ಪ್ರೇಕ್ಷಕರಿಗೆ ‘ಮುಗಿಲ್​ಪೇಟೆ’ ಇಷ್ಟ ಆಯ್ತಾ? ‘ಕ್ರೇಜಿ ಸ್ಟಾರ್​’ ಪುತ್ರನ ಸಿನಿಮಾ ಬಗ್ಗೆ ಇಲ್ಲಿದೆ ಜನರ ಪ್ರತಿಕ್ರಿಯೆ | Manuranjan Ravichandran starrer Mugilpete Kannada movie audience reaction


‘ಕ್ರೇಜಿ ಸ್ಟಾರ್​’ ರವಿಚಂದ್ರನ್​ (Crazy Star Ravichandran) ಅವರ ಪುತ್ರ ಮನುರಂಜನ್​ ರವಿಚಂದ್ರನ್ (Manuranjan Ravichandran)​ ನಟನೆಯ ‘ಮುಗಿಲ್​ಪೇಟೆ’ (Mugilpete Kannada Movie) ಚಿತ್ರದ ಇಂದು (ನ.19) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಭರತ್​ ನಾವುಂದ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಮನುರಂಜನ್​ ಅವರಿಗೆ ಜೋಡಿಯಾಗಿ ಖಯಾದು ಲೋಹರ್​ ಅಭಿನಯಿಸಿದ್ದಾರೆ. ಇನ್ನುಳಿದ ಮುಖ್ಯಪಾತ್ರಗಳಲ್ಲಿ ಸಾಧುಕೋಕಿಲ, ರಂಗಾಯಣ ರಘು, ತಾರಾ ಅನುರಾಧ ಮುಂತಾದವರು ಬಣ್ಣ ಹಚ್ಚಿದ್ದಾರೆ. ಒಂದು ಸುಂದರವಾದ ಲವ್​ಸ್ಟೋರಿ ಈ ಸಿನಿಮಾದಲ್ಲಿದೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿಬಂದ ಪ್ರೇಕ್ಷಕರಿಗೆ ‘ಮುಗಿಲ್​ಪೇಟೆ’ ಇಷ್ಟ ಆಗಿದೆ. ಜನರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿರುವುದಕ್ಕೆ ಚಿತ್ರತಂಡದವರ ಮೊಗದಲ್ಲಿ ನಗು ಮೂಡಿದೆ. ‘ಕ್ಲೈಮ್ಯಾಕ್ಸ್​ ತುಂಬ ಎಮೋಷನಲ್​ ಆಗಿದೆ. ಹಾಡುಗಳೆಲ್ಲ ಚೆನ್ನಾಗಿವೆ. ಮನುರಂಜನ್​-ಖಯಾದು ಲೋಹರ್​ ಜೋಡಿ ಸೂಪರ್​ ಆಗಿದೆ’ ಎಂದೆಲ್ಲ ಜನರು ಹೊಗಳಿದ್ದಾರೆ.

ಇದನ್ನೂ ಓದಿ:

GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

TV9 Kannada


Leave a Reply

Your email address will not be published. Required fields are marked *