ಡ್ಯಾರೆನ್​ ಸ್ಟೀವನ್ಸ್​​​.. ಇಂಗ್ಲಿಷ್ ಕ್ರಿಕೆಟ್​ನ ಏಜ್​ಲೆಸ್​​ ಆಲ್​ರೌಂಡರ್.. ಕೌಂಟಿ ಕ್ರಿಕೆಟ್​ನ ಕಿಂಗ್ ಕೂಡ ಹೌದು. ಕ್ರಿಕೆಟ್​​ ಲೋಕದಲ್ಲಿ ವಯಸ್ಸಾದಂತೆಲ್ಲಾ, ಡಲ್​ ಪರ್ಫಾಮೆನ್ಸ್​​ ನೀಡ್ತಾರೆ. ಆದ್ರೆ ಡ್ಯಾರೆನ್ ಸ್ಟೀವನ್ಸ್​,​ ಸ್ವಲ್ಪ ಡಿಫರೆಂಟ್. ಬ್ಯಾಟಿಂಗ್, ಬೌಲಿಂಗ್​​​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡ್ತಿರೋ ಸ್ಟೀವನ್ಸ್​ಗೆ, ಸದ್ಯ 45 ವರ್ಷ. ಈ ವಯಸ್ಸಿನಲ್ಲೂ ಸ್ಟೀವನ್ಸ್​, ಫಿಟ್ ಌಂಡ್ ಫೈನ್. ದಿನದಿಂದ ದಿನಕ್ಕೆ ಅತ್ಯದ್ಭುತ ಪ್ರದರ್ಶನ ತೋರುತ್ತಿರುವ ಸ್ಟೀವನ್ಸ್​, ಕೌಂಟಿ ಕ್ರಿಕೆಟ್​ನ ಮೋಸ್ಟ್​ ಡೇಂಜರಸ್​ ಆಲ್​ರೌಂಡರ್!

​ಮೊದಲ ಬಾರಿಗೆ ಸ್ಟೀವನ್ಸ್​ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಆಯ್ಕೆ
6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸುವ ಈ ಸ್ಟಾರ್​ ಆಟಗಾರ, 45 ವರ್ಷವಾದರೂ ರನ್​ ಹೊಳೆ ಹರಿಸುತ್ತಾರೆ. ಹಾಗೆಯೇ ಯುವ ಆಟಗಾರರನ್ನ ನಾಚಿಸುವಂತೆ ಬೌಲಿಂಗ್​ ಮಾಡುವ ಸ್ಟೀವನ್ಸ್​, ಅದೆಷ್ಟೋ ಸ್ಟಾರ್​ ಬ್ಯಾಟ್ಸ್​ಮನ್​​ಗಳ ವಿಕೆಟ್ ಕಬಳಿಸಿದ್ದಾರೆ. 21ನೇ ವಯಸ್ಸಿಗೆ ದೇಶಿ ಕ್ರಿಕೆಟ್​ಗೆ ಕಾಲಿಟ್ಟ ಡ್ಯಾರೆನ್ ಸ್ಟೀವನ್ಸ್​ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಅಮಾನತ್ತಾದ ಒಲಿ ರಾಬಿನ್​ಸನ್​​ ಸ್ಥಾನಕ್ಕೆ ಸ್ಟೀವನ್ಸ್​
ಜನಾಂಗೀಯ ನಿಂದನೆ ಮತ್ತು ಲಿಂಗ ತಾರತಮ್ಯ ಆರೋಪಕ್ಕೆ ಗುರಿಯಾಗಿ ಇಂಗ್ಲೆಂಡ್ ತಂಡದಿಂದ ಅಮಾನತಾದ ಪ್ರತಿಭಾನ್ವಿತ ಬೌಲರ್ ಒಲಿ ರಾಬಿನ್​​ಸನ್​ ಜಾಗಕ್ಕೆ, ಸ್ಟೀವನ್ಸ್​ ಆಯ್ಕೆ ಆಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕೌಂಟಿ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿರೋದ್ರಿಂದಲೇ ಸ್ಟೀವನ್ಸ್​ಗೆ ಮಣೆ ಹಾಕಲಾಗಿದೆ. 31 ಬಾರಿ ಇನ್ನಿಂಗ್ಸ್​ವೊಂದರಲ್ಲಿ ಐದು ವಿಕೆಟ್​ ಮತ್ತು ಪಂದ್ಯವೊಂದರಲ್ಲಿ 2 ಬಾರಿ 10 ವಿಕೆಟ್ ಪಡೆದಿರುವ ಈತ ಸದ್ಯ ಕಿವೀಸ್​ ವಿರುದ್ಧ ಎಡ್ಜ್​ಬಸ್ಟನ್ ಟೆಸ್ಟ್ ಆಡೋಕೆ ತಯಾರಿ ನಡೆಸಿಕೊಳ್ಳುತ್ತಿದ್ದಾರೆ.

