ಫಸ್ಟ್ ಟೈಮ್ ಅಂಧನ ಪಾತ್ರದಲ್ಲಿ ಗೋಲ್ಡನ್ ಸ್ಟಾರ್- ‘ಸಖತ್​’ ಆಗಿ ‘ಚಮಕ್​’ ಕೊಡಲಿದ್ದಾನೆ ‘ಬಾಲು’

ಸಖತ್ ಸಖತ್ ಸಖತ್.. ಸ್ಯಾಂಡಲ್​​ವುಡ್​ನಲ್ಲಿ ಸದ್ಯಕ್ಕಂತೂ ಸಖತ್ ಸಿನಿಮಾದ ಬಗ್ಗೆನೇ ಸಿಹಿ ಸಹಿ ಸಮಾಚಾರ.. ಒಂದೊಳ್ಳೆ ಕಾಮಿಡಿ ಎಂಟರ್​ಟೈನರ್​​ಗಾಗಿ ಕಾದಿರುವ ಸಿನಿ ಪ್ರೇಕ್ಷಕರಿಗೆ ಸಖತ್ ಹೋಳಿಗೆ ಊಟವನ್ನೇ ನೀಡಲು ಸಜ್ಜಾಗಿದೆ.. ಇಂದು ಪ್ರೇಕ್ಷಕರ ಮುಂದೆ ಬರಲಿರುವ ಸಖತ್ ಸಿನಿಮಾದ ಸಖತ್ ಸಮಾಚಾರ ನಿಮಗಾಗಿ..

ಇಂದು ತೆರೆ ಮೇಲೆ ಸಖತ್‌ ಸಿನಿಮಾದೊಂದಿಗೆ ಸಖತ್ತಾಗಿ ಬಂದು ಸಿನಿ ಪ್ರೇಕ್ಷಕರಿಗೆ ಸಖತ್‌ ರಂಜನೆ ನೀಡೋಕೆ ಮುಂದಾಗಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಪೋಸ್ಟರ್ , ಟೀಸರ್ , ಮೇಕಿಂಗ್ ಹಾಗೂ ಸಾಂಗ್ಸ್​​​ನಿಂದ ಸಖತ್ ಸಿನಿಮಾ ಕನ್ನಡಿಗರ ಎದೆಯಲ್ಲಿ ಕುತೂಹಲದ ಕೋಟೆ ಸೃಷ್ಟಿಸಿಕೊಂಡಿದೆ. ಗಣೇಶ್ ಅಭಿನಯದ 38ನೇ ಸಿನಿಮಾ ಇದಾಗಿದ್ದು ಸಿಂಪಲ್ ಸುನಿ ಕತೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಮಕ್ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಗೋಲ್ಡನ್ ಗಣಿ ಸಿಂಪಲ್ ಸುನಿ ಕಾಂಬಿನೇಶನ್​ನಲ್ಲಿ ಸಕತ್​​ ಕೂಡ ರೆಡಿಯಾಗಿದ್ದು, ಈ ಬಾರಿ ನಿರೀಕ್ಷೆಗೂ ಮೀರಿದ ಎಂಟರ್ಟೈನ್​ಮೆಂಟ್​​ ಸಿಗುತ್ತೆ ಅನ್ನೋ ಭರವಸೆಯನ್ನ ನೀಡುತ್ತಿದೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರ ಸಖತ್ ಸಿನಿಮಾದ ಪ್ರಮುಖ ಥಿಯೇಟರ್ ಆಗಿದ್ದು, ಇವತ್ತು ಬೆಳಗ್ಗೆ 10 ಗಂಟೆಗೆ ಚಿತ್ರ ತೆರೆಕಾಣಲಿದೆ. ಇನ್ನೂ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.

ಇನ್ನು ಸ್ಯಾಂಡಲ್​ವುಡ್​ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಕಂಪನಿಗಳಲ್ಲೊಂದಾಗಿರುವ ನಿಶಾ ವೆಂಕಟ್ ಕೋಣಂಕಿ ಒಡೆತನದ ಕೆವಿಎನ್ ನಿರ್ಮಾಣದ ಸಂಸ್ಥೆಯಡಿ ಸಖತ್, ಸಖತ್ ಆಗಿಯೇ ಮೂಡಿಬಂದಿದ್ದು ಫಸ್ಟ್ ಟೈಮ್ ಅಭಿನಯ ಚತುರ ಗಣೇಶ್ ಅಂಧನ ಪಾತ್ರವನ್ನ ಅಮೋಘವಾಗಿ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಬಾಲು ಎಂಬುವ ಪಾತ್ರವನ್ನ ಮಾಡಿರುವ ಗಣೇಶ್ ಅವರಿಗೆ ಕಣ್ಣು ಕಾಣುತ್ತೋ ಇಲ್ವೋ ಅನ್ನೋ ಕ್ಯೂರಿಯಾಸಿಟಿಯನ್ನ ಮೂಡಿಸಿರುವ ಚಿತ್ರತಂಡ ಇವತ್ತು ಸಿನಿಮಾ ರಿಲೀಸ್ ಮಾಡುವ ಮೂಲಕ ಆ ಕುತೂಹಲಕ್ಕೆ ಬ್ರೇಕ್​ ಹಾಕಲಿದೆ. ಇನ್ನೂ ಗೋಲ್ಡನ್ ಗಣಪನಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ಕಂಗೊಳಿಸಿದ್ದಾರೆ.

ಜೂಡ ಸ್ಯಾಂಡಿ ಸಂಗೀತ ಸಂಯೋಜನೆಯ ಸಖತ್ ಇಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಪರದೆಗಳಲ್ಲಿ ದೊಡ್ಡ ಮಟ್ಟಕ್ಕೆ ರಿಲೀಸ್ ಆಗಲಿದೆ. ಕಾಮಿಡಿ ಸಿನಿಮಾಗಳಿಗಾಗಿ ಕಾಯುತ್ತಿದ್ದ ಸಿನಿಪ್ರಿಯರಿಗೆ ಸಕತ್​ ರಸದೌತಣ ನೀಡುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

News First Live Kannada

Leave a comment

Your email address will not be published. Required fields are marked *