‘ಪ್ರೇಮಂ ಪೂಜ್ಯಂ’ ಚಿತ್ರವನ್ನ ಎದೆಗಪ್ಪಿಕೊಂಡು ಜೈ ಎಂದ ಕಾಲೇಜು ವಿದ್ಯಾರ್ಥಿಗಳು


ಯಾವುದೇ ಸಿನಿಮಾ ಆಗಿರಲಿ ಸಿನಿಮಾ ಗೆಲ್ಲಬೇಕಾ ಯುವಕರು ಆ ಸಿನಿಮಾವನ್ನ ನೋಡಬೇಕು; ಕಾಲೇಜು ವಿದ್ಯಾರ್ಥಿಗಳ ಮನಸು ಗೆಲ್ಲಬೇಕು ಆಗ್ಲೇ ನೋಡಿ ಸಿನಿಮಾಕ್ಕೆ ವಿನ್ನಿಂಗ್ ವಿಕ್ಟರಿಯ ಮಾಲೆ ಸಿಗೋದು. ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಚಿತ್ರಕ್ಕೆ ವಿದ್ಯಾರ್ಥಿಗಳ ಮೆಚ್ಚುಗೆ ಸಿಗುತ್ತಿದೆ.

ಒಳ್ಳೆಯ ಮನಸ್ಸಿನಿಂದ ಶ್ರಮ ಹಾಕಿ ಸಿನಿಮಾ ಮಾಡಿದರೆ ಕನ್ನಡಿಗರು ಯಾವತ್ತಿಗೂ ಕೈ ಬಿಡೋದಿಲ್ಲ. ಈ ಮಾತಿಗೆ ತಾಜಾ ಉದಾಹರಣೆ ಪ್ರೇಮಂ ಪೂಜ್ಯಂ ಸಿನಿಮಾ. ಒಂದೊಳ್ಳೆ ಕಥೆ ಜೊತೆಗೆ ಒಂದೊಳ್ಳೆಯ ಮೇಕಿಂಗ್​ನ್ನು ಹೊತ್ತು ತಂದ ‘ಪ್ರೇಮಂ ಪೂಜ್ಯಂ’ ಸಿನಿಮಾವನ್ನು ಚಿತ್ರಪ್ರೇಮಿಗಳು ಮನಸಾರೆ ಒಪ್ಪಿಕೊಂಡಿದ್ದಾರೆ. ಪ್ರೇಮಂ ಪೂಜ್ಯಂ ಸಿನಿಮಾವನ್ನು ಎಲ್ಲಾ ವಯೋಮಾನದವರು ನೋಡ್ತಿದ್ದಾರೆ.

ಅಂತು ಇಂತು ಲವ್ಲಿ ಸ್ಟಾರ್ ಪ್ರೇಮ್ ಅವರ ಎರಡು ವರ್ಷದ ಪರಿಶ್ರಮಕ್ಕೆ, ನಿರ್ದೇಶಕ ರಾಘವೇಂದ್ರ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಒಂದೊಳ್ಳೆ ಪ್ರತಿಫಲ ಸಿಕ್ಕಿದೆ..ಅಂದುಕೊಂಡಂತೆ ‘ಪ್ರೇಮಂ ಪೂಜ್ಯಂ’ ಸಿನಿಮಾವನ್ನು ಕನ್ನಡ ಚಿತ್ರ ಪ್ರೇಮಿಗಳು ಎದೆಗಪ್ಪಿ ಜೈ ಎಂದಿದ್ದಾರೆ..ಹೊಡಿ ಬಡಿ ಸಿನಿಮಾಗಳನ್ನು ನೋಡಿ ಬೇಸತ್ತಿದ್ದ ಸಿನಿ ಪ್ರೇಕ್ಷಕರಿಗೆ ‘ಪ್ರೇಮಂ ಪೂಜ್ಯಂ’ ಸಿನಿಮಾ ಒಂದೊಳ್ಳೆ ನವಿರಾದ ಪ್ರೇಮ ಕಥೆಯನ್ನು ನೀಡಿ ಮನಸ್ಸಿಗೆ ಮುದ ನೀಡುವಲ್ಲಿ ಯಶಸ್ವಿಯಾಗಿದೆ..ಅಲ್ಲದೆ ಪ್ರೇಮ್​ ಅವರ 25ನೇ ಸಿನಿಮಾ ಪ್ರೇಮ್​ ಗೆ ನೆನಪಲ್ಲಿ ಉಳಿಯುವಂತೆ ಮಾಡ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.

ಎರಡು ದಿನಗಳ ಹಿಂದೆ ಪ್ರೇಮಂ ಪೂಜ್ಯಂ ಚಿತ್ರವನ್ನ ಪ್ರೇಕ್ಷಕರಂತೆ ಡಾಕ್ಟರ್ಸ್​ಗಳು ಡಾಕ್ಟರ್ ಓದುತ್ತಿರುವವರು ಮೆಚ್ಚುತ್ತಿದ್ದಾರೆ ಅನ್ನೋ ಸಮಾಚಾರವನ್ನ ನಾವೇ ನಿಮಗೆ ಹೇಳಿದ್ವಿ.. ಈಗ ಕಾಲೇಜು ವಿದ್ಯಾರ್ಥಿಗಳು ಪ್ರೇಮಂ ಪೂಜ್ಯಂ ಸಿನಿಮಾವನ್ನ ಮೆಚ್ಚುತ್ತಿದ್ದಾರೆ.

ರಾಜ್ಯಾದ್ಯಂತ ಕಳೆದ 12ನೇ ತಾರೀಖು ತೆರೆಕಂಡ ಪ್ರೇಮಂ ಪೂಜ್ಯಂ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಲು ಪ್ರೇಕ್ಷಕರ ಸನಿಹಕೆ ಪ್ರೇಮಂ ಪೂಜ್ಯಂ ಸಿನಿಮಾ ತಂಡ ಯಾತ್ರೆ ಮಾಡುತ್ತಿದೆ. ರಾಜ್ಯದ ನಾನಾ ಭಾಗದ ಥಿಯೇಟರ್​ಗಳಿಗೆ ಅದ್ರಲೂ ಕಾಲೇಜುಗಳಿಗೆ ವಿಸಿಟ್ ಮಾಡ್ತಿರುವ ಪ್ರೇಮಂ ಪೂಜ್ಯಂ ತಂಡಕ್ಕೆ ವಿದ್ಯಾರ್ಥಿಗಳ ಅದ್ಧೂರಿ ಸ್ವಾಗತ ಸಿಗುತ್ತಿದೆ.

ರಾಜ್ಯದಲ್ಲಿ ಸುರಿಯುತ್ತಿರುವ ಸೈಕ್ಲೋನ್ ಮಳೆಯ ನಡುವೆಯೂ ಪ್ರೇಕ್ಷಕ ಮಹಾಶಯ ಪ್ರೇಮಂ ಪೂಜ್ಯಂ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ನೀಡುತ್ತಿದ್ದಾನೆ. ಇನೇನು ಕೆಲವೇ ದಿನಗಳಲ್ಲಿ ಸಕ್ಸಸ್ ಮಿಟ್ ಅನ್ನ ಪ್ರೇಮಂ ಪೂಜ್ಯಂ ತಂಡ ಮಾಡಲಿದೆ.

News First Live Kannada


Leave a Reply

Your email address will not be published. Required fields are marked *