ಪ್ರೀತಿ ಕಾಣದೇ ರಾಕ್ಷಸನಾದ..ಈತನೆಂದರೆ ಜೈಲರ್​ಗೂ ನಡುಕ; ಯಾರೀ ನಟೋರಿಯಸ್ ರಾಬರ್ಟ್?!

ನಾವು ಸಿನಿಮಾಗಳಲ್ಲಿ, ಕ್ರೈಂ ಸ್ಟೋರಿಗಳಲ್ಲಿ ಹಂತಕರು, ಕಳ್ಳರು ಕಾಕರನ್ನ ತುಂಬಾ ನೋಡಿದ್ದೇವೆ. ಸೀರಿಯಲ್ ಕಿಲ್ಲರ್​ಗಳ ಬಗ್ಗೆಯೂ ಕೇಳಿದ್ದೇವೆ.. ಆದ್ರೆ, ಈಗ ನಾವ್ ಹೇಳೋಕೆ ಹೊರಟಿರೋ ಅವನ ಕಥೆ ಕೇಳಿದ್ರೆ, ನೀವು ಅಕ್ಷರಶಃ ದಂಗಾಗೋದು ಗ್ಯಾರಂಟಿ.. ಯಾಕಂದ್ರೆ, ಅವನು ಅಂತಿಂಥ ಕ್ರಿಮಿನಲ್ ಅಲ್ಲ.. ದಶಕಗಳಿಂದ ಜೈಲಲ್ಲಿದ್ರೂ ಅಲ್ಲಿರೋ ಅಧಿಕಾರಿಗಳಿಗೆ ಅವನ ಕಂಡ್ರೆ ಭಯ.. ಯಾಕೆ? ಅಷ್ಟಕ್ಕೂ ಆ ಖತರ್ನಾಕ್ ಯಾರು? ಈ ರಿಪೋರ್ಟ್​ ನೋಡಿ..

ಹೊಟ್ಟೆಪಾಡು, ಆನಾರೋಗ್ಯಪೀಡಿತ ತಾಯಿ, ಜೀವನದಲ್ಲಿ ತಾನಿಷ್ಟಪಡುವ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಆಸೆ.. ಜೋಕರ್ ವೇಷ ತೊಟ್ಟು, ರಸ್ತೆಬದಿಯಲ್ಲಿ ಜಾಹೀರಾತು ಫಲಕ ಹಿಡಿದು ಜನರನ್ನ ರಂಜಿಸುವ ನಾಯಕ ಆ ಕೆಲಸದಿಂದಲೇ ತನ್ನ ಹೊಟ್ಟೆ ತುಂಬಿಸಿಕೊಳ್ಳುತಿರ್ತಾನೆ.. ದೊಡ್ಡ ಸ್ಟ್ಯಾಂಡ್​​ಅಪ್​ ಕಮಿಡಿಯನ್ ಆಗಿ, ಹೆಸರು ಸಂಪಾದನೆ ಮಾಡಬೇಕೆಂಬ ಹಂಬಲ..ಅದಕ್ಕೋಸ್ಕರ ಎಷ್ಟೇ ಸರ್ಕಸ್​ ಮಾಡಿದ್ರೂ, ಯಶಸ್ಸು ಅನ್ನೋದು ಅವನಿಗೆ ಮರೀಚಿಕೆಯಾಗಿಯೇ ಇರುತ್ತೆ.

