​ ಎಲಿಜಬೆಲ್​ ಬ್ಯಾಚುಲರ್​’ ಸಿನಿಮಾ ಅಕ್ಟೋಬರ್​ 15ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ಮಾಧ್ಯಮವನ್ನು ಎದುರಾದರು ಅಖಿಲ್​. ಈ ವೇಳೆ ಅವರಿಗೆ ಪ್ರಶ್ನೆಯೊಂದು ಎದುರಾಯಿತು. ನೀವು ಯುವ ಜನತೆಗೆ ಏನನ್ನು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅವರು, ‘ರಿಲೇಶನ್​ಶಿಪ್​ಗೆ ಬೀಳುವುದಕ್ಕೂ ಮೊದಲು ನಾವು ಯೋಚಿಸುವುದಿಲ್ಲ. ನಾವು ಪ್ರೀತಿಸುವುದಕ್ಕೂ ಮೊದಲು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಇದರಿಂದ ಸಾಕಷ್ಟು ಜನರ ಬಾಳಿನ ಮೇಲೆ ಎಫೆಕ್ಟ್​ ಆಗುವುದು ತಪ್ಪುತ್ತದೆ’ ಎಂದಿದ್ದಾರೆ.

ಅಖಿಲ್​ ಅವರು ಕೂಡ ಮದುವೆ ವಿಚಾರದಲ್ಲಿ ಸುದ್ದಿಯಾಗಿದ್ದರು. 2016ರಲ್ಲಿ ಅವರು ಶ್ರಿಯಾ ಭೂಪಾಲ್​ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶ್ರಿಯಾ ಉದ್ಯಮಿ ಜಿ. ವಿ. ಕೃಷ್ಣ ರೆಡ್ಡಿ ಅವರ ಮೊಮ್ಮಗಳು. ಇಬ್ಬರ ಮದುವೆಯನ್ನು 2017ರಲ್ಲಿ ಯೋಜಿಸಲಾಗಿತ್ತು. ಆದರೆ, ಅವರ ಮದುವೆ ಮುರಿದು ಬಿದ್ದಿತ್ತು.

ಇತ್ತೀಚೆಗೆ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದಿದ್ದರು. ‘ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮಗೆ ಬೇಕಾಗಿರುವ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ’ ಎಂದು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ನಾಗ ಚೈತನ್ಯ ಮತ್ತು ಸಮಂತಾ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್​ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ

‘ಇಲ್ಲಿ ಕೂರಲು ಭಯವಾಗುತ್ತಿದೆ’; ಡಿವೋರ್ಸ್ ಬಳಿಕ ಮೊದಲ ಬಾರಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಸಮಂತಾ ಮಾತು

TV9 Kannada

Leave a comment

Your email address will not be published. Required fields are marked *