ಫಸ್ಟ್​​ ಕ್ಲಾಸ್​​​​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಕನ್ನಡಿಗ ಅಭಿಮನ್ಯು ಮಿಥುನ್​..!

ಕರ್ನಾಟಕದ ಸ್ಟಾರ್ ವೇಗಿ ಅಭಿಮನ್ಯು ಮಿಥುನ್​ ಪ್ರಥಮ ದರ್ಜೆ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ರಣಜಿ ಕ್ರಿಕೆಟ್​​ನಲ್ಲಿ ವಿಕೆಟ್​ ಬೇಟೆಯಾಡ್ತಿದ್ದ ಮಿಥುನ್​​​, 13 ವರ್ಷಗಳ ಕಾಲ ಕರ್ನಾಟಕ ತಂಡದ ಪರ ಸೇವೆ ಸಲ್ಲಿಸಿದ್ದಾರೆ. 2008ರ ಮಾರ್ಚ್​ 3ರಂದು ಲೀಸ್ಟ್​ ಎ ಕ್ರಿಕೆಟ್​​ಗೆ ಪದಾರ್ಪಣೆ ಮಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದ್ರು.

ಮೊದಲ ಪಂದ್ಯದಲ್ಲಿ ವಿಕೆಟ್​ ಪಡೆಯುವಲ್ಲಿ ಮಿಥುನ್​ ವಿಫಲರಾದ್ರು. ಆದರೆ ಬಳಿಕ ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಂಡ ವೇಗಿ, ಎದುರಾಳಿ ಬ್ಯಾಟ್ಸ್​ಮನ್​ಗಳಿಗೆ ಕಂಟಕವಾಗಿ ಪರಿಣಮಿಸಿದ್ರು. ಹೀಗಾಗಿ 2009ರ ನವೆಂಬರ್ 3ರಂದು ರಣಜಿ ತಂಡದಲ್ಲೂ ಸ್ಥಾನ ಪಡೆದ ಕನ್ನಡಿಗ, ಮೊದಲ ಪಂದ್ಯದಲ್ಲೇ 11 ವಿಕೆಟ್​ ಕಬಳಿಸಿ ಸ್ಥಾನವನ್ನ ಭದ್ರಪಡಿಸಿಕೊಂಡಿದ್ದರು.

ಈ ಭರ್ಜರಿ ಪ್ರದರ್ಶನದಿಂದಾಗಿ ಟೀಮ್​ ಇಂಡಿಯಾಗೂ ಎಂಟ್ರಿ ಕೊಟ್ಟಿದ್ದರು. ಆದರೆ ಇಲ್ಲಿ ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ರು. ಮಿಥುನ್​ 103 ಪ್ರಥಮ ದರ್ಜೆ ಪಂದ್ಯಗಳಲ್ಲಿ 336 ವಿಕೆಟ್​ ಕಬಳಿಸಿದ ಸಾಧನೆ ಮಾಡಿದ್ದಾರೆ. ಜೊತೆಗೆ ಪ್ರಥಮ ದರ್ಜೆಯಲ್ಲಿ 1937ರನ್​ ಕೂಡ ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಚೆನ್ನೈ ಪಂದ್ಯ ಸೋತರೂ ಹೃದಯ ಗೆದ್ದ ಚಹರ್; ಮೈದಾನದಲ್ಲೇ ಗೆಳತಿಗೆ ಪ್ರಪೋಸ್

News First Live Kannada

Leave a comment

Your email address will not be published. Required fields are marked *