ಬಾಲ್ಯದಿಂದ ಆತನ ಜೀವನದಲ್ಲಿ ನಡೆಯೋ ಘಟನೆಗಳು, ದೊಡ್ಡವನಾದ ಮೇಲ ಸಮಾಜದಿಂದ ಆತ ಅನುಭವಿಸೋ ನೋವು.. ಅಪಹಾಸ್ಯಗಳೆಲ್ಲವೂ, ಆತನನ್ನ ಎಷ್ಟು ಕ್ರೂರಿಯನ್ನಾಗಿ ಮಾಡಿಬಿಡುತ್ತೆ ಅಂದ್ರೆ, ಅದನ್ನ ಊಹಿಸಿಕೊಳ್ಳೋದಕ್ಕೂ ಅಸಾಧ್ಯ.. ಅನಾರೋಗ್ಯಕ್ಕೆ ತುತ್ತಾಗಿರೋ ತಾಯಿಯ ಆರೈಕೆ ಮಾಡುವಾಗ ಆತನ ಅಕ್ಷರಶಃ ಸ್ನೇಹಮಯಿ, ಆದ್ರೆ, ಜೋಕರ್ ವೇಷ ತೊಟ್ಟು ಹಿಂಸಾಕೃತ್ಯ ನಡೆಸಿ, ಏನೂ ಮಾಡೇ ಇಲ್ಲ ಎಂಬಂತೆ ಗಹಗಹಿಸಿ ನಗುವಾಗ ನಾಯಕ ಹುಟ್ಟಿಸುವ ಭಯ, ಪ್ರೇಕ್ಷಕರ ಎದೆ ಬಡಿತವನ್ನ ಜಾಸ್ತಿ ಮಾಡುತ್ತೆ..

ಅಂದಹಾಗೇ, ಇದು  ಹಾಲಿವುಡ್​ನಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಜೋಕರ್ ಚಿತ್ರದ ತಿರುಳು. ಈ ಸಿನಿಮಾದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದ ವಾಕೀನ್‌ ಫೀನೆಕ್ಸ್​  ಮಹೋನ್ನತ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ರು.. ನಾವ್ ಯಾಕ್ ಈಗ ಈ ಸಿನಿಮಾ ಕಥೆ ಹೇಳ್ತೀದ್ದೀವಿ ಅಂದ್ರೆ, ಈ ಕಥೆಯನ್ನೇ ಹೋಲುವ ಒಬ್ಬ ವ್ಯಕ್ತಿಯ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಾ..

ಇವನ ಮುಖ ನೋಡ್ತಿದ್ರೆ, ಸಾಮಾನ್ಯ ಜನರಿಗೆ ಏನ್ ಅನ್ನಿಸಬಹುದು.. ಪಾಪದವನ ಥರ ಇದ್ದಾನೆ ಅಂತಾ ಕೆಲವರು ಅಂದ್ರುಕೊಂಡ್ರೆ ಬುದ್ಧಿ ಮಾಂದ್ಯ ಇರಬಹುದಾ ಅಂತಾ ಇನ್ ಕೆಲವರು ಅಂದುಕೊಳ್ತಾರೆ..  ಇವನ ಬಗ್ಗೆ ಆ ರೀತಿ ಸಾಫ್ಟ್​ ಆಗಿ ನೀವು ಥಿಂಕ್ ಮಾಡುದ್ರೆ, ಇವನ ಮೇಲೆ ನೀವಿಟ್ಟುಕೊಂಡಿರುವ ಅಭಿಪ್ರಾಯ ತಪ್ಪು.. ಇವನ ಇತಿಹಾಸ ಕೇಳಿದ್ರೆ, ಎಂಥಾ ಡಾನ್​ಗಳೇ ಆದ್ರೂ ಬೆಚ್ಚಿ ಬೀಳೋದು ಪಕ್ಕಾ..

