ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರು ತಮ್ಮ ಕಾರಿನ ಮೇಲೆ ಹಲ್ಲೆ ನಡೆಸಿರುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ವಿ ಮುರುಳಿಧರನ್ ಆರೋಪ ಮಾಡಿದ್ದಾರೆ.

ಪಶ್ಚಿಮ ಮಿಡ್ನಾಪೋರ್​​ನ ಪಂಚಕುಡಿ ಗ್ರಾಮದಲ್ಲಿ ಸಾಗುತ್ತಿದ್ದ ವೇಳೆ ಹಲವು ಮಂದಿ, ಸಚಿವರ ಬೆಂಗಾವಲು ವಾಹನಗಳ ಮೇಲೆ ದಾಳಿ ಮಾಡಿರುವ ವಿಡಿಯೋವನ್ನ ಮುರಳೀಧರನ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಹತ್ತಾರು ಮಂದಿ ದೊಣ್ಣೆಗಳನ್ನ ಹಿಡಿದು ಬಂದು ಕಾರಿನ ಗಾಜನ್ನ ಧ್ವಂಸ ಮಾಡೋದನ್ನ ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಸ್ಥಳದಲ್ಲೇ ಪೋಲಿಸ್ ಬೆಂಗಾವಲು ಪಡೆ ಇದ್ರು ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಟಿಎಂಸಿ ಗೂಂಡಾಗಳು ಪಶ್ಚಿಮ ಮಿಡ್ನಾಪುರದಲ್ಲಿ ನನ್ನ ಬೆಂಗಾವಲು ಮೇಲೆ ದಾಳಿ ಮಾಡಿದರು. ಕಿಟಕಿಗಳನ್ನು ಒಡೆದರು, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ರು. ಹೀಗಾಗಿ ನನ್ನ ಪ್ರವಾಸವನ್ನ ಅರ್ಧಕ್ಕೆ ಮೊಟಕುಗೊಳಿಸಬೇಕಾಯ್ತು  ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಘಟನೆ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿನ ಕಾನೂನು ಮತ್ತು ಸುವ್ಯಸ್ಥೆಯ ಬಗ್ಗೆ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ, ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಸೂಚಿಸಿದೆ.  ಇತ್ತೀಚಿಗೆ ಬಂಗಾಳದಲ್ಲಿ ಹಲವು ಹತ್ಯೆಗಳು ನಡೆದಿವೆ. ಫಲಿತಾಂಶದ ನಂತರ ಬಂಗಾಳದಲ್ಲಿ ಬಿಜೆಪಿಯ 14 ಜನರನ್ನ ಸಾಯಿಸಲಾಗಿದೆ ಅನ್ನೋ ಆರೋಪವಿದೆ. ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕೈಮೀರಿಹೋಗಿದೆ. ಕೇಂದ್ರ ಸಚಿವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಹೀಗಾಗಿ ಈ ಎಲ್ಲದರ ಬಗ್ಗೆ ವರದಿ ನೀಡಬೇಕು ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

 

The post ಪ.ಬಂಗಾಳದಲ್ಲಿ ಕೇಂದ್ರ ಸಚಿವರೂ ಸೇಫ್ ಅಲ್ಲ; ಹಲ್ಲೆ ಹಿನ್ನೆಲೆ ವರದಿ ಕೇಳಿದ ಗೃಹ ಸಚಿವಾಲಯ appeared first on News First Kannada.

Source: newsfirstlive.com

Source link