ಬೆಂಗಳೂರು: ಲಾಕ್​ಡೌನ್​ನಲ್ಲಿ ಜನರು ಹೊರಬರದಂತೆ, ಗುಂಪುಸೇರದಂತೆ ನೋಡಿಕೊಳ್ಳಬೇಕಾದ ಪೊಲೀಸ್ ಅಧಿಕಾರಿಯೇ ಬಿಂದಾಸ್ ಆಗಿ ಬರ್ತ್​ಡೇ ಆಚರಿಸಿಕೊಂಡಿರುವ ಘಟನೆ ನಡೆದಿದೆ. ಹೊಸಕೋಟೆ ಪೊಲೀಸ್ ಠಾಣೆಯ ಸಬ್​ಇನ್ಸ್​ಪೆಕ್ಟರ್ ರಾಜು ಅದ್ಧೂರಿಯಾಗಿ ಬರ್ತ್​ಡೇ ಆಚರಿಸಿಕೊಂಡ ಅಧಿಕಾರಿ.

ಜೂನ್​ 1 ರಂದು ಹೊಸಕೋಟೆ ರಾಜು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಕಳೆದ ವಾರ ಸಬ್​ ಇನ್ಸ್​ಪೆಕ್ಟರ್​ ರಾಜುಗೆ ಇನ್ಸ್​ಪೆಕ್ಟರ್​​ ಆಗಿ ಮುಂಬಡ್ತಿ ಕೊಡಲಾಗಿತ್ತು. ಇದೇ ಖುಷಿಯಲ್ಲಿ ಅವರ ಅಭಿಮಾನಿಗಳು ಬರ್ತ್​ಡೇ ದಿನ ಪಟಾಕಿಯನ್ನು ಸಿಡಿಸಿದ್ದಾರೆ ಎನ್ನಲಾಗಿದೆ. ಆರ್. ಬಾಸ್​ ಆಕಾರದ ಕೇಕ್​ ಕಟ್ ಮಾಡುವ ಮೂಲಕ ಹೊಸಕೋಟೆ ರಾಜು ಬರ್ತ್​ಡೇ ಸೆಲಬ್ರೇಷನ್ ಮಾಡಿಕೊಂಡಿದ್ದಾರೆ.

The post ಪ್ರೊಮೋಷನ್ ಸಿಕ್ಕ ಖುಷಿಯಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿದ ಇನ್ಸ್​ಪೆಕ್ಟರ್; ಬಿಂದಾಸ್ ಬರ್ತ್​ಡೇ ಆಚರಣೆ appeared first on News First Kannada.

Source: newsfirstlive.com

Source link