ಬ್ರಿಟನ್ ಮೋಸ್ಟ್ನಟೋರಿಯಸ್ ರಾಬರ್ಟ್ಮೌಡ್ಸ್​​ಲೀ
40ಕ್ಕೂ ಹೆಚ್ಚು ವರ್ಷಗಳಿಂದ ಜೈಲಿನಲ್ಲೇ ಇರುವ ಹಂತಕ

Yes.. ಇವನ ಹೆಸರು ರಾಬರ್ಟ್​ ಮೌಡ್ಸ್​ಲೀ.. ಇಡೀ ವಿಶ್ವದಲ್ಲಿ ಯಾರದ್ರೂ ನಟೋರಿಯಸ್ ಹಂತಕರಿದ್ರೆ, ಇವನ ಹೆಸರು ಮುಂಚೂಣಿಯಲ್ಲಿರುತ್ತೆ. ಬ್ರಿಟನ್​ನಲ್ಲಿ ಒಂದು ಕಾಲದಲ್ಲಿ ತಲ್ಲಣ ಮೂಡಿಸಿದ್ದ ರಾಬರ್ಟ್​ ಮೌಡ್ಸ್​ಲೀ.. ಜೈಲಿಗೆ ಹೋದ ಮೇಲೂ ಅಲ್ಲಿದ್ದವರು ಬೆಚ್ಚಿ ಬೀಳುವಂತೆ ಮಾಡಿದ್ದ.. ಯಾಕಂದ್ರೆ, ರಾಬರ್ಟ್​ ಮೌಡ್ಸ್​ಲೀ ಹೊರಗೆ ಅಷ್ಟೇ ಅಲ್ಲ.. ಜೈಲಿಗೆ ಹೋದ ಮೇಲೂ ತನ್ನ ಪಾತಕ ಚರಿತ್ರೆಯನ್ನ ಮುಂದುವರಿಸಿದ್ದ.. ಅಷ್ಟಕ್ಕೂ ರಾಬರ್ಟ್​ ಮೌಡ್ಸ್​ಲೀ ಯಾರು ಅವನ ಹಿಸ್ಟರಿ ಏನು ಅನ್ನೋದನ್ನ  ಇಲ್ ಕೇಳಿ..

ನಟೋರಿಯಸ್ ರಾಬರ್ಟ್ 

ರಾಬರ್ಟ್​ 1953ರಲ್ಲಿ ಬ್ರಿಟನ್​ನ ಲಿವರ್​ಪೋಲ್​ನಲ್ಲಿ ಜನಿಸಿದವನು. ಹುಟ್ಟಿದ 12 ಮಕ್ಕಳಲ್ಲಿ ರಾಬರ್ಟ್​ 4ನೇಯವನಾಗಿದ್ದ, ಆದ್ರೆ, ಚಿಕ್ಕ ವಯಸ್ಸಿನಲ್ಲಿ ರಾಬರ್ಟ್​ಗೆ ಅಪ್ಪ-ಅಮ್ಮನಿಂದ ಪ್ರೀತಿ ಅನ್ನೋದೇ ಸಿಗಲಿಲ್ಲ. ಬದಲಾಗಿ ರಾಬರ್ಟ್​ ಅಪ್ಪ-ಅಮ್ಮ ಮಕ್ಕಳಿಗೆ ನಿರಂತರ ಕಿರುಕುಳ ನೀಡುತ್ತಿದ್ರು. ಇದೆಲ್ಲಾ ಕಾರಣಗಳಿಂದ ರಾಬರ್ಟ್​ ಮತ್ತು ಸಹೋದರರು ಬಾಲ್ಯವನ್ನು, ಆಶ್ರಮದಲ್ಲಿಯೇ ಕಳೆಯಬೇಕಾಯ್ತು. ದೊಡ್ಡವನಾದ ಮೇಲೆ ರಾಬರ್ಟ್​ಗೆ ಆತನ ಬಾಲ್ಯ ತೀವ್ರವಾಗಿ ಕಾಡಿತ್ತು. ಪುಟ್ಟ ಪುಟ್ಟ ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿದ್ದವರ ಮೇಲೆ ಇನ್ನಿಲ್ಲದ ಕ್ರೌರ್ಯ ಬೆಳೆಸಿಕೊಂಡಿದ್ದ ರಾಬರ್ಟ್​,, 1974ರಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದವನನ್ನ ಭೀಭತ್ಸವಾಗಿ ಮುಗಿಸಿದ್ದ. ಆ ಕೊಲೆಗಳನ್ನ ಮಾಡುತ್ತಿದ್ದ ರಾಬರ್ಟ್​ ಒಂದು ದಿನ ಪೊಲೀಸರ ಕೈಗೆ ಸಿಕ್ಕಿ ಬೀಳ್ತಾನೆ.  ಅಲ್ಲಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಈಗ​ 40ಕ್ಕೂ ಅಧಿಕ ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ.

