ಪ್ರೇಮಂ, ಪೂಜ್ಯಂ ಸಿನಿಮಾ ಅಪ್ಪುವಿಗೆ ಅರ್ಪಣೆ


ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯಿಂದ ಇಡೀ ಚಿತ್ರರಂಗ ಶೋಕ ಸಾಗರದಲ್ಲಿದೆ.. ಆದ್ರೆ ಏನ್ ಮಾಡೋದು ಜೀವನವನ್ನ ಬಂದಂಗೆ ಸ್ವೀಕರಿಸಲೇ ಬೇಕು.. ಹೊದವರೆಲ್ಲ ಒಳ್ಳೆಯವರು ಹರಸೋ ಹಿರಿಯರು ಎಂದು ಮುಂದೇ ಸಾಗಲೇ ಬೇಕು.. ಸ್ಯಾಂಡಲ್​​ವುಡ್​​ನಲ್ಲಿ ಪ್ರೇಮದ ಹಬ್ಬವನ್ನ ಮಾಡಲು ಬರುತ್ತಿರುವ ಪ್ರೇಮಂ ಪೂಜ್ಯಂ ಸಿನಿಮಾವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಸಮರ್ಪಿಸಿದೆ ಚಿತ್ರತಂಡ..

ಇವತ್ತಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ 12 ದಿನವಾಯ್ತು.. ಸ್ವಾರಿ ಪುನೀತ್ ಅಗಲಿ ಅಲ್ಲ ಪುನೀತ್ ಎಲ್ಲರ ಮನದಲ್ಲಿ ಶಾಶ್ವತವಾಗಿ ಹುಟ್ಟಿ ಇಂದಿಗೆ 12 ದಿನವಾಯ್ತು.. ಕನ್ನಡ ನಾಡಿನ ಪ್ರಪಂಚ ಹಾಗೂ ಕನ್ನಡಿಗರ ಮನಸಿನ ಪ್ರಪಂಚ ಈ ಎರಡು ಪ್ರಪಂಚದಲ್ಲೂ ಈಗ ಪುನೀತ್ ರಾಜ್ ಕುಮಾರ್ ಚಿರಾಯುವಾಗಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸ್ನೇಹ ಕೋಟೆಯಲ್ಲಿ ಬೆಚ್ಚಗೆ ಇದ್ದವರಲ್ಲೊಬ್ಬರು ಲವ್ಲಿ ಸ್ಟಾರ್ ಪ್ರೇಮ್​​.. ಅಪ್ಪು ಅಗಲಿಕೆ ಸಹಿಲಾದ ನೋವನ್ನ ಪ್ರೇಮ್​​ ಅವರಿಗೆ ನೀಡಿದೆ.. ಪ್ರೇಮ್ ಗಿಂತ ಒಂದು ಕೈ ಜಾಸ್ತಿ ಪ್ರೇಮ್ ಅವರ ಮಗಳಿಗೆ ಅಪ್ಪು ಸಾವು ಸಹಿಸಲಾದ ನೋವನ್ನ ತಂದಿದೆ ಅಂತೆ.. ಈ ವಿಚಾರವನ್ನ ಪ್ರೇಮ್ ಅವರಿಂದಲೇ ಹೇಳಿಸೋ ಮೊದಲು ಪ್ರೇಮಂ ಪೂಜ್ಯಂ ತಂಡ ತಮ್ಮ ಸಿನಿಮಾವನ್ನ ಅಪ್ಪು ಅವರಿಗೆ ಅರ್ಪಿಸುತ್ತಿರೋ ವಿಚಾರವನ್ನ ತೋರಿಸಿ ಬಿಡ್ತಿವಿ ನೋಡಿ ಚಿತ್ರಪ್ರೇಮಿಗಳೇ..

