Protein Powder: ಫಿಟ್ನೆಸ್ ಎನ್ನುವ ವಿಚಾರ ಬಂದರೆ ಪ್ರೋಟೀನ್ ಪೌಡರ್ ಎಲ್ಲಾ ಆಹಾರಗಳಿಗಿಂತ ಮುಂಚೂಣಿಯಲ್ಲಿ ಬಂದು ನಿಲ್ಲುತ್ತದೆ. ದೇಹದಾರ್ಢ್ಯ ಪಟುಗಳು ಹೆಚ್ಚಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಅಥವಾ ಸ್ಪರ್ಧೆಗಳಲ್ಲಿ ಭಾಗಿಯಾಗಲು ಪ್ರೋಟೀನ್ ಪಾನೀಯ ಸೇವನೆ ಮಾಡುತ್ತಾರೆ.
ಫಿಟ್ನೆಸ್ ಎನ್ನುವ ವಿಚಾರ ಬಂದರೆ ಪ್ರೋಟೀನ್ ಪೌಡರ್ ಎಲ್ಲಾ ಆಹಾರಗಳಿಗಿಂತ ಮುಂಚೂಣಿಯಲ್ಲಿ ಬಂದು ನಿಲ್ಲುತ್ತದೆ. ದೇಹದಾರ್ಢ್ಯ ಪಟುಗಳು ಹೆಚ್ಚಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಅಥವಾ ಸ್ಪರ್ಧೆಗಳಲ್ಲಿ ಭಾಗಿಯಾಗಲು ಪ್ರೋಟೀನ್ ಪಾನೀಯ ಸೇವನೆ ಮಾಡುತ್ತಾರೆ. ಪ್ರೋಟೀನ್ (ಎನ್ನುವ ಶಬ್ದವು ಗ್ರೀಕ್ನ ಪ್ರೋಟೋಸ್ ಎನ್ನುವ ಶಬ್ದದಿಂದ ಬಂದಿದೆ. ಪ್ರೋಟೀನ್ ಪೌಡರ್ ಅನ್ನು ಹಾಲು ಅಥವಾ ಸ್ಮೂದಿಯಲ್ಲಿ ಬೆರೆಸಿ ಕುಡಿಯುತ್ತಾರೆ. ಆದರೆ ಅದರಿಂದ ಸಾಕಷ್ಟು ಅಡ್ಡಪರಿಣಾಮಗಳೂ ಕೂಡ ಇವೆ.
ಆದರೆ ಪ್ರೋಟೀನ್ ಪಾನೀಯವನ್ನು ಮೊಟ್ಟೆ, ಹಾಲು ಮತ್ತು ಸೋಯಾದಿಂದ ತಯಾರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಪ್ರೋಟೀನ್ ಪಾನೀಯದಲ್ಲಿ ಸಂಸ್ಕರಿತ ಪ್ರೋಟೀನ್ ಸೇರಿಸಲಾಗುತ್ತದೆ. ಇದರಲ್ಲಿ ಕೆಲವೊಂದು ವಿಷಕಾರಿ ಅಂಶಗಳಾದ ಸೀಸ, ಆರ್ಸೆನಿಕ್ ಮತ್ತು ಪಾದರಸದ ಅಂಶಗಳು ಇರುತ್ತವೆ.
ನೀವು ಪ್ರೋಟೀನ್ ಪಾನೀಯ ಸೇವನೆ ಮಾಡುವುದಾದರೆ ಯಾವುದೇ ರೀತಿಯ ವಿಷಕಾರಿ ಅಂಶಗಳು ಇಲ್ಲದೆ ಇರುವಂತಹ ಪ್ರೋಟೀನ್ ಪಾನೀಯ ಸೇವನೆ ಮಾಡಿ.
ದೇಹಕ್ಕೆ ಯಾವ ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಬೇಕು
ನಿಮ್ಮ ತೂಕವನ್ನು ಪೌಂಡ್ಸ್ ಮೂಲಕ ಕಾಲ್ಕ್ಯೂಲೇಟ್ ಮಾಡಿ ಅಂದರೆ ಒಂದೊಮ್ಮೆ ನಿಮ್ಮ ಕೆಜಿ ನಿಮಗೆ 50 ವರ್ಷ ವಯಸ್ಸಾಗಿದ್ದು ನಿಮ್ಮ ತೂಕ 63 ಕೆಜಿ ಇದ್ದರೆ(140 ಪೌಂಡ್ಸ್) ಅಂತವರಿಗೆ 53ಗ್ರಾಂನಷ್ಟು ಪ್ರೋಟೀನ್ನ ಅಗತ್ಯವಿದೆ.
