ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರದ “ಹೇಳು ಯಾಕೆ’ ಹಾಡು ಯುಗಾದಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಆ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆ ಯುವ ಮೂಲಕ ಮೂರು ಮಿಲಿಯನ್‌ ಹಿಟ್ಸ್‌ ಪಡೆದುಕೊಂಡಿದೆ. ಇದು ಪ್ರೇಮ್‌ ಅವರಿಗೆ ಖುಷಿ ಕೊಟ್ಟಿದೆ. ಈ ಯಶಸ್ಸಿಗೆ ಕಾರಣರಾದವರಿಗೆ ಪ್ರೇಮ್‌ ಧನ್ಯವಾದ ತಿಳಿಸಿದ್ದಾರೆ.

ಈ ಹಾಡನ್ನು ಸ್ವತಃ ಪ್ರೇಮ್‌ ಬರೆದು ಹಾಡಿದ್ದರು. ಈಗಾಗಲೇ ಅನೇಕ ಸಿನಿಮಾಗಳು ಕನ್ನಡದ ಜೊತೆಗೆ ಪರಭಾಷೆಯಲ್ಲೂ ತಯಾರಾಗುತ್ತಿದೆ. ಈ ಸಾಲಿಗೆ ಈಗ ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರ ಕೂಡಾ ಸೇರಿದೆ. “ಏಕ್‌ ಲವ್‌ ಯಾ’ ಚಿತ್ರ ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ತಯಾರಾಗುತ್ತಿದ್ದು, ಚಿತ್ರದ ಹಾಡನ್ನು ಕೂಡಾ ಆಯಾಯ ಭಾಷೆಯಲ್ಲಿ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ದೃಶ್ಯವೊಂದಕ್ಕಾಗಿ ರಾಜ್‌ ಕುಮಾರ್ ಎಂಟು ಗಂಟೆ ಕದಲದೇ ನಿಂತೇ ಇದ್ದರು!

ಇನ್ನು “ಏಕ್‌ ಲವ್‌ ಯಾ’ ಚಿತ್ರದಲ್ಲಿ ನಟಿ ರಕ್ಷಿತಾ ಸೋದರ ರಾಣಾ ನಾಯಕ ನಟನಾಗಿ ಸ್ಯಾಂಡಲ್‌ ವುಡ್‌ಗೆ ಪರಿಚಯವಾಗುತ್ತಿದ್ದು, ಚಿತ್ರದಲ್ಲಿ ರಚಿತಾ ರಾಮ್‌ ನಟಿಸಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More