ಬೆಂಗಳೂರು: ಪ್ರೈವೇಟ್ ವಾಹನಗಳಿಗೆ ಸರ್ಕಾರಿ ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದ ಕಾರ್​​ಗಳನ್ನ ತಡೆದು ಟ್ರಾಫಿಕ್ ಪೊಲೀಸರು ಡ್ರೈವರ್​ಗಳಿಗೆ ದಂಡ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.

ಕೆಲವು ಸರ್ಕಾರಿ ನೌಕರರು ತಮ್ಮ ವಾಹನಗಳಿಗೆ ಕರ್ನಾಟಕ ಸರ್ಕಾರ ಎಂದು ಬರೆಯಲಾದ ಬೋರ್ಡ್​ಗಳನ್ನು ಹಾಕಿಕೊಂಡು ಸಂಚರಿಸುತ್ತಿದ್ದ ಹಿನ್ನೆಲೆ ಇಂದು ಫೀಲ್ಡ್​​ಗೆ ಇಳಿದ ಟ್ರಾಫಿಕ್ ಪೊಲೀಸರು ಅಂಥ ಕಾರ್​ಗಳನ್ನ ತಡೆದು ನಂಬರ್​ ಪ್ಲೇಟ್​ಗಳನ್ನ ಕಿತ್ತುಹಾಕಿದ್ದಾರೆ. ಅಲ್ಲದೇ ಡ್ರೈವರ್​ಗಳಿಂದ 500 ರೂ ದಂಡ ಕಲೆಕ್ಟ ಮಾಡಿದ್ದಾರೆ. ನಗರದ ಹಲವೆಡೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

The post ಪ್ರೈವೇಟ್ ವೆಹಿಕಲ್​ಗಳಿಗೆ ಸರ್ಕಾರಿ ನಂಬರ್ ಪ್ಲೇಟ್: ಫೀಲ್ಡ್​​ಗಿಳಿದ ಪೊಲೀಸರಿಂದ ಭರ್ಜರಿ ಬೇಟೆ appeared first on News First Kannada.

Source: newsfirstlive.com

Source link