ಬ್ರಿಟನ್​ನಲ್ಲಿ ಅತೀ ಹೆಚ್ಚು ವರ್ಷಗಳಿಂದ ಜೈಲು ಶಿಕ್ಷೆಗೆ ಗುರಿಯಾಗಿರುವ ಒಬ್ಬನೇ ಕೈದಿ ಅಂದ್ರೆ, ಅದು ರಾಬರ್ಟ್ ಮೌಡ್ಸ್​​ಲೀ.. ರಾಬರ್ಟ್ ಜೈಲಿಗೆ ಹೋದ ಬಳಿಕವಾದ್ರೂ, ಕೊಂಚ ಸದ್ಗುಣಗಳನ್ನ ಅವಳವಡಿಸಿಕೊಂಡಿದ್ರೆ, ಅವನ ಶಿಕ್ಷೆಯ ಪ್ರಮಾಣ ಕಡಿಮೆಯಾಗಿ, ಯಾವತ್ತೋ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇತ್ತು, ಆದ್ರೆ,  ಕಂಬಿ ಹಿಂದೆ ಸೇರಿದ್ರೂ ರಾಬರ್ಟ್​, ತನ್ನ ಕ್ರೌರ್ಯವನ್ನ ಬಿಟ್ಟಿರಲಿಲ್ಲ.

ಜೈಲಿನೊಳಗೇ ಸಿಬ್ಬಂದಿ, ಕೈದಿಗಳ ಸರಣಿ ಹತ್ಯೆ
ಹುಡುಕಿ ಹುಡುಕಿ ಕೊಲ್ಲುತ್ತಿದ್ದ ಕಿಲ್ಲರ್ ರಾಬರ್ಟ್!

ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ರಾಬರ್ಟ್​ನನ್ನ ಯಾರ್ಕ್​​ಶೈರ್​​ನಲ್ಲಿರುವ ವೇಕ್​ಫೀಲ್ಡ್ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿ ರಾಬರ್ಟ್​ ಅಕ್ಷರಶಃ ರಾಕ್ಷಸನಾಗಿಬಿಟ್ಟಿದ್ದ. ಜೈಲಿನಲ್ಲಿಯ ಇಬ್ಬರು ಕೈದಿಗಳನ್ನ ಹೊಡೆದು ಹೊಡೆದು ಕೊಂದಿದ್ದ.

​ಪತ್ನಿಯನ್ನ ಕೊಂದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಒಬ್ಬ ಕೈದಿಯನ್ನ ಕೊಂದು, ರಾಬರ್ಟ್​ ಆತನ ಮೃತದೇಹವನ್ನ ಸೆಲ್​​ನಲ್ಲಿರುವ ಮಂಚದ ಕೆಳಗೆ ಹಾಕಿದ್ದ, 7 ವರ್ಷದ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದ, ಮತ್ತೊಬ್ಬನ ತಲೆಯನ್ನ ಗೋಡೆಗೆ ಗುದ್ದಿ ಗುದ್ದಿ ಕೊಂದಿದ್ದ.. ಚಾಕುವಿನಿಂದ ಮನಬಂದಂತೆ ಇರಿದಿದ್ದ.

