ಪ್ರೇಯಸಿ ನಂದಿನಿ ಔಟ್​ ಆದ್ಮೇಲೆ ಸಾನ್ಯಾ ಜತೆ ಹೆಚ್ಚಿತು ಜಶ್ವಂತ್​ ಸಲುಗೆ; ರೂಪೇಶ್​ಗೆ ಟೆನ್ಷನ್​ ಶುರು | Jashwanth Bopanna and Sanya Iyer become much closer after Nandini elimination in Bigg Boss Kannada OTT


Bigg Boss Kannada OTT: ಬಿಗ್​ ಬಾಸ್​ ಶೋನಿಂದ ನಂದಿನಿ ಎಲಿಮಿನೇಟ್​ ಆದ ಬಳಿಕ ಜಶ್ವಂತ್​ ಬೋಪಣ್ಣ ಅವರು ಸಾನ್ಯಾ ಅಯ್ಯರ್​ ಜೊತೆ ಹೆಚ್ಚು ಕ್ಲೋಸ್​ ಆಗಿದ್ದಾರೆ. ಇದು ಎಲ್ಲರ ಗಮನಕ್ಕೂ ಬಂದಿದೆ.

ಪ್ರೇಯಸಿ ನಂದಿನಿ ಔಟ್​ ಆದ್ಮೇಲೆ ಸಾನ್ಯಾ ಜತೆ ಹೆಚ್ಚಿತು ಜಶ್ವಂತ್​ ಸಲುಗೆ; ರೂಪೇಶ್​ಗೆ ಟೆನ್ಷನ್​ ಶುರು

ಜಶ್ವಂತ್​. ಸಾನ್ಯಾ, ರೂಪೇಶ್​

ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಹಲವು ಇಂಟರೆಸ್ಟಿಂಗ್​ ಘಟನೆಗಳು ನಡೆಯುತ್ತಿವೆ. ಇಷ್ಟು ದಿನ ನಂದಿನಿ ಮತ್ತು ಜಶ್ವಂತ್​ ಬೋಪಣ್ಣ (Jashwanth Bopanna) ಬಿಗ್​ ಬಾಸ್​ ಮನೆಯಲ್ಲಿ ಜೋಡಿಯಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಆದರೆ ಐದನೇ ವಾರದ ಎಲಿಮಿನೇಷನ್​ನಲ್ಲಿ (Bigg Boss Elimination) ನಂದಿನಿ ಔಟ್​ ಆದರು. ಆ ಬಳಿಕ ಜಶ್ವಂತ್​ ಅವರು ಸಾನ್ಯಾ ಅಯ್ಯರ್​ ಜತೆ ಹೆಚ್ಚು ಆಪ್ತತೆ ಬೆಳೆಸಿಕೊಂಡಿದ್ದಾರೆ. ಇದು ಮನೆಮಂದಿಯ ಗಮನಕ್ಕೆ ಬಂದಿದೆ. ವೀಕ್ಷಕರು ಕೂಡ ಇದನ್ನು ಗಮನಿಸಿದ್ದಾರೆ. ಅಷ್ಟೇ ಅಲ್ಲದೇ, ಬಿಗ್​ ಬಾಸ್​ ನಡೆಸಿಕೊಡುವ ಕಿಚ್ಚ ಸುದೀಪ್​ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಸೂಪರ್​ ಸಂಡೇ ವಿತ್​ ಸುದೀಪ್​’ ಎಪಿಸೋಡ್​ನಲ್ಲಿ ಇದರ ಬಗ್ಗೆ ಮಾತುಕತೆ ಆಗಿದೆ. ಜಶ್ವಂತ್​ ಮತ್ತು ಸಾನ್ಯಾ (Sanya Iyer) ಹತ್ತಿರ ಆಗುತ್ತಿದ್ದಂತೆಯೇ ರೂಪೇಶ್​ ಅವರು ಯಾಕೋ ಟೆನ್ಷನ್​ ಮಾಡಿಕೊಂಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಜಶ್ವಂತ್​ ಬೋಪಣ್ಣ ಮತ್ತು ನಂದಿನಿ ಅವರು ರಿಯಲ್​ ಲೈಫ್​ನಲ್ಲಿಯೂ ಪ್ರೇಮಿಗಳು. ಅವರು ಜೋಡಿ ಸ್ಪರ್ಧಿಗಳಾಗಿಯೇ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋಗೆ ಕಾಲಿಟ್ಟಿದ್ದರು. ಆದರೆ ಎರಡನೇ ವಾರದಿಂದ ಅವರಿಬ್ಬರು ಪ್ರತ್ಯೇಕ ಸ್ಪರ್ಧಿಗಳಾಗಿ ಮುಂದುವರಿಯಬೇಕು ಎಂದು ಬಿಗ್​ ಬಾಸ್​ ಕಡೆಯಿಂದ ಆದೇಶ ಬಂತು. ಹಾಗಿದ್ದರೂ ಕೂಡ ಪ್ರೇಮಿಗಳು ಎಂಬ ಕಾರಣಕ್ಕೆ ಹೆಚ್ಚಾಗಿ ಅವರಿಬ್ಬರು ಜೊತೆಯಲ್ಲೇ ಇರುತ್ತಿದ್ದರು.