ಪ್ರಸ್ತುತ ಕೌಂಟಿಯಲ್ಲಿ ಬ್ಯಾಟಿಂಗ್​​ ಸಾಧನೆ
ಪಂದ್ಯ             08
ರನ್​​               423
ಸರಾಸರಿ        47.00
50/100         01/02

ಬ್ಯಾಟಿಂಗ್​​​ನಲ್ಲಿ ಬೊಂಬಾಬ್​ ಪ್ರದರ್ಶನ ನೀಡಿರೋ ಡ್ಯಾರೆನ್, ಬೌಲಿಂಗ್​ನಲ್ಲೂ ಅಷ್ಟೇ ನಿರ್ವಹಣೆ ತೋರಿಸಿದ್ದಾರೆ. ಪ್ರಸ್ತುತ ಕೌಂಟಿಯಲ್ಲಿ ಈತನ ಬೌಲಿಂಗ್​ ಸಾಧನೆ ಸಾಲಿಡ್ ಆಗಿದೆ.

ಪ್ರಸ್ತುತ ಕೌಂಟಿಯಲ್ಲಿ ಬೌಲಿಂಗ್​ ಸಾಧನೆ
ಪಂದ್ಯ          08
ವಿಕೆಟ್​         26
ಓವರ್        193
ಎಕಾನಮಿ   2.64

ಇದು ಸದ್ಯ ಕೌಂಟಿ ಕ್ರಿಕೆಟ್​​ನಲ್ಲಿ​ ಸ್ಟೀವನ್ಸ್​ ವಂಡರ್​ಫುಲ್​ ಪರ್ಫಾಮೆನ್ಸ್​. ಇನ್ನು ಈ ಏಜ್​ಲೆಸ್​ ಆಲ್​​ರೌಂಡರ್​ ಎಷ್ಟು ಭಯಾನಕ ಆಟಗಾರ ಅನ್ನೋದಕ್ಕೆ ಆತ ದೇಶಿ ಕ್ರಿಕೆಟ್​ನಲ್ಲಿ​ ಮಿಂಚಿರೋದೇ ಬೆಸ್ಟ್​ ಎಕ್ಸಾಂಪಲ್​.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸ್ಟೀವನ್ಸ್
ಪಂದ್ಯ           316
ರನ್​​           16,133
ವಿಕೆಟ್​​​​          572
50/100       80/36
ಬೆಸ್ಟ್​​​​​​​            8/75

ಒಟ್ನಲ್ಲಿ, ಕಿವೀಸ್​ ವಿರುದ್ಧ ಆಡಲಿರುವ 45 ವರ್ಷ ಆಲ್​ರೌಂಡರ್​, ತನ್ನ ಅಟ್ಯಾಕಿಂಗ್ ಬ್ಯಾಟಿಂಗ್ ಮತ್ತು ಮೀಡಿಯಮ್ ಪೇಸ್​ ಬೌಲಿಂಗ್​ಗೆ, ಹೆಸರುವಾಸಿ. ಈ ಸೀನಿಯರ್ ಆಲ್​ರೌಂಡರ್ ಎಡ್ಜ್​ಬಸ್ಟನ್​ ಟೆಸ್ಟ್​ ಪಂದ್ಯವನ್ನ ಆಡ್ತಾರಾ? ಚಾನ್ಸ್ ಸಿಕ್ಕಿದ್ರೆ ಕಿವೀಸ್ ಕಿವಿ ಹಿಂಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

The post ಫಸ್ಟ್​ಟೈಮ್ ಇಂಗ್ಲೆಂಡ್​ನ ಟೆಸ್ಟ್​ ತಂಡಕ್ಕೆ ಆಯ್ಕೆ.. ವಯಸ್ಸು 45.. ಇವ್ರ ಸ್ಪೆಷಲ್ ಏನು ಗೊತ್ತಾ? appeared first on News First Kannada.

Source: newsfirstlive.com

Source link