ಪ್ರೋಟೀನ್ ಪೌಡರ್ಗೆ ಏನೇನು ಬೆರೆಸುತ್ತಾರೆ
ಪ್ರೋಟೀನ್ ಪೌಡರ್ ಅನ್ನು ಸೋಯಾಬೀನ್, ಅಕ್ಕಿ, ಆಲೂಗಡ್ಡೆ ಇಂದ ತಯಾರಿಸಿರಬಹುದು, ಅದಕ್ಕೆ ಸಕ್ಕರೆ, ಆರ್ಟಿಫಿಷಿಯಲ್ ಫ್ಲೇವರ್, ವಿಟಮಿನ್ ಹಾಗೂ ಮಿನರಲ್ಸ್ ಬೆರಕೆ ಮಾಡಲಾಗುತ್ತದೆ.
ಪ್ರೋಟೀನ್ ಪೌಡರ್ ಬದಲು ಏನು ಬಳಕೆ ಮಾಡಬಹುದು?
ಯೋಗರ್ಟ್, ಹಾಲು, ತುಪ್ಪ, ಮೀನು, ಮೊಟ್ಟೆ ಹಾಗೂ ಮಾಂಸವನ್ನು ಸೇವಿಸಿ.
ಹೊಟ್ಟೆನೋವು
ಪ್ರೋಟೀನ್ ಶೇಕ್ ಸುರಕ್ಷಿತವೇ ಎನ್ನುವ ಪ್ರಶ್ನೆ ಮೊದಲು ಉದ್ಭವಿಸಲಿದೆ. ಹಾಲಿನಿಂದ ಮಾಡಲ್ಪಡುವ ಪ್ರೋಟೀನ್ ಶೇಕ್ ನಲ್ಲಿ ಹಾಲಿನ ಸಕ್ಕರೆ ಲ್ಯಾಕ್ಟೋಸ್ ಇರುವುದು. ಇದು ಹೊಟ್ಟೆಯ ನೋವಿಗೆ ಕಾರಣವಾಗಬಹುದು. ಲ್ಯಾಕ್ಟೋಸ್ ಸೂಕ್ಷ್ಮತೆ ಇರುವವರಲ್ಲಿ ಇದು ಕಂಡುಬರಬಹುದು. ಇದರಿಂದಾಗಿ ಗ್ಯಾಸ್, ಹೊಟ್ಟೆ ಉಬ್ಬರ, ಭೇದಿ, ಹೊಟ್ಟೆಯಲ್ಲಿ ಭಾರವಾದ ಅನುಭವ ಉಂಟಾಗುವುದು.
ಅಲರ್ಜಿ
ಭೇದಿ, ವಾಂತಿ ಮತ್ತು ನಿರ್ಜಲೀಕರಣ ಉಂಟಾಗಬಹುದು. ಇದು ಪ್ರೋಟೀನ್ ಪಾನೀಯದ ದೊಡ್ಡ ಅಪಾಯ. ಸೋಯಾ, ಹಾಲು ಮತ್ತು ಮೊಟ್ಟೆಯ ಪ್ರೋಟೀನ್ ಶೇಕ್ ನಿಂದಾಗಿ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ.
ವಿವಿಧ ಅಂಗಗಳಿಗೆ ಹಾನಿ
ಅತಿಯಾದ ಪ್ರೋಟೀನ್ ನಿಂದಾಗಿ ಕಿಡ್ನಿ ಮತ್ತು ಯಕೃತ್ ಮೇಲೆ ಪರಿಣಾಮ ಬೀರಬಹುದು. ಈಗಾಗಲೇ ಕಿಡ್ನಿ ಅಥವಾ ಯಕೃತ್ ಸಮಸ್ಯೆ ಇರುವವರಿಗೆ ಇದು ಮಾರಕ. ಇದು ಪ್ರೋಟೀನ್ ಪೌಡರ್ನ ಹಾನಿಕಾರಕ ಪರಿಣಾಮ.
ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಅಗಿರುವುದಿಲ್ಲ, ಸಾಮಾನ್ಯ ಮಾಹಿತಿ ಆಧರಿಸಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