“ಪ್ರೇಮಂ ಪೂಜ್ಯಂ” ಚಿತ್ರದಲ್ಲಿ ಯಾರ ಅಭಿನಯ ಅದ್ಭುತ? ಸಿನಿಮಾದ ಪ್ಲಸ್, ಮೈನಸ್


ಒಂದು ಸಿನಿಮಾ ರಿಲೀಸ್​​ಗೂ ಮುಂಚೆ ಹಾಡುಗಳಿಂದ ಟೀಸರ್- ಟ್ರೈಲರ್​​ನಿಂದ ಸದ್ದು ಮಾಡಬೇಕು.. ಸುದ್ದು ಮಾಡಿದ ಸಿನಿಮಾ ಸದ್ದು ಮಾಡಿದಂಗೆ ನೈಜ ಪ್ರದರ್ಶನವನ್ನ ಪ್ರೇಕ್ಷಕ ಮಹಾ ಪ್ರಭುಗಳಿಗೆ ನೀಡಬೇಕು. ಮೆಲೋಡಿ ಸಾಂಗ್ಸ್ ಹಾಗೂ ಪೇಟಿಂಗ್ ನಂಥಹ ದೃಶ್ಯಗಳ ತುಣುಕಿನಿಂದ ನಿರೀಕ್ಷೆಯ ಕೋಟೆಯನ್ನ ಕಟ್ಟಿಸಿಕೊಂಡಿದ್ದ ‘‘ಪ್ರೇಮಂ ಪೂಜ್ಯಂ’’ ಪ್ರೇಕ್ಷಕರ ಮುಂದೆ ಬಂದು ನಿಂತಿದೆ.. ಹಾಗಾದ್ರೆ ಹೇಗಿದೆ ಸಿನಿಮಾ..? ಸಿನಿಮಾ ನೋಡಿದ ನಮಗೆ ಹಾನೆಸ್ಟ್​ ಆಗಿ ಅನ್ನಿಸಿದ್ದು ಏನು ? ಅನ್ನೋದನ್ನ ನೇರವಾಗಿ ನಿಮಗೆ ಒಪ್ಪಿಸಿ ಬೀಡ್ತಿವಿ ಓದಿ ಚಿತ್ರಪ್ರೇಮಿಗಳೇ..

ಒಂದು ಸಿನಿಮಾಕ್ಕೆ ನಿಜವಾದ ಮಾಲೀಕ ಪ್ರೇಕ್ಷಕ.. ಯಾರೇ ಎಷ್ಟೇ ಖರ್ಚು ಮಾಡಿ ಕಷ್ಟ ಇಷ್ಟ ಪಟ್ಟು ಸಿನಿಮಾ ಮಾಡಿದ್ರು ಅಲ್ಟಿಮೆಂಟ್ ಪ್ರೇಕ್ಷಕರಿಗೆ ಇಷ್ಟವಾಗಬೇಕು ಆಗ್ಲೇ ಆ ಸಿನಿಮಾ ಮಾಡಿದ್ದಕ್ಕೂ ಸಾರರ್ಥಕವಾಗೋದು. ಮೆಲೋಡಿ ಹಾಡುಗಳು, ವಂಡರ್ ಫುಲ್ ದೃಶ್ಯಗಳು, ಎಮೋಷನ್ , ಲೈಫ್​​ನ ಟ್ವಿಟ್ಸ್ ಆಂಡ್ ಟರ್ನ್​​​ಗಳಿಂದ ಪ್ರಮೋಷನ್ಸ್ , ಲವ್ ಅನ್ನೋ ಡಿವೋಷನ್ ಈ ಎಲ್ಲಾ ಸತ್ವ ತತ್ವಗಳನ್ನ ಬೇರಿಸಿದ್ರೆ ಆಗೋದು ಪ್ರೇಮಂ ಪೂಜ್ಯಂ.

ವೈದ್ಯೋ ನಾರಾಯಣೋ ಹರಿ ಅನ್ನೋ ಲೈನ್​ ಅನ್ನ ದೇವರಿಗಿಂತ ಒಂದು ಕೈ ಜಾಸ್ತಿಯಂತೆ ಭಕ್ತಿಯಿಂದ ಪ್ರೀತಿಸೋ ಪ್ರೇಮಿಯ ಕಥೆಯನ್ನ ಮಿಕ್ಸ್ ಮಾಡಿ ತನ್ನ ಜೀವನದಲ್ಲೇ ಆದ ಘಟನೆಯಗಳನ್ನ ಪೋಣಿಸಿ ಒಂದೊಳ್ಳೆ ಏಳು ಬಣ್ಣಗಳು ಉಳ ಕಥೆಯನ್ನ ಕಟ್ಟಿದ್ದಾರೆ ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್.