ಇದಾದ ಮೇಲೆ ಮತ್ತೊಂದು ಕೊಲೆ ಮಾಡ್ತಾನೆ ರಾಬರ್ಟ್​.. ಇಲ್ಲಿವರೆಗೂ ಒಟ್ಟು ನಾಲ್ಕು ಕೊಲೆಗಳನ್ನು ರಾಬರ್ಟ್​ ಮಾಡಿದ್ದು, ಮೂರು ಕೊಲೆಗಳು ಜೈಲಿನೊಳಗೆಯೇ ಆಗಿದ್ದವು. ರಾಬರ್ಟ್​​ನ ಕ್ರೌರ್ಯ ವೇಕ್​ಫೀಲ್ಡ್ ಜೈಲು ಸಿಬ್ಬಂದಿಗೆ ನಡುಕ ಹೊಟ್ಟಿಸಿತ್ತು. ಯಾವಾಗ, ಇವನ ರಾಕ್ಷಸೀಯ ಪ್ರವೃತ್ತಿಗೆ ಕೊನೆಯೇ ಇಲ್ಲ ಅಂತಾ ಪೊಲೀಸರು ಅಂದುಕೊಂಡ್ರೋ, ಅಂದಿನಿಂದ ಈ ಕೊಲೆಗಡುಕನಿಗಾಗಿ ವಿಶೇಷ ಕೊಠಡಿಯೇ ಸಿದ್ಧವಾಯ್ತು..

ರಾಬರ್ಟ್​ಗಾಗಿ ಗಾಜಿನಿಂದ ಮಾಡಿ ಬುಲೆಟ್​​ಪ್ರೂಫ್​ ಸೆಲ್​
40 ವರ್ಷಗಳಿಂದ ಯಾವ ಕೈದಿಗಳ ಜೊತೆಗೂ ಇಲ್ಲ ಸಂಪರ್ಕ

ಹೌದು, ರಾಬರ್ಟ್​ ಮೌಡ್ಸ್​​ಲೀ ಯಾವಾಗ ತನ್ನ 4ನೇ ಕೊಲೆಯನ್ನ ಜೈಲಲ್ಲಿ ಮಾಡ್ತಾನೋ, ಅಂದಿನಿಂದ ಅವನಿದ್ದ ಜಾಗವನ್ನ ಬದಲಿಸಿಯೇಬಿಡ್ತಾರೆ ಜೈಲು ಸಿಬ್ಬಂದಿ. ಅದು ಹೇಗೆ ಅಂದ್ರೆ, ರಾಬರ್ಟ್​ಗೇ ಅಂತಲೇ ಗಾಜಿನಿಂದ ಮಾಡಿದ ಬುಲೆಟ್​ಪ್ರೂಫ್​ ಸೆಲ್​ನ ರೆಡಿಮಾಡ್ತಾರೆ. ಆ ಸೆಲ್​ನೊಳಗೆ ನಿದ್ರಿಸಲು  ಕಾಂಕ್ರೀಟ್​​ನಿಂದ ಮಾಡಿದ ಮಂಚವಿದೆ. ಜೊತೆಗೆ, ಒಂದು ಟೇಬಲ್, ಕುರ್ಚಿ, ಕಾರ್ಡ್​ಬೋರ್ಡ್​, ಶೌಚ್ಛಾಲಯ ಹಾಗೂ ಸಿಂಕ್ ಇದೆ.. ಹಾಗಾಗಿ, ರಾಬರ್ಟ್​ ಆ ಸೆಲ್​ಬಿಟ್ಟು ಒಳಗೆ ಬರುವ ಹಾಗೇ ಇಲ್ಲ.. ಟೈಮಿಗೆ ಸರಿಯಾಗಿ ಊಟ, ತಿಂಡಿ ಸಪ್ಲೈ ಆಗುತ್ತೆ. ಬರೋಬ್ಬರಿ ಬರೋಬ್ಬರಿ 4 ದಶಕಗಳಿಂದ ರಾಬರ್ಟ್​ ಇದೇ ರೀತಿ ಜೈಲಿನ ಗ್ಲಾಸ್​ಬಾಕ್ಸ್​​ನಲ್ಲಿ ಜೀವನ ಸವೆಸುತ್ತಿದ್ದಾನೆ..

