ಪ್ರೇಮಿಗಳಿಗೆ ಸಿಹಿ ಸುದ್ದಿ; ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಇಲ್ಲ | Entry of Nandi Hills is not restricted on Valentines Day in Chikkaballapur


ಪ್ರೇಮಿಗಳಿಗೆ ಸಿಹಿ ಸುದ್ದಿ; ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಇಲ್ಲ

ನಂದಿ ಬೆಟ್ಟ

ಚಿಕ್ಕಬಳ್ಳಾಪುರ: ಫೆಬ್ರವರಿ ತಿಂಗಳು ಬಂತೆಂದರೆ ಸಾಕು ಪ್ರೇಮಿಗಳಿಗೆ (Lovers) ಖುಷಿಯೋ ಖುಷಿ. ಫೆಬ್ರವರಿ 7ರಿಂದ ಆರಂಭವಾಗುವ ಸಂಭ್ರಮ ನಾಳೆ ಅಂದರೆ ಫೆಬ್ರವರಿ 14ರ ವರೆಗೆ ಇರುತ್ತದೆ. ಇನ್ನು ಪ್ರೇಮಿಗಳಿಗೆ ಹಾಟ್ ಸ್ಪಾಟ್ ಸ್ಥಳವೆಂದರೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ. ಸಾಮಾನ್ಯವಾಗಿ ನಂದಿ ಬೆಟ್ಟಕ್ಕೆ (Nandi Hills) ಜೋಡಿಗಳು ಆಗಮಿಸುತ್ತಿರುತ್ತವೆ. ಅದರಲ್ಲೂ ಪ್ರೇಮಿಗಳ ದಿನದಂದು ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ನಂದಿಗಿರಿಧಾಮದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಚಿಕ್ಕಬಳ್ಳಾಪುರ ಎಸ್​ಪಿ ಜಿಕೆ ಮಿಥುನ್ ಕುಮಾರ್, ನಂದಿಗಿರಿಧಾಮಕ್ಕೆ ಬರುವ ಪ್ರೇಮಿಗಳ ಪಯಣಕ್ಕೆ ನಿರ್ಬಂಧ ಇಲ್ಲ. ಪ್ರೇಮಿಗಳ ದಿನಾಚರಣೆಯಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೈ ಅಲರ್ಟ್ ಮಾಡಲಾಗಿದೆ. ನಂದಿಗಿರಿಧಾಮ ಪೊಲೀಸರಿಂದ ಗಿರಿಧಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಅಂತ ಮಾಹಿತಿ ನೀಡಿದರು.

ಡಿಸೆಂಬರ್-ಜನವರಿ ಚುಮುಚುಮು ಚಳಿಯಲ್ಲಿ ನಂದಿ ಬೆಟ್ಟ ಹತ್ತಿ ಅಲ್ಲಿನ ಸೂರ್ಯೋದಯದ ಸೊಬಗನ್ನು ಸವಿಯುವುದೇ ಒಂದು ಭಾಗ್ಯ. ಬಹುತೇಕ ಪ್ರವಾಸಿಗರು, ಚಾರಣಿಗರು ಇಂತಹ ಅವಕಾಶಕ್ಕಾಗಿ ಕಾದು ಕುಳಿತ್ತಿರುತ್ತಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರ್ದಾಕ್ಷಿಣ್ಯವಾಗಿ ಇಂತಹ ಅವಕಾಶವನ್ನು ಕಸಿದುಕೊಂಡಿತ್ತು. ಬೆಟ್ಟ ಹತ್ತಿ ಬರಲು ಪ್ರವಾಸಿಗರಿಗೆ ಬಿಲ್ಕುಲ್​ ಬೇಡಾ ಎಂದಿತ್ತು. ಆದರೆ ನಾಳೆ ಯಾವುದೇ ನಿರ್ಬಂಧ ಹೇರಿಲ್ಲ ಅಂತ ಎಸ್​ಪಿ ಜಿಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ.

TV9 Kannada


Leave a Reply

Your email address will not be published.