ಹಾಮಾರಿ ಕೊರೊನಾ ವೈರಸ್ ನಿಂದಾಗಿ ಕನ್ನಡದ ಮೋಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಅರ್ಧಕ್ಕೆ ನಿಂತಿತ್ತು. ಆದರೆ ಇದೀಗ ಈ ಕಾರ್ಯಕ್ರಮ ಮತ್ತೆ ಆರಂಭವಾಗುತ್ತಿದ್ದು, ವೀಕ್ಷಕರು ಹಾಗೂ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಹೌದು. ಕೊರೊನಾದಿಂದ ಅರ್ಧಕ್ಕೆ ನಿಂತಿರುವ ಬಿಗ್‍ಬಾಸ್ ರಿಯಾಲಿಟಿ ಶೋ ಜೂನ್ 21 ರಿಂದ ಮತ್ತೆ ಪ್ರಾರಂಭವಾಗುತ್ತಿದೆ. ಸ್ಪರ್ಧಿಗಳು ಈಗಾಗಲೇ ಮತ್ತೆ ಬಿಗ್ ಮನೆಯ ಒಳಗಡೆ ಬರಲು ಕಾತುರದಿಂದ ಕಾಯುತ್ತಿದ್ದಾರೆ. ಅಂತೆಯೇ ಇದೀಗ ನಟಿ ಶುಭಾ ಪೂಂಜಾ ಅವರು ಬಿಗ್ ಮನೆಯ ಒಳಗಡೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ.

ಈ ಸಂಬಂಧ ವಾಹಿನಿ ಈಗಾಗಲೇ ಶುಭಾ ಪ್ರೋಮೋ ಬಿಡುಗಡೆ ಮಾಡಿದೆ. ಅದರಲ್ಲಿ ಶುಭಾ, ಪ್ಲೀಸ್ ಚಿನ್ನಿಬಾಂಬ್ ನಾನು ಹೋಗಲ್ಲ.. ನಿನ್ನನ್ನು ಬಿಟ್ಟು ಹೋಗಲು ನನಗೆ ಇಷ್ಟ ಇಲ್ಲ ಎಂದು ಹೇಳುತ್ತಾರೆ. ಕೂಡಲೇ ಸಲ್ವಾರ್ ತಗೊಳ್ಳಾ, ಜೀನ್ಸ್ ತಗೊಳ್ಳಾ ಎಂದು ಕೇಳುತ್ತಾ ನಿಜ ಹೇಳಬೇಕಂದ್ರೆ ನನಗೆ ಬಿಗ್ ಬಾಸ್ ಮನೆಗೆ ಹೋಗಲು ತುಂಬಾ ಇಷ್ಟ ಎಂದು ಹೇಳುತ್ತಾ ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ: ಈಗ ಅಧಿಕೃತ, ಬಿಗ್ ಬಾಸ್ ಶೋ ಮತ್ತೆ ಆರಂಭ

ಒಟ್ಟಿನಲ್ಲಿ ಬಿಗ್‍ಬಾಸ್ 8ನೇ ಆವೃತ್ತಿ ಕೊರೊನಾ ಸಂಕಷ್ಟಕ್ಕೆ ಸಿಲುಕಿ 72 ದಿನಗಳಿಗೆ ಮೊಟಕುಗೊಳಿಸಲಾಗಿತ್ತು. ಇದೀಗ ಅರ್ಧದಲ್ಲೇ ನಿಂತಿದ್ದ ಬಿಗ್‍ಬಾಸ್ ಮತ್ತೆ ಪ್ರಾರಂಭವಾಗಲಿದೆ. ಈ ವಿಚಾರದ ಕುರಿತು ಬಿಗ್‍ಬಾಸ್ ಪ್ರಸಾರವಾಗುವ ಖಾಸಗಿ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅಧಿಕೃತವಾಗಿ ಮಾಹಿತಿ ನೀಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯವಾಗಿದೆ ಎಂದು ತಿಳಿಸುವ ಮೂಲಕ ಮತ್ತೆ ಆರಂಭವಾಗುವ ಕುರಿತು ಹಂಚಿಕೊಂಡಿದ್ದಾರೆ.

The post ಪ್ಲೀಸ್ ಚಿನ್ನಿಬಾಂಬ್ ಅನ್ನುತ್ತಲೇ ಬಿಗ್ ಮನೆಗೆ ಎಂಟ್ರಿ ಕೊಡಲು ಶುಭಾ ರೆಡಿ appeared first on Public TV.

Source: publictv.in

Source link