ಪ್ರೇಕ್ಷರನ್ನು ಹಿಡಿದಿಡುತ್ತೆ ಹೊಸಬರ ಸೈನ್ಸ್​ ಫಿಕ್ಷನ್ ಸೈಕಾಲಜಿಲ್​ ಥ್ರಿಲ್ಲರ್ ‘ಕಾನ್ಸೀಲಿಯಂ’ ಸಿನಿಮಾ


ಆ್ಯಕ್ಷನ್ ಥ್ರಿಲ್ಲರ್, ರೊಮ್ಯಾಟಿಕ್ ಡ್ರಾಮಾ, ಟ್ರ್ಯೂ ಲವ್ ಸ್ಟೋರಿ ಸಿನಿಮಾಗಳಿಗಿಂತ ಜಾಸ್ತಿ ಹಾರರ್ ಮಿಸ್ಟ್ರಿ ಥ್ರಿಲ್ಲರ್ ಸಿನಿಮಾಗಳಿಗೆ ಪ್ರೇಕ್ಷಕರ ಒಲವು ಹೆಚ್ಚು. ಈ ಒಂದು ಧೈರ್ಯದ ಮೇಲೆ ಒಂದು ವಿಭಿನ್ನ ಪರಿಕಲ್ಪನೆಯ ಮೂಲಕ ‘ಕಾನ್ಸೀಲಿಯಂ’ ಅನ್ನೊ ಹೊಸ ಹೊಸಬರ ಸಿನಿಮಾ ಸ್ಯಾಂಡಲ್​ವುಡ್ ಪ್ರೇಕ್ಷಕರ ಮುಂದೆ ಬರಲಿದೆ.

ಕಾನ್ಸೀಲಿಯಂ ಚಿತ್ರ ಸೈನ್ಸ್​ ಫಿಕ್ಷನ್ ಸೈಕಾಲಜಿಲ್​ ಥ್ರಿಲ್ಲರ್ ಸಿನಿಮಾ. ಸಮರ್ಥ್, ಪ್ರೀಥಮ್, ಅರ್ಚನಾ ಲಕ್ಷ್ಮೀನಾರಾಯಣ ಸ್ವಾಮಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಸೀತಾರಾಮ ಶಾಸ್ತ್ರಿ ಪ್ರೊಡಕ್ಷನ್​ನಡಿ ಸಮರ್ಥ್ ನಿರ್ದೇನದಲ್ಲಿ ಈ ಕಾನ್ಸೀಲಿಯಂ ಸಿನಿಮಾ ಮೂಡಿಬಂದಿದೆ.

2018ರಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಿತ್ತು. ರಾಜ್ಯದ ನಾನಾ ಭಾಗದಲ್ಲಿ ಶೂಟ್ ಮುಗಿಸಿಕೊಂಡು ಬರೋಬ್ಬರಿ ಎರಡುವರೆ ವರ್ಷ ಗ್ರಾಫಿಕ್ಸ್ ತಂತ್ರಜ್ಞಾನವನ್ನ ಚಿತ್ರಕ್ಕೆ ಅಳವಡಿಸಿಕೊಂಡು ಈಗ ಸಿನಿಮಾ ರಿಲೀಸ್​ ಹೊಸ್ತಿಲಿನಲ್ಲಿ ನಿಂತಿದೆ. ದ್ವೈಪಯಾನ್ ಸಿಂಘ ಸಂಗೀತ ಸಂಯೋಜನೆಯಲ್ಲಿ ಸುದರ್ಶನ್ ಜೆ.ಕೆ ಕ್ಯಾಮೆರಾ ಕಲ್ಪನೆಯಲ್ಲಿ ಸಿನಿಮಾ ರೆಡಿಯಾಗಿದೆ. ಈಗಾಗಲೇ ಕಾನ್ಸೀಲಿಯಂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರನ್ನ ಇಂಪ್ರೇಸ್ ಮಾಡ್ತಿದೆ.. ಈ ಹೊಸಬರ ಹೊಸ ಪ್ರಯತ್ನಕ್ಕೆ ಸಿರಿಗನ್ನಡ ಪ್ರೇಕ್ಷಕ ಪ್ರಭುಗಳು ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕು.

News First Live Kannada


Leave a Reply

Your email address will not be published. Required fields are marked *