ದಿನ ಕಳೆಯುತ್ತಿದ್ದಂತೆಯೇ ಜಶ್ವಂತ್​ ಅವರು ಸಾನ್ಯಾ ಅಯ್ಯರ್​ ಜೊತೆ ಹೆಚ್ಚು ಮಾತನಾಡಲು ಆರಂಭಿಸಿದರು. ಅದರಿಂದ ನಂದಿನಿಗೆ ಕಸಿವಿಸಿ ಆಗುತ್ತಿತ್ತು. ತಮಗೆ ಜಶ್ವಂತ್​ ಹೆಚ್ಚು ಸಮಯ ನೀಡುತ್ತಿಲ್ಲ ಎಂದು ನಂದಿನಿ ಆಗಾಗ ತಕರಾರು ತೆಗೆಯಲು ಶುರುಮಾಡಿದ್ದರು. ಇದರಿಂದ ಇಬ್ಬರ ನಡುವೆ ಯಾವಾಗಲೂ ಜಗಳ ಆಗುತ್ತಲೇ ಇತ್ತು. ಬಾಯ್​ಫ್ರೆಂಡ್​ ಜಶ್ವಂತ್​ ವಿಚಾರದಲ್ಲಿ ನಂದಿನಿ ಹೆಚ್ಚು ಪೊಸೆಸಿವ್​ ಎಂಬುದು ಇಡೀ ಮನೆಗೆ ಗೊತ್ತಾಯಿತು. ಈಗ ನಂದಿನಿ ಔಟ್​ ಆಗಿದ್ದು, ಜಶ್ವಂತ್​ ಅವರು ಸಾನ್ಯಾ ಜೊತೆ ಸಲುಗೆ ಹೆಚ್ಚಿಸಿಕೊಂಡಿದ್ದಾರೆ.

ನಂದಿನಿ ಮನೆಯಲ್ಲಿ ಇದ್ದಷ್ಟು ದಿನ ಸಾನ್ಯಾ ಅವರು ಜಶ್ವಂತ್​ಗಿಂತಲೂ ಹೆಚ್ಚಾಗಿ ರೂಪೇಶ್​ ಶೆಟ್ಟಿ ಜೊತೆ ಇರುತ್ತಿದ್ದರು. ಆದರೆ ನಂದಿನಿ ಹೋದ ಬಳಿಕ ರೂಪೇಶ್​ ಮತ್ತು ಸಾನ್ಯಾ ನಡುವೆ ಜಶ್ವಂತ್​ ಬಂದಿದ್ದಾರೆ. ಇದರಿಂದ ರೂಪೇಶ್​ಗೆ ಟೆನ್ಷನ್​ ಹೆಚ್ಚಾಗಿದೆ ಎನಿಸುತ್ತಿದೆ. ಇಂಥ ಹಲವು ಸಂಗತಿಗಳ ನಡುವೆ, ಅಂತಿಮವಾಗಿ ಯಾರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗುತ್ತಿದೆ.

TV9 Kannada


Leave a Reply

Your email address will not be published.