ಗೋಲ್​ಗಪ್ಪಾ, ಪಾನಿ ಪುರಿ, ಮಸಾಲ್​ ಪುರಿ, ಸೇವ್ ಪುರಿ, ದಹಿ ಪುರಿ, ಆಲೂ ಪುರಿ ಹೀಗೆ ವಿವಿಧ ಬಗೆಯ ಚಾಟ್ಸ್​ಗೆ ದೇಶದಲ್ಲಿ ಭಾರೀ ಬೇಡಿಕೆ ಇದೆ. ಈ ಸ್ನ್ಯಾಕ್​​ಗೆ ಭಾರತ ಮಾತ್ರವಲ್ಲ ಬಾಂಗ್ಲಾದೇಶ, ಪಾಕಿಸ್ತಾನದಲ್ಲೂ ಡಿಮ್ಯಾಂಡ್ ಇದೆ.

ಅದ್ರಲ್ಲೂ ಇದನ್ನ ಹೆಣ್ಮಕ್ಕಳು ತುಂಬಾನೇ ಇಷ್ಟ ಪಡ್ತಾರೆ. ಸಂಜೆಯಾದ್ರೆ ಸಾಕು, ಚಾಟ್ಸ್​ ಅಂಗಡಿಗಳ ಮುಂದೆ ಕ್ಯೂ ಹಚ್ಚಿ ನಿಂತಿರ್ತಾರೆ. ‘ಪಾನಿ ಪುರಿ ಅಂದ್ರೆ ನಂಗೆ ಪ್ರಾಣ’ ಎನ್ನುವ ಜನಗಳಿಗೇನೂ ಕಮ್ಮಿ ಇಲ್ಲ. ಅದೇನೇ ಇರಲಿ, ಈ ಪಾನಿಪುರಿ ಅಂಗಡಿಗಳು ಕೂಡ ಸಂಬಂಧಗಳನ್ನ ಬೆಳೆಸುವ ಅಡ್ಡೆಯಾಗಿಬಿಟ್ಟಿವೆ.

ಐಡಿಯಾ ಮೇಲೆ ಲವ್​ ಆಗಿದೆ ಎಂದ ಜನ
ಒಬ್ಬರನ್ನೊಬ್ಬರು ನೋಡಿಕೊಳ್ಳುವ ಮೂಲಕ ಆಗುವ ಪರಿಚಯ ಮುಂದೊಂದು ದಿನ ಸ್ನೇಹ, ಪ್ರೀತಿ, ಮದುವೆವರೆಗೆ ಬಂದು ನಿಲ್ಲುತ್ತೆ. ಅಷ್ಟರ ಮಟ್ಟಿಗೆ ಈ ಚಾಟ್ಸ್​ ಅಡ್ಡಾಗಳು ಸಂಬಂಧಗಳ ಬೆಸುಗೆ ಮಾಡುತ್ತವೆ. ಇದೀಗ ನಾವು ವಿಷ್ಯವನ್ನ ಹೇಳಲೇಬೇಕು, ಪಾನಿಪುರಿ ಇಷ್ಟಪಡುವ ಯುವತಿಯೊಬ್ಬಳಿಗೆ ಯುವಕ ವಿಭಿನ್ನವಾಗಿ ಪ್ರಪೋಸ್​ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​​ನಲ್ಲಿದ್ದಾರೆ.

ಯುವಕ ತನ್ನ ಪ್ರಿಯತಮೆಗೆ ಸರ್ಪ್ರೈಸ್ ಆಗಿ ಪಾನಿಪುರಿಯೊಳಗೆ ರಿಂಗ್​ ಇಟ್ಟು ಮದುವೆ ಪ್ರಪೋಸ್ ಮಾಡಿದ್ದಾನೆ. ಆಕೆ ಇಷ್ಟಪಡುವ ಪುರಿಯೊಳಗೆ ರಿಂಗ್ ಹಾಕಿಟ್ಟು ವಿಲ್ ಯೂ ಮ್ಯಾರಿ ಮೀ ಅಂತ ಕೇಳಿದ್ದಾನೆ. ಸದ್ಯ ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಟ್ವಿಟರ್​ನಲ್ಲಿ ಇವರಿಬ್ಬರ ಲವ್​ ಸ್ಟೋರಿ ವೈರಲ್​ ಆಗ್ತಿದ್ದಂತೆ ‘ರಬ್​​ ನೇ ಬನಾ ದಿ ಜೋಡಿ’ ಅಂತಾ ಕೆಲವ್ರು ಕಮೆಂಟ್ ಮಾಡಿದ್ರೆ.. ಇನ್ನು ಕೆಲವರು ನಿಮ್ಮ ಐಡಿಯಾ ಮೇಲೆ ಲವ್ ಆಗಿದೆ ಎನ್ನುತ್ತಿದ್ದಾರೆ.

The post ‘ಪ್ರೇಮ ಕಥೆ’ ಹೇಳ್ತಿರುವ ಈ ಫೋಟೋದ ರಹಸ್ಯ ಬಲ್ಲಿರಾ..? appeared first on News First Kannada.

Source: newsfirstlive.com

Source link