ಪ್ರೇಮ್ ನಿರ್ದೇಶನದ ‘ಐ ಲವ್​ ಯೂ’ ಸಿನಿಮಾ ಸಂಗೀತ ನಿರ್ದೇಶಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್

ಪ್ರೇಮ್ ನಿರ್ದೇಶನದ ‘ಐ ಲವ್​ ಯೂ’ ಸಿನಿಮಾ ಸಂಗೀತ ನಿರ್ದೇಶಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್

ಪ್ರೇಮ್ ನಿರ್ದೇಶನದ ಐ ಲವ್​ ಯೂ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ಮೇಲೆ ದಾಳಿ ನಡೆದಿದೆ. ನಿನ್ನೆ ಮಧ್ಯರಾತ್ರಿ 2.30 ರ ಸುಮಾರಿಗೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮಾರುತಿ ಸ್ವಿಫ್ಟ್ ಕಾರ್​ನಲ್ಲಿ ಬಂದ ಐವರು ದುಷ್ಕರ್ಮಿಗಳು ಏಕಾಏಕಿ ಮ್ಯೂಸಿಕ್ ಡೈರೆಕ್ಟರ್ ಡಾ. ಕಿರಣ್ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಆರ್ ಆರ್ ನಗರದ ಗೆಳೆಯರ ಮನೆಯಲ್ಲಿ ಉಸಿರು ತಂಡದ ವತಿಯಿಂದ ಸಂಚಾರಿ ವಿಜಯ್ ಬರ್ತ್ ಡೇ ಸೆಲೆಬ್ರೇಷನ್ ಮುಗಿಸಿ ವಾಪಸ್ಸಾಗ್ತಿದ್ದ ವೇಳೆ ಫಾಲೋ ಮಾಡಿ ರಾಡ್​​ನಿಂದ ಅಟ್ಯಾಕ್ ಮಾಡಿದ್ದಾರಂತೆ. ಘಟನೆಯಲ್ಲಿ ಡಾ. ಕಿರಣ್​ರ ತಲೆಯ ಹಿಂದೆ ಸಣ್ಣ ಗಾಯವಾಗಿದ್ದು ದಾಳಿಗೆ ಸಂಬಂಧಿಸಿದಂತೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಪ್ರೇಮ್ ನಿರ್ದೇಶನದ ‘ಐ ಲವ್​ ಯೂ’ ಸಿನಿಮಾ ಸಂಗೀತ ನಿರ್ದೇಶಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್ appeared first on News First Kannada.

Source: newsfirstlive.com

Source link