12 ಹಾಡುಗಳ ಮೇಳ , ಮೈನವಿರೇರಿಸುವ ಹಿನ್ನಲೆ ಸಂಗೀತದ ತಾಳ
ಮುಟ್ಟದೆ ತಟ್ಟುವ ಪವಿತ್ರ ಪ್ರೀತಿ.. ನಾಯಕನಿಗೆ ಸಿಗುತ್ತಾ ಏಜೆಂಲ್ ಪ್ರೀತಿ ?
ಕಥನಾಯಕ ಡಾ.ಶ್ರೀ ಹರಿ ಡಾಕ್ಟರ್ ಆಗೋ ಕನಸಿನಲ್ಲಿ ಮಂಡ್ಯದ ಮಳವಳ್ಳಿಯಿಂದ ಅಪ್ಪ ಅಮ್ಮನ ಆಶೀರ್ವಾದ ಪಡೆದು ಮಂಗಳೂರಿಗೆ ಬರ್ತಾನೆ.. ಡಾಕ್ಟರ್ ಪದವಿಗೆ ಓದುವಾಗ ಪ್ರೀತಿ ಮತ್ತು ಸ್ನೇಹ ಡಾ.ಶ್ರೀಹರಿಗೆ ಸಿಗುತ್ತದೆ.. ತನ್ನ ಜೀವನದಲ್ಲಿ ಕಾಲೇಜು ಗೆಳತಿಯನ್ನ ಭಕ್ತಿಯಿಂದ ದೇವತೆಯಂತೆ ಪ್ರೀತಿಸುತ್ತಾನೆ. ಆಕೆಯ ಅಪ್ಪಣೆ ಸಿಕ್ಕರು ಮುಟ್ಟದೆ ಪೂಜಿಸುತ್ತಾನೆ. ಎಲ್ಲಾ ಪ್ರೀತಿಯ ಕಥೆಗಳಂತೆ ಈ ಡಾ.ಶ್ರೀ ಹರಿ – ಶರ್ಲಿ ಪ್ರೇಮ ಕಥೆಯಲ್ಲು ಅಡೆ ತಡೆ ವಿಧಿಯಾಟದ ಗೊಡೆ ಎದುರಾಗುತ್ತೆ. ಇನೇನು ಎಲ್ಲವನ್ನೂ ಗೆದ್ದು ಪ್ರೇಮಿಗಳು ಒಂದಾಗ ಬೇಕು ಅನ್ನೋಷ್ಟರಲ್ಲಿ ಇಂಟರ್​ವೆಲ್. ಇಂಟರ್​ವೆಲ್ ಆದ ನಂತರವೇ ಅಸಲಿ ಸಿನಿಮಾ ಶುರುವಾಗೋದು. ಪ್ರೀತಿಸಿದವಳು ಸಿಕ್ತಾಳ , ಸಿಕ್ಕರೆ ಏನಾಗುತ್ತೆ ಸಿಗದಿದ್ದಾರೆ ಏನಾಗುತ್ತೆ ಅನ್ನೋದೆ ಸ್ಟೋರಿ.

ಈ ಸಿನಿಮಾದ ಕಥೆ ಸಖತ್ ಸ್ಟ್ರಾಂಗ್ ಆಗಿದೆ.. ಜೀವನ ಕಲಿಸೋ ಪಾಠ ಪ್ರೀತಿ ಪರಿಪಾಠ ಎಲ್ಲವೂ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಅಡಗಿದೆ.. ಪ್ರೀತಿಸಿದವರು ಸಿಗದೇ ಇದ್ದರು ಅವರಿಗೆ ಒಳ್ಳೆದನ್ನ ಬಯಸ ಬೇಕು ಪ್ರೀತಿಯನ್ನ ಪವಿತ್ರವಾಗಿ ಪೂಜಿಸ ಬೇಕು ಅನ್ನೋ ಸಾರವನ್ನ ಒಂದು ಹಂತದಲ್ಲಿ ಹೇಳೋ ಈ ಸಿನಿಮಾ ಸ್ನೇಹದ ಮಹತ್ವವನ್ನ ಸ್ನೇಹಂ ಪೂಜ್ಯಂ ಎಂದು ಸಾರುತ್ತೆ.. ಜೊತೆಗೆ ವೈದ್ಯೋ ನಾರಾಯಣೋ ಹರಿ ಅನ್ನೋ ವಾಕ್ಯವನ್ನ ಸಾರುತ್ತದೆ.. ಟೋಟಲ್ ಆಗಿಲ್ಲ ಥಿಯೇಟರ್ ಕೋಣೆಗೆ ಸೇರಿದ ಪ್ರೇಕ್ಷಕರ ಕಣ್ಣಲ್ಲಿ ನೀರು ಬರಿಸುತ್ತದೆ.

ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಯಾರ ಅಭಿನಯ ಅದ್ಭುತ..?
ದೇಹ ದಂಡಿಸಿದಾಗ ಬೇವರು ಬರುತ್ತೆ , ಮನಸು ಮರುಗಿದಾಗ ಕಣ್ಣೀರು ಬರುತ್ತೆ. ಈ ಸಿನಿಮಾದಲ್ಲಿ ನಾಯಕ ನಟ ಪ್ರೇಮ್ ಅವರ ಅಭಿನಯ , ನಾಯಕಿ ಬೃಂದಾ ಆಚಾರ್ಯ ನಟನೆಯ ಕೆಲ ದೃಶ್ಯಗಳು ಕಣ್ಣೀರು ತರಿಸೇ ತರಿಸುತ್ತದೆ.

