ದರ್ಶನ್ ಪ್ರೇಮ್ ಹೆಸರು ಉಲ್ಲೇಖಿಸಿ.. ಪ್ರೇಮ್ ಏನೂ ಪುಡಾಂಗು ಅಲ್ಲ ಎಂಬ ಹೇಳಿಕೆಗೆ ಪ್ರೇಮ್ ಪತ್ನಿ, ನಟಿ ರಕ್ಷಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪೋಸ್ಟ್ ಹಾಕಿರುವ ರಕ್ಷಿತಾ.. ಯಾರಾದ್ರೂ ಒಬ್ಬರು ಇನ್ನೊಬ್ಬರ ನಡೆಯ ಬಗ್ಗೆ ಮಾತನಾಡುವಾಗ ತಾವು ತಮ್ಮ ಸ್ವಂತ ಬದುಕಿನಲ್ಲಿ ಏನು ಮಾಡ್ತಿದ್ದಾರೆ ಅನ್ನೋದನ್ನ ನೋಡಿಕೊಳ್ಳಬೇಕು.. ಜನರ ಎದುರಿಗೆ ಏನು ಮಾತಾಡುತ್ತಿದ್ದೇವೆ.. ಯಾವಾಗ ಮಾತಾಡುತ್ತಿದ್ದೇವೆ ಎಂಬುದು ಗೊತ್ತಿರುವುದು ಮುಖ್ಯವಾಗುತ್ತದೆ ಎಂದು ರಕ್ಷಿತಾ ಪ್ರೇಮ್ ಅಸಮಾಧಾನ ಹೊರಹಾಕಿದ್ದಾರೆ. ರಕ್ಷಿತಾ ಪ್ರೇಮ್ ಅವರು ದರ್ಶನ್ ಅವರ ಹಲವು ಸಿನಿಮಾಗಳಲ್ಲಿ ಹೀರೋಯಿನ್ ಪಾತ್ರದಲ್ಲಿ ನಟಿಸಿದ್ದಾರೆ.

The post “ಪ್ರೇಮ್ ದೊಡ್ಡ ಪುಡಾಂಗಾ..?” ದರ್ಶನ್ ಹೇಳಿಕೆಗೆ ಅಸಮಾಧಾನ ಹೊರಹಾಕಿದ ರಕ್ಷಿತಾ appeared first on News First Kannada.

Source: newsfirstlive.com

Source link