‘ಪ್ರೇಮಂ ಪೂಜ್ಯಂ’ ಟ್ರೈಲರ್ ಲಾಂಚ್​​​ಗೆ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಾರಾ ‘ಅಸುರನ್​’?

ದಸರಾ ಹಬ್ಬಕ್ಕೆ ಸಲಗ ಸಿನಿಮಾ, ಕೋಟಿಗೊಬ್ಬ-3 ಸಿನಿಮಾ ಥಿಯೇಟರ್​ಗಳಲ್ಲಿ ದರ್ಬಾರ್ ಮಾಡೋಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ರೆ ‘‘ಪ್ರೇಮಂ ಪೂಜ್ಯಂ’’ ಸಿನಿಮಾ ತಂಡ ಕೂಡ ದೊಡ್ಡ ಮಟ್ಟಕ್ಕೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ನಮ್ಮತ್ತ ನೋಡವಂಗೆ ಮಾಡೋ ಕೆಲಸದಲ್ಲಿ ಪ್ಲಾನ್ ಮಾಡಿದೆ. ಧಾಮ್ ಧೂಮ್ ದಸರಾ ದರ್ಬಾರ್ ಮಾಡಲು ಸ್ಕೆಚ್ ಹಾಕಿದೆ. ಹಾಗಾದ್ರೆ ‘‘ಪ್ರೇಮಂ ಪೂಜ್ಯಂ’’ ತಂಡದ ಮುಂದಿನ ನಡೆಯೇನು.?

ಇವತ್ತು ಸಿನಿಮಾ ಮಾಡೋದು ಎಷ್ಟು ಮುಖ್ಯನೋ ಅಷ್ಟೇ ಮುಖ್ಯ ಸಿನಿಮಾವನ್ನ ಪ್ರಮೋಷನ್ ಮಾಡಿ ಪ್ರೇಕ್ಷಕರಿಗೆ ಮುಟ್ಟಿಸೋ ಕೆಲಸ. ಈ ಪ್ರಮೋಷನಲ್ ಕೆಲಸವನ್ನ ಸಿನಿಮಾ ನಿರ್ಮಾಣ ಮಾಡಿದಕ್ಕಿಂತು ಒಂದು ಕೈ ಜಾಸ್ತಿ ಶ್ರಮವಹಿಸಿ ಮಾಡ್ತಿದೆ ‘‘ಪ್ರೇಮಂ ಪೂಜ್ಯಂ’’ ಫಿಲ್ಮ್ ಟೀಮ್​. ಮಧುರ ಹಾಡುಗಳ ನಡುವೆ ಸುಂದರ ತಾಣಗಳ ಒಳೆಗೆ ಒಂದೊಳ್ಳೆ ಪ್ರೇಮ ಕಾವ್ಯವನ್ನ ಕನ್ನಡ ಪ್ರೇಕ್ಷಕರಿಗೆ ಮುಟ್ಟಿಸಲು ಈ ಸಿನಿಮಾ ತಂಡ ಭಕ್ತಿಯಿಂದ ಕೆಲಸ ಮಾಡ್ತಿದೆ.

‘ಪ್ರೇಮಂ ಪೂಜ್ಯಂ’.. ಲವ್ಲಿ ಸ್ಟಾರ್ ಪ್ರೇಮ್ ಅವರ 25ನೇ ಸಿನಿಮಾ.. ಪ್ರೇಮ್ ಕರಿಯರ್​​ ನಲ್ಲೇ ಇಷ್ಟರ ಮಟ್ಟಿಗೆ ಸದ್ದು ಯಾವ ಸಿನಿಮಾವೂ ಮಾಡಿಲ್ಲ ಅಷ್ಟು ದೊಡ್ಡ ಮಟ್ಟಕ್ಕೆ ಸೌಂಡ್ ಮಾಡ್ತಿದೆ ಪ್ರೇಮಂ ಪೂಜ್ಯಂ ಸಿನಿಮಾ. ‘ಪ್ರೇಮಂ ಪೂಜ್ಯಂ’ ಸಿನಿಮಾದ ನಿರ್ಮಾಣದ ಮಾಡಿರೋ Kedambadi Creations ಅದ್ದೂರಿಯಾಗಿ ಸಿನಿಮಾದ ಪ್ರಚಾರ ಕಾರ್ಯವನ್ನ ಮಾಡ್ತಿದೆ. ಈಗ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡೋ ಕಾರ್ಯದಲ್ಲಿ ಚಿತ್ರತಂಡ ನಿಂತಿದೆ.

