ಪ್ರೇಮ್ ಏನು ದೊಡ್ಡ ಪುಡಾಂಗಾ..? ಎರಡು ಕೊಂಬಿದ್ಯಾ..? -ಕೆಂಡವಾದ ದರ್ಶನ್

ಪ್ರೇಮ್ ಏನು ದೊಡ್ಡ ಪುಡಾಂಗಾ..? ಎರಡು ಕೊಂಬಿದ್ಯಾ..? -ಕೆಂಡವಾದ ದರ್ಶನ್

ಬೆಂಗಳೂರು: ನಟ ದರ್ಶನ್ ವಿರುದ್ಧ ಕೇಳಿಬಂದ ಹಲವು ಆರೋಪಗಳಿಗೆ ಸಂಬಂಧಿಸಿದಂತೆ ಇಂದು ಮೈಸೂರಿನ ತಮ್ಮ ಫಾರ್ಮ್ ಹೌಸ್ ಬಳಿ ದರ್ಶನ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ದೊಡ್ಮನೆ ಆಸ್ತಿ ವಿಚಾರವಾಗಿ ಪ್ರಸ್ತಾಪಿಸಿದ ದರ್ಶನ್.. ಉಮಾಪತಿಯವ್ರು 2016 ರಿಂದ ನನಗೆ ಪರಿಚಯ.. ಉಮಾಪತಿ ಮತ್ತು ಪ್ರೇಮ್ ನಮ್ಮ ಮನೆಗೆ ಬಂದ್ರು.. ಅವತ್ತು ಮೂರೂ ಜನ ಕೂತು ಮಾತಾಡಿದ್ವಿ. ಹೊರಗಡೆ ಬಂದ ತಕ್ಷಣ ಒಂದು ಮ್ಯಾಟ್ರು ಬಂತು ಎಂದರು.

ತಾರಕ್​ನ ಪ್ರೆಸ್​ಮೀಟ್​ನಲ್ಲಿ ನಾನೊಂದು ಮಾತು ಹೇಳಿದ್ದೆ.. ನಾನು ಯಾವುದೇ ಕಾರಣಕ್ಕೂ 70 ದಿನದ ಮೇಲೆ ಡೇಟ್ಸ್ ಕೊಡಲ್ಲ ಅಂತ ಹೇಳಿದ್ದೆ,.. ಅಮೇಲೆ ದರ್ಶನ್ ಅವರು ಪ್ರೇಮ್ ಸಿನಿಮಾದಲ್ಲಿ 100 ದಿನ ಮಾಡ್ತಿದ್ದಾರೆ ಅಂತ ಬಂತು.. ನಾನು ಕರೆದೆ.. ನಿರ್ಮಾಪಕರೇ.. ಇದ್ಯಾರು ಹೊರಗಡೆ ಬಿಟ್ಟಿದ್ದು ಅಂತ ಕೇಳಿದೆ.. ಗೊತ್ತಿಲ್ಲ ಅಂದ್ರು. ಪ್ರೇಮ್ ಗೋಸ್ಕರ ದರ್ಶನ್ ಅಂತ ಹೇಳ್ತಾ ಇದ್ರು.. ಪ್ರೇಮ್ ಏನು ದೊಡ್ಡ ಪುಡಾಂಗಾ..? ಎರಡು ಕೊಂಬೈತಾ..? ನಾವೂ ನೋಡಿದ್ದೇವೆ ಪ್ರೇಮ್​ದು ಏನು ಅಂತಾ.. ಒಬ್ಬೊಬ್ಬರ ಹೆಸರೂ ತೆಗೋತಾ ಇದ್ರೆ.. ನಾವೂ ಸ್ವಲ್ಪ ರೊಚ್ಚಿಗೇಳೋಣ ಅಂತ.. ನಾನು ಇದನ್ನ ಮಾಡಲ್ಲ ಅಂದೆ. ಅವಾಗವಾಗ ಹೋಗೋದು ಬರೋರು ಅಷ್ಟೇ ಇದ್ದದ್ದು ನಮಗೂ ಅವರಿಗೂ ಎಂದರು.

ಅದಾದ ಮೇಲೆ 18 ಕ್ಕೆ ಬಂದ್ರು.. ಪುನೀತ್ ರಾಜ್ ಕುಮಾರ್​ದು ಒಂದು ಆಸ್ತಿ ತಗೊಂಡಿದ್ದೇನೆ ಅಂದ್ರು. ಹೌದಾ ಗುಡ್ ಅಂಡ್ ಫೈನ್ ಅಂದೆ. ಅವರೇ ಬಾಯ್ಬಿಟ್ಟು ಹೇಳಿದ್ದು.. ಯಾಕಂದ್ರೆ ಅವರೇ ಅಡ್ವಾನ್ಸ್ ಕೊಟ್ಟಿದ್ದಂತೆ. ಅಪ್ಪು ಅವರಿಗಾಗಲಿ ರಾಘಣ್ಣನಿಗಾಗಲಿ ಇದಕ್ಕೆ ಸಂಬಂಧ ಇಲ್ಲ. ಅಪ್ಪು ಸಿನಿಮಾದಲ್ಲಿ ಪಾರ್ವತಮ್ಮನವರ ಕನ್ನಿಂಗ್​ಹ್ಯಾಮ್ ರೋಡ್​ನಲ್ಲಿ ಎರಡು ಫ್ಲೋರ್ ರಿಜಿಸ್ಟರ್ ಮಾಡಿಕೊಂಡು ಬಂದೆ ಅಂತ ಹೇಳಿದ್ರು. ನಿಮಗೇನಾದ್ರೂ ಕೊಡೋ ಐಡಿಯಾ ಇದ್ರೆ ನಿರ್ಮಾಪಕರೇ ಅಂತ ಹೇಳಿದ್ದೆ. ಇವತ್ತು ಅವ್ರು ದರ್ಶನ್ ಕೇಳಿದ್ರು ನಾನು ಕೊಡಲ್ಲ ಅಂದೆ ಎಂದಿದ್ದಾರೆ. ನನ್ನ ದುಡ್ಡು ನಿಮ್ಮತ್ರ ಇದ್ಯಲ್ಲ ನಿರ್ಮಾಪಕರೇ ಅದ್ರಲ್ಲೇ ಕಟ್ ಮಾಡಿಕೊಂಡು ಕೊಡಿ ಅಂದೆ. ಅದನ್ನ ಕೊಡಲ್ಲ ಅಂದ್ರೆ ಒಂದೂವರೆ ಎರಡು ವರ್ಷದಿಂದ ಅವರ ಬಾಡಿಗೆಯನ್ನ ನನಗೇಕೆ ತಂದುಕೊಡ್ತಾ ಇದ್ರು..? ಎಂದು ಪ್ರಶ್ನಿಸಿದರು.

The post ಪ್ರೇಮ್ ಏನು ದೊಡ್ಡ ಪುಡಾಂಗಾ..? ಎರಡು ಕೊಂಬಿದ್ಯಾ..? -ಕೆಂಡವಾದ ದರ್ಶನ್ appeared first on News First Kannada.

Source: newsfirstlive.com

Source link