ಬಾಲ್ಯದಲ್ಲಿ ತಾನು ಅನುಭವಿಸಿದ ಕಿರುಕುಳದಿಂದ ಬೇಸತ್ತು ಹೋಗಿದ್ದ, ರಾಬರ್ಟ್​ ಒಂದು ದಿನ ಕೊಲೆಗಾರನಾಗಿ ಕೊನೆಯಾಗ್ತಾನೆ. ಆದ್ರೆ, ಒಂದು ಕೊಲೆ ಮಾಡಿ ಜೈಲು ಸೇರುವ ಆತ, ಸರಣಿ ಹಂತಕನಾಗಿ ಕುಖ್ಯಾತಿ ಪಡೀತಾನೆ. ಅದೇನೇ ಇರಲಿ ತಾನು ಮಾಡಿದ ಪ್ರಮಾದಗಳನ್ನು ತಿದ್ದುಕೊಳ್ಳೋದು ಬಿಟ್ಟು, ಮತ್ತೆ ಮತ್ತೆ ಅದೇ ತಪ್ಪನ್ನ ಮಾಡಿ ಜೀವನ ಪರ್ಯಂತ ಗಾಜಿನ ಬಾಕ್ಸ್​​ನೊಳಗೆ ಕೊಳೆಯೋ ಹಾಗಾಗಿದ್ದಾನೆ ರಾಬರ್ಟ್​.. ರಾಬರ್ಟ್​ನ ಬಾಲ್ಯ, ಯೌವ್ವನ, ಕ್ರೌರ್ಯವನ್ನಾಧಿರತ ಡಾಕ್ಯುಮೆಂಟರಿ ಈಗ ಬಹುಹಿಂದೆಯೇ ಬಿಡುಗಡೆಯಾಗಿತ್ತು. ಒಟ್ಟಾರೆ, ಜಗತ್ತಿನ ಸರಣಿ ಹಂತಕರ ಲಿಸ್ಟ್​ನಲ್ಲಿ ರಾಬರ್ಟ್​ ಹೆಸರು ಮುಂಚೂಣಿಯಲ್ಲಿದೆ ಅಂದ್ರೆ ತಪ್ಪಾಗಲ್ಲ..

ಒಂದು ತಪ್ಪು ಮಾಡಿ ಆಯ್ತು.. ಮಾಡಿದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿದ್ದು, ಆಯ್ತು.. ಆದ್ರೆ, ಆ ತಪ್ಪಿನ ಅರಿವಾಗಿ ಒಳ್ಳೆ ಗುಣ ಅಳವಡಿಸಿಕೊಂಡಿದಿದ್ರೆ ರಾಬರ್ಟ್​ ಇಷ್ಟೊತ್ತಿಗಾಗಲೇ ಬಿಡುಗಡೆಯಾಗಿ, ಹೊರಗೆ ಬಂದು ಹೊಸ ಜೀವನ ನಡೆಸಬಹುದಾಗಿತ್ತು. ಬಟ್​, 68 ವರ್ಷ ವಯಸ್ಸಿನ ರಾಬರ್ಟ್​ ಇನ್ನೆಷ್ಟು ವರ್ಷ ಬದುಕ್ತಾನೋ ಗೊತ್ತಿಲ್ಲ. ಜೀವನ ಪೂರ್ತಿ ಜೈಲಲ್ಲೇ ಇರಬೇಕಾಗುತ್ತೆ ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ.

The post ಪ್ರೀತಿ ಕಾಣದೇ ರಾಕ್ಷಸನಾದ..ಈತನೆಂದರೆ ಜೈಲರ್​ಗೂ ನಡುಕ; ಯಾರೀ ನಟೋರಿಯಸ್ ರಾಬರ್ಟ್?! appeared first on News First Kannada.

News First Live Kannada

Leave a comment

Your email address will not be published. Required fields are marked *