ಇನ್ನು ಮಾಸ್ಟರ್ ಆನಂದ್ ಹಾಗೂ ಸಾಧು ಕೋಕಿಲಾ ಅಭಿನಯ ಕಚಗುಳಿಯನ್ನು ಇಡುತ್ತದೆ ಕೆಲವೊಂದು ಸೀನ್ಸ್​​ಗಳನ್ನ ಹಾರ್ಟಿಂಗ್ ಕನೆಕ್ಟ್ ಕೂಡ ಆಗುತ್ತೆ.. ಟಿ.ಎಸ್. ನಾಗಾಭರಣ , ಮಾಳವಿಕಾ , ಚಿತ್ಕಾಲ ಬೀರಾಧರ್ , ಅವಿನಾಶ್ , ಜಿ.ಜಿ ಸೇರಿದಂತೆ ಅನೇಕರ ಅಭಿನಯ ಮನಸಿನಲ್ಲಿ ಉಳಿಯುತ್ತೆ.

ಪ್ರೇಮಂ ಪೂಜ್ಯಂ ಚಿತ್ರದ ಪ್ಲಸ್ ಪಾಯಿಂಟ್ ಏನು?
ಪ್ರೇಮಂ ಪೂಜ್ಯಂ ಸಿನಿಮಾದ ಪ್ಲಸ್ ಪಾಯಿಂಟ್ ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್ ಹಾಗೂ ಕ್ಯಾಮೆರಾ ಮ್ಯಾನ್ ನವೀನ್ ಕುಮಾರ್.. ಕಥೆ , ಚಿತ್ರಕಥೆ , ಸಂಗೀತ , ಸಾಹಿತ್ಯ , ಸಂಭಾಷಣೆ ಹಾಗೂ ನಿರ್ದೇಶನ ಎಲ್ಲಾ ವಿಭಾಗದಲ್ಲೂ ಡಾ.ಬಿ.ಎಸ್ ರಾಘವೇಂದ್ರ ನಿಂತಿದ್ದಾರೆ.. ಈ ಸಿನಿಮಾದಲ್ಲಿ ಬ್ಯಾಕ್​ ಗ್ರೌಂಡ್ ಮ್ಯೂಸಿಕ್ ಅಲ್ಟಿಮೆಂಟ್.. ಜೊತೆಗೆ ಮಫ್ತಿ ಖ್ಯಾತಿಯ ನವೀನ್ ಕುಮಾರ್ ಕ್ಯಾಮೆರಾ ವರ್ಕ್ಸ್ ಏಳು ಬಣ್ಣದ ಕಾಮನ ಬಿಲ್ಲು.

ಪ್ರೇಮಂ ಪೂಜ್ಯಂ ಚಿತ್ರದ ಮೈನಸ್ ಪಾಯಿಂಟ್ ಏನು?
ಅದ್ಯಾವುದೇ ಸಿನಿಮಾ ಆಗಿರಲಿ ಪ್ಲಸ್ ಪಾಯಿಂಟ್ಸ್​​ಗಳಂತೆ ಪೈನಸ್ ಪಾಯಿಂಟ್​ಗಳು ಇದ್ದೇ ಇರುತ್ತೆ.. ಕೆದಂಬಾಡಿ ಕ್ರಿಯೆಷನ್​​​​ನಡಿ ನಿರ್ಮಾಣವಾಗಿರುವ ಪ್ರೇಮಂ ಪೂಜ್ಯಂ ಚಿತ್ರದ ಪೈನಸ್ ಪಾಯಿಂಟ್ ಸಿನಿಮಾ ಒಟ್ಟು ವಿಸ್ತಿರ್ಣ.. 2ಗಂಟೆ 53 ನಿಮಿಷ ಸಿನಿಮಾ ಇದೆ.. ಒಂದೆರಡು ಹಾಡುಗಳು ಹಾಗೂ 20 ನಿಮಿಷ ಸೀನ್ಸ್​ಗಳಿಗೆ ಕತ್ತರಿ ಹಾಕಿದ್ರೆ ಪ್ರೇಮಂ ಪೂಜ್ಯಂ ಇನ್ನೂ ಫರ್ಫೆಕ್ಟ್.. ಆದ್ರೆ ಕೊಟ್ಟ ದುಡ್ಡಿಗೆ ಮೊಸ ಇಲ್ಲ.. ಸಿನಿಮಾ ನೋಡಿದವರು ಎಮೋಷನಲ್ ಆಗದೆ ಇರೋಲು ಚಾನ್ಸೇ ಇಲ್ಲ.. ಒಟ್ಟಾರೆ ಒಂದೊಳ್ಳೆ ತಿಳಿತಂಗಾಳಿಯ ಲವ್ ಸ್ಟೋರಿ ಪ್ರೇಮಂ ಪೂಜ್ಯಂ.

News First Live Kannada


Leave a Reply

Your email address will not be published. Required fields are marked *