ನವದೆಹಲಿ: ದೆಹಲಿಯ ಕೆಂಪು ಕೋಟೆ ಸಂಕೀರ್ಣದಲ್ಲಿ ನಡೆದ ಹಿಂಸಾಚಾರ ಪ್ರಕರಣದ ಆರೋಪಿ ನಟ ಮತ್ತು ಸಾಮಾಜಿಕ ಹೋರಾಟಗಾರ ದೀಪ್ ಸಿಧು ನಿಧನರಾಗಿದ್ದಾರೆ.
ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಟ ಸಾವಿಗೀಡಾಗಿದ್ದಾರೆ. ಪ್ರೇಮಿಗಳ ದಿನದಂದು ದೀಪ್ ಸಿಧು ತನ್ನ ಪ್ರೇಯಸಿಯೊಂದಿಗೆ ವ್ಯಾಲೆಂಟೈನ್ ಡೇ ಸೆಲಬ್ರೇಟ್ ಮಾಡಿದ್ದರು. ದುರಂತ ಎಂಬಂತೆ ನಿನ್ನೆ ಅಪಘಾತದಲ್ಲಿ ದುರ್ಮರಣ ಕಂಡಿದ್ದಾರೆ.
ಕಳೆದ ವರ್ಷ ಜನವರಿ 26ರಂದು ಪ್ರತಿಭಟನಾಕಾರರು ಟ್ರ್ಯಾಕ್ಟರ್ ಱಲಿಗೆ ತಾವು ಒಪ್ಪಿದ ಮಾರ್ಗಗಳನ್ನು ಬಿಟ್ಟು ದೆಹಲಿ ಪ್ರವೇಶಿಸಿದ್ದರು. ಕೆಂಪು ಕೋಟೆಗೆ ನುಗ್ಗಿ ದಾಂಧಲೆ ಮಾಡಿದ್ದರು. ರೈತರನ್ನು ದಾರಿ ತಪ್ಪಿಸಿ ಕೆಂಪುಕೋಟೆ ಕಡೆಗೆ ಕರೆದೊಯ್ದು ಘರ್ಷಣೆಗೆ ಕಾರಣವಾದರು ಎಂಬ ಆರೋಪ ದೀಪ್ ಸಿಧು ಅವರ ಮೇಲಿತ್ತು.