‘ಪ್ರೀತಿ’ ಕೊಂದ ಕೊಲೆಗಾರ್ತಿ..! ಒಂದೇ ಕುಟುಂಬದ ಐವರ ‘ಕೊಲೆಯ ರಹಸ್ಯ’ ಬಯಲು


ಮಂಡ್ಯ: ಫೆಬ್ರವರಿ 6 ರಂದು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಗ್ರಾಮದಲ್ಲಿ ಒಂದೇ ಕುಟುಂಬದ ಐವರ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ.

ಒಂದೇ ಕುಟುಂಬದ ಲಕ್ಷ್ಮೀ (26), ರಾಜ್ (12), ಕೋಮಲ್ (7), ಕುನಾಲ್ (4), ಗೋವಿಂದ (8) ಅವ್ರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕಗ್ಗೊಲೆ ಮಾಡಲಾಗಿತ್ತು. ಇದೀಗ ಕೊಲೆ ಆರೋಪಿಯನ್ನ ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀ (30) ಬಂಧಿತ ಆರೋಪಿ. ಸದ್ಯ ಲಕ್ಷ್ಮೀಯನ್ನ ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಗಂಗಾರಾಮ್ ಎಂಬುವವರ ಪತ್ನಿ, ಮೂವರು ಮಕ್ಕಳು ಹಾಗೂ ಗಂಗಾರಾಮ್ ಅಣ್ಣ ಗೋವಿಂದನ ಮಗನನ್ನು ಕೊಲೆ ಮಾಡಲಾಗಿತ್ತು. ಗಂಗಾರಾಮ್ ಹಾಗೂ ಆತನ ಅಣ್ಣ ಪ್ಲಾಸ್ಟಿಕ್ ವ್ಯಾಪಾರಿಗಳಾಗಿದ್ದು, ವ್ಯಾಪಾರಕ್ಕೆಂದು ಕಳೆದ ಎರಡು ದಿನಗಳ ಹಿಂದೆಯೇ‌ ಗಂಗಾರಾಮ್,ಅಣ್ಣ ಗಣೇಶ್ ಅತ್ತಿಗೆ ಚಂಪಾಡಿ‌ ವ್ಯಾಪಾರಕ್ಕೆ‌ ತೆರಳಿದ್ದರು. ನಾಲ್ವರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಗಂಗಾರಾಮ್ ಪತ್ನಿ ಲಕ್ಷ್ಮೀ ಇದ್ದರು. ರಾತ್ರಿ ಮಕ್ಕಳೊಂದಿಗೆ ಮಲಗಿದ್ದ ವೇಳೆ ಮನೆ ಒಳಗೆ ತೆರಳಿ ಐವರನ್ನು‌ ಕೊಲೆ ಮಾಡಲಾಗಿತ್ತು.

News First Live Kannada


Leave a Reply

Your email address will not be published.