‘‘ಪ್ರೇಮಂ ಪೂಜ್ಯಂ’’ ಹಿಂದೆ ಸೌಥ್ ಸೂಪರ್ ಸ್ಟಾರ್
ದಸರಾಕ್ಕೆ ದರ್ಬಾರ್ ಶುರು ಮಾಡಲಿರೋ ಪ್ರೇಮ್

ದಸರಾ ಹಬ್ಬಕ್ಕೆ ಸಲಗ ಸಿನಿಮಾ, ಕೋಟಿಗೊಬ್ಬ-3 ಸಿನಿಮಾ ಥಿಯೇಟರ್​ಗಳಲ್ಲಿ ದರ್ಬಾರ್ ಮಾಡೋಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ರೆ ‘‘ಪ್ರೇಮಂ ಪೂಜ್ಯಂ’’ ಸಿನಿಮಾ ತಂಡ ಕೂಡ ದೊಡ್ಡ ಮಟ್ಟಕ್ಕೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ನಮ್ಮತ್ತ ನೋಡವಂಗೆ ಮಾಡೋ ಕೆಲಸದಲ್ಲಿ ಪ್ಲಾನ್ ಮಾಡಿದೆ.. ಧಾಮ್ ಧೂಮ್ ದಸರಾ ದರ್ಬಾರ್ ಮಾಡಲು ಸ್ಕೆಚ್ ಹಾಕಿದೆ.

ಹಾಡುಗಳಿಂದ ಇಷ್ಟು ದಿನ ಸದ್ದು ಮಾಡಿರೋ ಲವ್ಲಿ ಸ್ಟಾರ್ ಪ್ರೇಮ್ ಅವರ ಈ ಸಿನಿಮಾ ಈಗ ಟ್ರೈಲರ್​​​ನಿಂದ ಸದ್ದು ಮಾಡಲು ಹೊಂಚು ಹಾಕಿದೆ.ಯಾರ ಬಳಿ ಅನ್ನೊದೆ ಸೂಪರ್ ಸಸ್ಪೆನ್ಸ್.. ಈಗಾಗಲೇ ಪ್ರೇಮ್ ಅವರ ನಾಯಕತ್ವದಲ್ಲಿ ಪ್ರೇಮಂ ಪೂಜ್ಯಂ ತಂಡವೇ ಹಾಲಿವುಡ್​​ ಲೆವಲ್​​ನಲ್ಲಿ ಫಿಲ್ಡ್ ಮಾರ್ಷಲ್ ಕೆ.ಎಮ್.ಕಾರ್ಯಪ್ಪನವರ ಜೀವನಗಾಥೆಯನ್ನ ಸಿನಿಮಾ ಮಾಡಲು ಹೊರಟಿರೋದು ನಿಮಗೆಲ್ಲ ಗೊತ್ತೆ ಇದೆ. ಪ್ರೇಮಂ ಪೂಜ್ಯಂ ಟ್ರೈಲರ್ ಅನ್ನು ದೊಡ್ಡ ಮಟ್ಟಕ್ಕೆ ದೊಡ್ಡ ವ್ಯಕ್ತಿಯ ಕೈಯಲ್ಲಿ ಲಾಂಚ್ ಮಾಡೋ ಯೋಚನೆ ಪ್ಲಸ್ ಆಲೋಚನೆಯ ಜೊತೆಗೆ ಕಾರ್ಯಪ್ರವೃತ್ತರಾಗಿದೆ. ಒಂದು ಮಾಹಿತಿಯ ಪ್ರಕಾರ ರಜಿನಿಕಾಂತ್ ಅವರ ಅಳಿಯ ಧನುಷ್ ಅವರಿಂದ ಟ್ರೈಲರ್ ಲಾಂಚ್ ಮಾಡಿಸೋ ಯೋಜನೆಯಲ್ಲಿ ಚಿತ್ರತಂಡವಿದೆ.

The post ‘ಪ್ರೇಮಂ ಪೂಜ್ಯಂ’ ಟ್ರೈಲರ್ ಲಾಂಚ್​​​ಗೆ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಾರಾ ‘ಅಸುರನ್​’? appeared first on News First Kannada.

News First Live Kannada

Leave a comment

Your email address will not be published. Required fields are marked *