ಚುನಾವಣೆ ಪ್ರಚಾರದ ವೇಳೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದ ಮಮತಾ ಬ್ಯಾನರ್ಜಿ, ತಮ್ಮ ಕಾಲಿಗೆ ಪ್ಲಾಸ್ಟರ್ ಹಾಕಲಾಗಿದೆ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ ತಮ್ಮನ್ನು ಮುಗಿಸಲು ವಿರೋಧಿಗಳು ಯತ್ನಿಸುತ್ತಿದ್ದಾರೆ ಎಂದು ಕೂಡ ಗಂಭೀರ ಆರೋಪವನ್ನು ಮಾಡಿದ್ದರು. ಇಂದು ಫಲಿತಾಂಶ ಬಂದ ಬೆನ್ನಲ್ಲೇ ಅವರ ಕಾಲು ಸರಿಯಾಗಿದ್ದು, ತಮ್ಮ ಅಳಿಯ ಅಭಿಷೇಕ್ ಬ್ಯಾನರ್ಜೀ ಜೊತೆ ಖುಷಿಯಿಂದ ಕಚೇರಿಯಲ್ಲಿ ನಡೆದಾಡಿಯೇ ಮಾತನಾಡಿದ್ದಾರೆ.

ಚುನಾವಣಾ ಪ್ರಚಾರವನ್ನೂ ವ್ಹೀಲ್​ ಚೇರ್ ಮೇಲೆ ಕುಳಿತೇ ಮಾಡಿದ ಮಮತಾ ಬ್ಯಾನರ್ಜೀ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜನರ ಸೆಂಟಿಮೆಂಟ್ ಕೂಡ ಗಳಿಸಿಕೊಂಡಿದ್ದರು. ವ್ಹೀಲ್ ಚೇರ್ ಮೇಲೆ ಕುಳಿತೇ ಚಂಡಿ ಪಾಠ ಕೂಡ ಮಾಡುತ್ತಿದ್ದ ಮಮತಾ, ದೇಶ ಪ್ರೇಮ ತೋರಿಸಲು ರಾಷ್ಟ್ರಗೀತೆ ಬಂದಾಗ ಒಂದೇ ಕಾಲ ಮೇಲೇ ನಿಲ್ಲುವ ಯತ್ನ ಕೂಡ ಮಾಡಿ ಜನರ ಮನಗೆದ್ದಿದ್ದರು. ಈ ಎಲ್ಲದರ ನಡುವೆ ಇಂದು ಮಮತಾ ಬ್ಯಾನರ್ಜೀಗೆ ಡಬಲ್ ಖುಷಿ ಸಿಕ್ಕಿದೆ. ಒಂದೆಡೆ ಅವರ ಪಕ್ಷ ಅಭೂತಪೂರ್ವ ಬಹುಮತವನ್ನು ಪಶ್ಚಿಮ ಬಂಗಾಳದಲ್ಲಿ ಗಳಿಸಿದ್ದರೆ, ಇನ್ನೊಂದೆಡೆ ಅವರ ಕಾಲು ಕೂಡ ಸರಿಯಾಗಿದೆ. ಇಂದು ವ್ಹೀಲ್ ಚೇರ್ ತ್ಯಜಿಸಿರುವ ಅವರು ಪಾರ್ಟಿ ಕಚೇರಿಯಲ್ಲಿ ಖುಷಿಯಿಂದ ಓಡಾಡಿದ್ದಾರೆ. ಜೊತೆಗೆ, ನಿಂತುಕೊಂಡೇ ತಮ್ಮ ಬೆಂಬಲಿಗರಿಗೆ ಧನ್ಯವಾದ ಕೂಡ ತಿಳಿಸಿದ್ದಾರೆ.

The post ಫಲಿತಾಂಶ ಬಂದ ಬೆನ್ನಲ್ಲೇ ಸರಿಯಾಯ್ತು ದೀದಿ ಕಾಲು; ಖುಷಿಯಿಂದ ಓಡಾಡಿದ ಮಮತಾ ಬ್ಯಾನರ್ಜಿ appeared first on News First Kannada.

Source: newsfirstlive.com

Source link