ಪ್ರೇಕ್ಷಕರಿಗೆ ದಿಢೀರ್​ ಶಾಕ್​ ಕೊಟ್ಟ ’ಮನಸಾರೆ’ ಟೀಂ; ಏನದು?


ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸಾರೆ ಸೀರಿಯಲ್​ ಮೊನ್ನೆ ಮೊನ್ನೆಯಷ್ಟೇ 400 ಎಪಿಸೋಡ್​ಗಳನ್ನ ಕಂಪ್ಲೀಟ್​ ಮಾಡಿದ ಸಂಭ್ರಮದಲ್ಲಿತ್ತು. ಆದ್ರೇ ಈಗ ವೀಕ್ಷಕರಿಗೆ ಶಾಕ್​ ಒಂದನ್ನ ನೀಡಿದ್ದು, ವೈಂಡಪ್​ ಆಗಿದೆ.

ಮನಸಾರೆ ಧಾರಾವಾಹಿ ಪ್ರಾರ್ಥನಾ ಎಂಬ ಹುಡುಗಿಯ ಸುತ್ತ ಹೆಣೆಯುವ ಕತೆಯಾಗಿದ್ದು.. ತಂದೆಗೆ ಇವಳನ್ನ ಕಂಡ್ರೆ ಆಗಲ್ಲಾ.. ಆದ್ರೆ ಪ್ರಾರ್ಥನಾಗೆ ತಂದೆ ಅಂದ್ರೆ ಜಗತ್ತು.. ತಂದೆಯ ಪ್ರೀತಿಗಳಿಸಲು ಪ್ರಾರ್ಥನಾ ಹರಸಾಹಸ ಪಡ್ತಿರ್ತಾಳೆ. ಇನ್ನೊಂದು ಕಡೆ ತಂದೆಗೆ ಚಿಕ್ಕ ಮಗಳು ಪಾವನಿ ಅಂದ್ರೇ ಪ್ರಾಣ. ಈ ರೀತಿಯಾಗಿ ಸಾಗುತ್ತಿದ್ದ ಕತೆಯಲ್ಲಿ ಸದ್ಯ ಪ್ರಾರ್ಥನಾಳನ್ನ ತಂಂದೆ ಉಪ್ಪಿಕೊಂಡು ಅಪ್ಪಿಕೊಂಡಿದ್ರು.
ಹೀಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕೊಟ್ಟು ವೀಕ್ಷಕರನ್ನ ರಂಜಿಸ್ತಾಯಿದ್ದ ಸೀರಿಯಲ್​ನ ನಾಯಕಿ ಪ್ರಾರ್ಥನಾಳ ಪಾತ್ರಕ್ಕೆ ಪ್ರಿಯಾಂಕಾ ಚಿಂಚೊಳ್ಳಿ ಬಣ್ಣ ಹಚ್ಚಿದ್ದರೇ, ನಾಯಕನ ಪಾತ್ರಕ್ಕೆ ಸುಜಯ್​ ಹೆಗ್ಗಡೆ ನಿರ್ವಹಿಸುತ್ತಿದ್ದರು.

ಹರೀಶ್​, ನಟಿ ಸ್ವಾತಿ, ಯಮುನಾ ಶ್ರೀನಿಧಿ, ಚಿತ್ಕಲಾ ಬಿರಾದರ್​, ಪ್ರಕೃತಿ ಪ್ರಸಾದ, ತಾರಾ ದಂಪತಿಯಾದ ರಮೇಶ್​ ಪಂಡಿತ್​-ಸುನೇತ್ರಾ…ಹೀಗೆ ದೊಡ್ಡ ತಾರಾ ಬಳಗವನ್ನ ಹೊಂದಿದ್ದ ಮನಸಾರೆ ಸೀರಿಯಲ್ ಈಗಾಲೇ ತನ್ನ ಶೂಟಿಂಗ್​ ಕಂಪ್ಲೀಟ್​ ಮಾಡಿದ್ದು,​ ಮೂಲಗಳ ಪ್ರಕಾರ ಕ್ಲೈಮ್ಯಾಕ್ಸ್​​ನ ಸಂಚಿಕೆ ನವಂಬರ್​ 13 ರಂದು ಅಂದ್ರೇ ಇಂದು ಪ್ರಸಾರವಾಗಲಿದೆ.

ಅಷ್ಟಕ್ಕೂ ಸೀರಿಯಲ್​ ವೈಂಡಪ್​ ಆಗಲು ಕಾರಣ ಏನೂ ಅಂತಿರಾ..? ಈ ಹಿಂದೆನೇ ನಾವೂ ಸಾಕಷ್ಟು ಬಾರಿ ಹೇಳಿದಂತೆ ಕತೆ ಎಷ್ಟೇ ಚನ್ನಾಗಿ ಮೂಡಿಬರುತ್ತಿದ್ದರು, ಕೊನೆಯದಾಗಿ ಟಿಆರ್​ಪಿನೇ ಮುಖ್ಯವಾಗುವುದು. ಕಿರುತೆರೆಯಲ್ಲಿ ನಂಬರ್​ಗಳ ಲೆಕ್ಕಾಚಾರವೇ ಫೈನಲ್​. ಈಗ ಅದೇ ಲೆಕ್ಕಾಚಾರದಲ್ಲಿ ಮನಸಾರೆ ಸೀರಿಯಲ್​ ಕೂಡ ವೈಂಡಪ್​ ಆಗ್ತಾಯಿದೆ.

News First Live Kannada


Leave a Reply

Your email address will not be published. Required fields are marked *