ಫೆಬ್ರವರಿ 14 ವ್ಯಾಲೆಂಟೈನ್ ಡೇ. ಪ್ರೇಮಿಗಳಿಗಾಗಿಯೇ ಈ ದಿನ ರಿಸರ್ವ್ ಅಗೋಗಿದೆ. ಲವ್ ಮಾಡೋರು, ಲವ್ ಮಾಡೋಕೆ ಹೊರಟವರು, ಲವ್ ಹೇಳೋರು ಎಲ್ಲರಿಗೂ ಇದೊಂದು ಸ್ಪಷೆಲ್ ಡೇ. ಈ ವಿಶೇಷ ದಿನಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ಗೆ ಒಲವಿನ ಉಡುಗೊರೆ ಸಿಕ್ಕಿದೆ. ರಚ್ಚು ಸ್ಟಿಲ್ ಸಿಂಗಲ್ ಅಲ್ವಾ? ಹೊಸ ಪದ್ಮಾವತಿಗೆ ಉಡುಗೊರೆ ಕೊಟ್ಟಿದ್ದು ಯಾರು ಅಂತ ತುಂಬಾ ಥಿಂಕ್ ಮಾಡಬೇಡಿ..
ಪ್ರೇಮಿಗಳ ದಿನಕ್ಕೆ ರಚ್ಚುಗೆ ಸಿಕ್ತು ಒಲವಿನ ಉಡುಗೊರೆ
ಡಿಂಪಲ್ಗೆ ಸತೀಶ್ ನೀನಾಸಂ ಕೊಟ್ಟ ಅ ಗಿಫ್ಟ್ ಏನು?
ಸತೀಶ್ ನೀನಾಸಂ ಲವ್ಸ್ ರಚಿತಾ ರಾಮ್. ವ್ಯಾಲೆಂಟೈನ್ ಡೇ ವಿಶೇಷವಾಗಿ ಸತೀಶ್, ರಚಿತಾ ರಾಮ್ ಗೆ ತಮ್ಮ ಲವ್ ಎಕ್ಸ್ಪ್ರೆಸ್ ಮಾಡಿದ್ದು, ಪ್ರೀತಿಯ ಸಂಕೇತವಾಗಿ ಸ್ಪೆಷಲ್ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಸ್ಪೆಷಲ್ ಗಿಫ್ಟ್ ಅಂದ್ರೆ ರಚ್ಚು ಕಾಲಿಗೆ ಕಾಲ್ಗೆಜ್ಜೆ ತೊಡಿಸಿದ್ದಾರೆ. ಅರೇ, ಇದು ರಿಯಲ್ ಲವ್ ಅಲ್ಲಾ ರೀ. ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಗಿರುವ ಮ್ಯಾಟ್ನಿ ಸಿನಿಮಾದ ಟೀಸರ್ ಹೈಲೈಟ್.
ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಎರಡನೇ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಚಿತ್ರ ಮ್ಯಾಟ್ನಿ. ವ್ಯಾಲೆಂಟೈನ್ ಡೇ ವಿಶೇಷವಾಗಿ ಈ ಚಿತ್ರದ ಫಸ್ಟ್ ಝಲಕ್ ಬಂದಿದೆ. ಮೊದಲ ನೋಟದಲ್ಲೇ ರಚ್ಚು ಮತ್ತು ಸತೀಶ್ ಜೋಡಿ ಮೋಡಿ ಮಾಡಿದೆ. ಜೊತೆಗೆ ಟೀಸರ್ನಲ್ಲೊಂದು ಮುದ್ದಾದ ಕವಿತೆಯಿದ್ದು, ಇದು ಪ್ರೇಮಿಗಳ ಪಾಲಿಗೆ ಲವ್ ಸ್ಲೋಗನ್ ಆಗಬಹುದು.