ಪ್ರೇಯಸಿಯನ್ನು ಪರಿಚಯಿಸಿದ ಕೆ.ಎಲ್​​ ರಾಹುಲ್​​.. ಅಭಿಮಾನಿಗಳ ದಿಲ್​​ ಖುಷ್


ಟೀಂ ಇಂಡಿಯಾ ಅರಂಭಿಕ ಆಟಗಾರ ಕೆ.ಎಲ್.ರಾಹುಲ್​ ಮೊದಲ ಬಾರಿಗೆ ತಮ್ಮ ಪ್ರೇಯಸಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಆಕೆ ಮತ್ಯಾರು ಅಲ್ಲ.. ಬಾಲಿವುಡ್​ ನಟಿ ಆಥಿಯಾ ಶೆಟ್ಟಿ.. ಆಕೆಯ ಹುಟ್ಟಿದ ಹಬ್ಬದ ಸಂದರ್ಭದ ಹಿನ್ನೆಲೆಯಲ್ಲಿ ‘ಹ್ಯಾಪಿ ಬರ್ತ್​​​ ಡೇ ಮೈ ಲವ್​​​’ ಎಂದು ಇಬ್ಬರು ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನವೇ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿದ್ದವು. ಇಬ್ಬರು ಪ್ರೇಮಿಗಳು ಎಂದು ಅಭಿಮಾನಿಗಳು ಹಲವು ಸಂದರ್ಭಗಳಲ್ಲಿ ಹೇಳಿದ್ದರು. ಆದರೆ ಯುವ ಜೋಡಿಯಿಂದ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ. ಆದರೆ ಮೊದಲ ಬಾರಿಗೆ ಕೆಎಲ್​ ರಾಹುಲ್​ ಈ ಸಂಗತಿಯನ್ನು ರಿವೀಲ್​ ಮಾಡಿದ್ದು, ಸದ್ಯ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಜೋಡಿಗೆ ಶುಭಕೋರಿದ್ದಾರೆ.

2021ರ ಟಿ20 ವಿಶ್ವಕಪ್​​​ನ ಮೊದಲ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲುಂಡಿತ್ತು ಆ ಬಳಿಕ ಆಡಿದ ಎರಡೂ ಪಂದ್ಯಗಳಲ್ಲಿ ತಂಡ ಭರ್ಜರಿ ಜಯಗಳಿಸಿದೆ. ಇನ್ನು ನಿನ್ನೆ ನಡೆದ ಸ್ಕಾಟ್​​ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್​ಗಳ ಭಾರೀ ಗೆಲುವು ಸಾಧಿಸಿದ ಟೀಂ ಇಂಡಿಯಾ ಪರ ರಾಹುಲ್​​ 18 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿದ್ದರು. ರಾಹುಲ್​ ಫಿಫ್ಟಿ ಬಳಿಕ ಸೇಡಿಯಂನಲ್ಲಿ ಸಂತೋಷದಿಂದ ಆಥಿಯಾ ಶೆಟ್ಟಿ ಸಂಭ್ರಮಿಸಿದ ಫೋಟೋಗಳು ಸಖತ್ ವೈರಲ್​ ಆಗಿತ್ತು. ಏಕೆಂದರೆ ತನ್ನ ಲವ್​​​ನ ಬರ್ತ್​​ ಡೇ ಹಿನ್ನೆಲೆಯಲ್ಲಿ ರಾಹುಲ್​ ಸಿಡಿಸಿದ ಅರ್ಧ ಶತಕ ವಿಶೇಷ ಗಿಫ್ಟ್​ನಂತೆ ಅಭಿಮಾನಿಗಳಿಗೆ ಕಂಡಿತ್ತು.

ಇನ್ನು ನಿನ್ನೆ ಕೇವಲ 18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ಕೆಎಲ್​ ರಾಹುಲ್​​, ಟಿ20 ವಿಶ್ವಕಪ್​ ಇತಿಹಾಸದಲ್ಲಿ ವೇಗವಾಗಿ ಅರ್ಧ ಶತಕ ಸಿಡಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ ಯುವರಾಜ್​ ಸಿಂಗ್ ಮೊದಲ ಸ್ಥಾನದಲ್ಲಿದ್ದು, 2007ರಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದ್ದರು. ಇನ್ನು 2ನೇ ಸ್ಥಾನದಲ್ಲಿ ಸ್ಟೀಫನ್ ಮೈಬರ್ಗ್ ಸ್ಥಾನ ಪಡೆದುಕೊಂಡಿದ್ದು, 17 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದ್ದರು. ಸದ್ಯ ಮೂರನೇ ಸ್ಥಾನವನ್ನು ಮ್ಯಾಕ್​​ವೆಲ್​ ರೊಂದಿಗೆ ರಾಹುಲ್​ ಶೇರ್​ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *