ಅಮೆಜಾನ್ ತನ್ನ ಪ್ರೈಮ್ ಚಂದಾದಾರಿಗೆ ಒಂದು ದಿನ ಮುಂಚಿನತವಾಗಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival 2022 Sale) ಆರಂಭಿಸಿದೆ. ಉಳಿದ ಗ್ರಹಾಕರಿಗೆ ಈ ಸೇಲ್ ಆಗಸ್ಟ್ 6ಕ್ಕೆ ಶುರುವಾಗಲಿದ್ದು ಆಗಸ್ಟ್ 10ರ ವರೆಗೆ ನಡೆಯಲಿದೆ.

Amazon Great Freedom Festival 2022 Sale
ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಮೇಳಗಳ ಭರಾಟೆ ಮತ್ತೆ ಶುರುವಾಗುತ್ತಿದೆ. ಅತ್ತ ಫ್ಲಿಪ್ಕಾರ್ಟ್ನಲ್ಲಿ (Flipkart) ಬಿಗ್ ಸೇವಿಂಗ್ ಡೇಸ್ ನಡೆಯುತ್ತಿದ್ದರೆ ಇತ್ತ ಅಮೆಜಾನ್ ತನ್ನ ಪ್ರೈಮ್ ಚಂದಾದಾರಿಗೆ ಒಂದು ದಿನ ಮುಂಚಿನತವಾಗಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival 2022 Sale) ಆರಂಭಿಸಿದೆ. ಉಳಿದ ಗ್ರಹಾಕರಿಗೆ ಈ ಸೇಲ್ ಆಗಸ್ಟ್ 6ಕ್ಕೆ ಶುರುವಾಗಲಿದ್ದು ಆಗಸ್ಟ್ 10ರ ವರೆಗೆ ನಡೆಯಲಿದೆ. ಈ ಸೇಲ್ನಲ್ಲಿ ಅನೇಕ ಪ್ರಾಡಕ್ಟ್ಗಳ ಮೇಲೆ ರಿಯಾಯಿತಿಗಳನ್ನು ನೀಡಲಿದೆ. ಸ್ಮಾರ್ಟ್ಫೋನ್ಗಳು (Smartphones), ಸ್ಮಾರ್ಟ್ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್ಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತದೆ. ಇತ್ತೀಚೆಗಷ್ಟೆ ಬಿಡುಗಡೆಗೊಂಡು ಭರ್ಜರಿ ಸೇಲ್ ಕಾಣುತ್ತಿರುವ ರೆಡ್ಮಿ K50i 5G ಸ್ಮಾರ್ಟ್ಫೋನ್ ಕೇವಲ 20,999ರೂ. ಬೆಲೆಗೆ ದೊರೆಯಲಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M13, ಐಕ್ಯೂ ನಿಯೋ 6 5G, ಟೆಕ್ನೋ ಕ್ಯಾಮನ್ 19 ನಿಯೋ ಮತ್ತು ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್ಫೋನ್ಗಳು ಕೂಡ ಈ ಸೇಲ್ನಲ್ಲಿ ಡಿಸ್ಕೌಂಟ್ನಲ್ಲಿ ದೊರೆಯಲಿವೆ. ಬ್ಯಾಂಕ್ ಆಫರ್ ಕೂಡ ನೀಡಲಾಗಿದ್ದು ಖರೀದಿದಾರರು ಆಯ್ದ ಪ್ರಾಡಕ್ಟ್ಗಳ ಮೇಲೆ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವವರು ವಿಶೇಷ ಡಿಸ್ಕೌಂಟ್ ಪಡೆಯಲಿದ್ದಾರೆ. ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿರೆ ನಿಮಗೆ 10% ಡಿಸ್ಕೌಂಟ್ ಲಭ್ಯವಾಗಲಿದೆ. ಇದಲ್ಲದೆ ಅಮೆಜಾನ್ ಪ್ಲಾಟ್ಫಾರ್ಮ್ನಲ್ಲಿ ಹೊಸದಾಗಿ ಖರೀದಿಮಾಡುವವರು ಅಂದರೆ ಮೊದಲ ಬಾರಿ ಖರೀದಿ ಮಾಡುವವರಿಗೆ 10% ಕ್ಯಾಶ್ಬ್ಯಾಕ್ ಪಡೆಯುತ್ತಾರೆ.
ಇನ್ನು ಈ ಸೇಲ್ನಲ್ಲಿ ಒನ್ಪ್ಲಸ್ ನಾರ್ಡ್ 2T ಸ್ಮಾರ್ಟ್ಫೋನ್ 28,998ರೂ. ಪ್ರಾರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೂಲಕ ಖರೀದಿಸಿದರೆ ವಿಶೇಷ ಕ್ಯಾಶ್ಬ್ಯಾಕ್ ಆಫರ್ ಕೂಡ ದೊರೆಯಲಿದೆ. ಒನ್ಪ್ಲಸ್ 10R ಸ್ಮಾರ್ಟ್ಫೋನ್ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ನಲ್ಲಿ 6 ತಿಂಗಳವರೆಗೆ ನೋ ಕಾಸ್ಟ್ EMI ನೊಂದಿಗೆ 4000ರೂ.ಗಳ ರಿಯಾಯಿತಿಯನ್ನು ಪಡೆದುಕೊಂಡಿದೆ. ಇದಲ್ಲದೆ ಎಕ್ಸ್ಚೇಂಜ್ ಮತ್ತು ಬ್ಯಾಂಕ್ ಆಫರ್ನಲ್ಲಿ ಹೆಚ್ಚುವರಿ 3000 ರೂ.ವರೆಗಿನ ಡಿಸ್ಕೌಂಟ್ ಲಭ್ಯವಾಗಲಿದೆ.