ಶಿವಮೊಗ್ಗ: ಪ್ರೀತ್ಸೆ, ಪ್ರೀತ್ಸೆ ಅಂತ ಬೆನ್ನಿಗೆ ಬಿದ್ದಿದ್ದ ಯುವಕನಿಂದ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಕರಿಮನೆ ಗ್ರಾಮದಲ್ಲಿ ನಡೆದಿದೆ.

ಹೊಸನಗರ ತಾಲೂಕಿನ ಸಹನಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಸಹನಾ ಹೊಸ ನಗರದ ಹೋಲಿ ರೆಡಿಮೆಡ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆರೋಪಿ ಪ್ರಶಾಂತ್ ಕನ್ನಳ್ಳಿಯ ನಿವಾಸಿಯಾಗಿದ್ದು, ತನ್ನನ್ನು ಪ್ರೀತಿಸುವಂತೆ ಆಗಾಗ ಸಹಾನ ಫೋನ್‍ಗೆ ಕರೆ ಮಾಡಿ ಪದೇ ಪದೇ ಪೀಡಿಸುತ್ತಿದ್ದ. ಈ ಬಗ್ಗೆ ಮೃತ ಸಹನಾ ಕೂಡ ತನ್ನ ತಾಯಿಯ ಜೊತೆ ಹೇಳಿಕೊಂಡಿದ್ದಳು. ನಂತರ ಸಹನಾಳ ತಂದೆ ತಾಯಿ ಪ್ರಶಾಂತ್ ಗೆ ತನ್ನ ಮಗಳಿಗೆ ಫೋನ್ ಮಾಡಬೇಡ, ಅವಳ ಹಿಂದೆ ಹೋಗಬೇಡ ಎಂದು ಬುದ್ದಿ ಹೇಳಿದ್ದರು. ಇದನ್ನು ಓದಿ:  ಸಿಎಂ ರಾಜೀನಾಮೆ ಮಾತುಗಳ ಹಿಂದಿನ ರಹಸ್ಯ ತಿಳಿಸಿದ ಶಾಸಕ ರಾಜೂಗೌಡ

ಬುದ್ದಿ ಹೇಳಿದರೂ ಪ್ರಶಾಂತ್ ತನ್ನ ಚಾಳಿಯನ್ನು ಮುಂದುವರಿಸಿದ್ದ. ಇದರಿಂದ ಬೇಸತ್ತ ಸಹನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಮ್ಮ ಮಗಳ ಆತ್ಮಹತ್ಯೆಗೆ ಪ್ರಶಾಂತ್ ಕಾರಣ ಎಂದು ಸಹನಾ ಪೋಷಕರಾದ ಸುಧಾಕರ್ ಹಾಗೂ ಮಮತ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಹನಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಪ್ರಶಾಂತ್ ನಾಪತ್ತೆಯಾಗಿದ್ದಾನೆ. ಇದನ್ನು ಓದಿ: ಗುಡುಗು ಯತ್ನಾಳ್, ಮಿಂಚು ಯೋಗೇಶ್ವರ್ ಮಳೆ ಬಂದ್ಮೇಲೆ ತಣ್ಣಗಾಗ್ತಾರೆ: ಕೋಟ ವ್ಯಾಖ್ಯಾನ

The post ಪ್ರೀತ್ಸೆ..ಪ್ರೀತ್ಸೆ ಅಂತ ಕಾಡಿದ ಪಾಗಲ್ ಪ್ರೇಮಿ – ಯುವಕನ ಕಾಟ ಸಹಿಸಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ appeared first on Public TV.

Source: publictv.in

Source link