ಅಗಲಿದ ಅಪ್ಪು ನೆನೆದು ಭಾವುಕ ಪ್ರೇಮಂ ಪೂಜ್ಯಂ
ಪ್ರೇಮಂ ಪೂಜ್ಯಂ ತಂಡದಿಂದ ಅಪ್ಪುಗೆ ಭಾವ ನಮನ
ಇಂದು ಬಹು ದಿನಗಳ ನಂತರ ಮಾಧ್ಯಮಗಳ ಮುಂದೆ ಹಾಜಾರಾಗಿತ್ತು ಪ್ರೇಮಂ ಪೂಜ್ಯಂ ಸಿನಿಮಾ ತಂಡ.. ಈ ಶುಭ ಶುಕ್ರವಾರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಪ್ರೇಮಂ ಪೂಜ್ಯಂ ಸಿನಿಮಾ ಅಪ್ಪು ಅಗಲಿಕೆಯ ನೋವಿನಲ್ಲಿ ಪ್ರಚಾರದ ಕಹಳೆಯನ್ನ ಮೊಳಗಿಸಿರಲಿಲ್ಲ.. ಆದ್ರೇ ಏನ್ ಮಾಡೋದು ಲೈಫ್ ಮಸ್ಟ್ ಗೋ ಆನ್ ಅನ್ನುವಂತೆ ಎಲ್ಲವೂ ಟೈಮ್ ಟೈಮ್ ಆಗಲೇ ಬೇಕು.. ಈ ವಾರ ಪ್ರೇಕ್ಷಕರ ಮುಂದೆ ಪ್ರೇಮದ ಹಬ್ಬ ಮಾಡಲು ಪ್ರೇಮಂ ಪೂಜ್ಯಂ ಸಿನಿಮಾ ಬರುತ್ತಿದೆ.. ಜೊತೆಗೆ ಈ ಸಿನಿಮಾವನ್ನ ಅಪ್ಪು ಅವರಿಗೆ ಸಮರ್ಪಿಸುತ್ತಿದೆ.

ಪ್ರೇಮಂ ಪೂಜ್ಯಂ ಸಿನಿಮಾ ಅಪ್ಪು ಅವರಿಗೆ ಅರ್ಪಣೆ
ಪ್ರೇಮ್ ಅವರ ಮಗಳು ಅಪ್ಪು ಅವ್ರ ಬಿಗ್ ಫ್ಯಾನ್
ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರೇಮಂ ಪೂಜ್ಯಂ ಸಿನಿಮಾ ಅರ್ಪಿಸಲು ಚಿತ್ರತಂಡ ನಿರ್ಧರಿಸಿದೆ.. ಲವ್ಲಿ ಸ್ಟಾರ್ ಪ್ರೇಮ್ ನಟನೆಯ 25ನೇ ಸಿನಿಮಾವನ್ನ ಎಲ್ಲರನ್ನ ಅಗಲಿದ ನಟ ಪ್ರೇಮ್ ಅವರಿಗೆ ಅರ್ಪಿಸಿದೆ ಚಿತ್ರತಂಡ.. ಇಂದು ಮಾಧ್ಯಮಗೋಷ್ಠಿ ಕರೆದಿದ್ದ ಪ್ರೇಮಂ ಪೂಜ್ಯಂ ಸಿನಿಮಾ ತಂಡ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರಕ್ಕೆ ಪುಪ್ಪಾರ್ಚನೆ ಮಾಡುವುದ್ರ ಮೂಲ ಭಾವ ಪೂರ್ಣ ನಮನವನ್ನ ಅರ್ಪಿಸಿದೆ.

ಲವ್ಲಿ ಸ್ಟಾರ್ ಪ್ರೇಮ್ ಅವರ 25ನೇ ಸಿನಿಮಾ ಇದು.. ವೈದ್ಯರಿಂದ ವೈದ್ಯರಿಗಾಗಿ ವೈದ್ಯರಿಗೋಸ್ಕರ್ ಮಾಡಿರೋ ಈ ಸಿನಿಮಾವನ್ನ ಡಾ.ರಾಘವೇಂದ್ರ ಬಿ.ಎಸ್ ಅವರು ಕಥೆ ಬರೆದು ಸಂಗೀತ ಸಾಹಿತ್ಯದ ಜೊತೆಗೆ ನಿರ್ದೇಶವನ್ನ ಮಾಡಿದ್ದಾರೆ. ಈಗಾಗಲೇ ಹಾಡು ಮತ್ತು ಟ್ರೈಲರ್​​ನಿಂದ ಚಿತ್ರಪ್ರೇಮಿಗಳ ಮನಸು ಗೆದ್ದಿರುವ ಪ್ರೇಮಂ ಪೂಜ್ಯಂ ಈ ವಾರ ಪ್ರೇಕ್ಷಕರ ಮುಂದೆ ತನ್ನ ರಂಜನೆಯ ರಂಗಾವಲಿಯನ್ನ ಬಿಡಿಸಲಿದೆ.

News First Live Kannada


Leave a Reply

Your email address will not be published. Required fields are marked *