ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಇಬ್ಬರೂ ವಾಶ್ರೂಂನಲ್ಲಿದ್ದರು. ಈ ವೇಳೆ ಅಲ್ಲಿಗೆ ಜಿರಳೆ ಬಂದಿದೆ. ಜಿರಳೆಯನ್ನು ನೋಡಿ ಸಾನ್ಯಾ ಅಯ್ಯರ್ ಕಿರುಚಾಡಿದ್ದಾರೆ. ‘
‘ಬಿಗ್ ಬಾಸ್ ಒಟಿಟಿ’ (Bigg Boss OTT) ಮನೆಯಲ್ಲಿ 16 ಸ್ಪರ್ಧಿಗಳ ನಡುವೆ ಫೈಟ್ ನಡೆಯುತ್ತಿದೆ. ವೂಟ್ ಆ್ಯಪ್ನಲ್ಲಿ ದಿನದ 24 ಗಂಟೆಯೂ ಈ ಶೋ ಪ್ರಸಾರ ಕಾಣುತ್ತಿದೆ. ಮನೆಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಮನೆಯಲ್ಲಿ ಪ್ರೀತಿ-ಪ್ರೇಮದ ವಿಚಾರಗಳ ಬಗ್ಗೆಯೂ ಹೊಗೆ ಆಡುತ್ತಿವೆ. ಎಲ್ಲಾ ಸ್ಪರ್ಧಿಗಳು ವೀಕ್ಷಕರಿಗೆ ಎಂಟರ್ಟೇನ್ಮೆಂಟ್ ನೀಡಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಮನೆಗೆ ಎಂಟ್ರಿ ಕೊಟ್ಟ ಅತಿಥಿಯ ಕಂಡು ಸಾನ್ಯಾ ಅಯ್ಯರ್ (Sanya Iyer) ದೊಡ್ಡದಾಗಿ ಕಿರುಚಾಡಿದ್ದಾರೆ. ಸಾನ್ಯಾಗೆ ರೂಪೇಶ್ ಶೆಟ್ಟಿ ಅವರು ಮತ್ತಷ್ಟು ಭಯ ಬೀಳಿಸಿದ್ದಾರೆ. ಶುಕ್ರವಾರ (ಆಗಸ್ಟ್ 12) ಎಪಿಸೋಡ್ನಲ್ಲಿ ಈ ವಿಚಾರ ಹೈಲೈಟ್ ಆಗಿದೆ.
ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಇಬ್ಬರೂ ವಾಶ್ರೂಂನಲ್ಲಿದ್ದರು. ಈ ವೇಳೆ ಅಲ್ಲಿಗೆ ಜಿರಳೆ ಬಂದಿದೆ. ಜಿರಳೆಯನ್ನು ನೋಡಿ ಸಾನ್ಯಾ ಅಯ್ಯರ್ ಕಿರುಚಾಡಿದ್ದಾರೆ. ‘ಇದನ್ನು ಯಾರಾದರೂ ಸಾಯಿಸಿ’ ಎಂದು ಕಿರುಚಾಡಿದರು. ಈ ವೇಳೆಗೆ ಅಲ್ಲಿಗೆ ರೂಪೇಶ್ ಶೆಟ್ಟಿ ಎಂಟ್ರಿ ಆಗಿದೆ. ಅವರು ಸಾನ್ಯಾ ಅವರನ್ನು ಕಿಚಾಯಿಸಿದ್ದಾರೆ.
ಜಿರಳೆಯನ್ನು ಕೈಯಲ್ಲಿ ಇಟ್ಟುಕೊಂಡ ರೂಪೇಶ್ ಅವರು ಅದನ್ನು ಸಾನ್ಯಾಗೆ ತೋರಿಸಿದರು. ಇದನ್ನು ನೋಡಿ ಸಾನ್ಯಾ ಆತಂಕಗೊಂಡರು. ‘ನಾನು ಹೇಳಿದಂತೆ ಕೇಳ್ತೀನಿ ಎಂದು ಹೇಳಿ. ಆಮೇಲೆ ಜಿರಳೆಯನ್ನು ಎಸಿತೀನಿ’ ಎಂದರು. ‘ಪ್ಲೀಸ್ ದಯವಿಟ್ಟು ಬಿಟ್ಟುಬಿಡಿ. ನೀವು ಹೇಳಿದಂತೆ ಕೇಳುತ್ತೇನೆ’ ಎಂದರು ಸಾನ್ಯಾ. ನಂತರ ಇಬ್ಬರ ನಡುವೆ ಮಾತುಕತೆ ನಡೆದೇ ಇತ್ತು.
ಸಾನ್ಯಾ ಹಾಗೂ ರೂಪೇಶ್ ನಡುವೆ ಏನೋ ನಡೆಯುತ್ತಿದೆ ಎಂಬ ಚರ್ಚೆ ಇದೆ. ‘ನಿಮ್ಮಿಬ್ಬರ ಜೋಡಿ ಚೆನ್ನಾಗಿ ಕಾಣುತ್ತದೆ’ ಎಂದು ಸೋಮಣ್ಣ ಹಾಗೂ ಜಶ್ವಂತ್ ಅವರು ಸಾನ್ಯಾ ಹಾಗೂ ರೂಪೇಶ್ಗೆ ಹೇಳಿದ್ದರು. ‘ನಾವಿಬ್ಬರೂ ಒಳ್ಳೆಯ ಗೆಳೆಯರಷ್ಟೇ. ನಮ್ಮಿಬ್ಬರ ನಡುವೆ ಮತ್ತೇನು ಇಲ್ಲ’ ಎಂದು ರೂಪೇಶ್ ಸ್ಪಷ್ಟನೆ ನೀಡಿದ್ದರು.