ಪಾಕಿಸ್ತಾನ ಸೂಪರ್​​ ಲೀನ್​​ನಲ್ಲಿ ತಲೆಗೆ ಪೆಟ್ಟುತಿಂದು ಆಸ್ಪತ್ರೆಗೆ ದಾಖಲಾಗಿದ್ದ ಸೌತ್​​ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಫಾಪ್ ಡುಪ್ಲೆಸಿಸ್, ಅಬುದಾಬಿಯ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಿಡುಗಡೆ ಬಳಿಕ ಹೋಟೆಲ್​​ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಡುಫ್ಲೆಸಿಸ್, ಸ್ವಲ್ಪ ಮೆಮೊರಿ ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟರ್​​ನಲ್ಲಿ ಬರೆದುಕೊಂಡಿರುವ ಫಾಫ್, ಚೇತರಿಕೆಗೆ ಫ್ರಾರ್ಥಿಸಿದ ಎಲ್ಲರಿಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಸದ್ಯ ನಾನು ಹೋಟೆಲ್​​​ಗೆ ಹಿಂತಿರುಗಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ. ಸ್ವಲ್ಪ ನೆನೆಪಿನ ಕಳೆದುಕೊಂಡಿದ್ದೇನೆ. ಆದ್ರೆ ನಾನು ಆರೋಗ್ಯವಾಗಿದ್ದೇನೆ. ನಾನು ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಂಡು, ಮತ್ತೆ ಮೈದಾನಕ್ಕೆ ಇಳಿಯುವುದಾಗಿ ಟ್ವೀಟ್ ಮಾಡಿದ್ದಾರೆ. ಇದರಿಂದಾಗಿ ಕೆಲ ಅಭಿಮಾನಿಗಳು ಅಘಾತಕ್ಕೆ ಒಳಗಾಗಿದ್ದರೆ. ಕೆಲವರು ತಲೆಗೆ ಜೋರಾದ ಪೆಟ್ಟು ಬಿದ್ದಾಗ ಹೀಗಾಗುವುದು ಸಾಮಾನ್ಯ ಶೀಘ್ರ ಚೇತರಿಸಿಕೊಳ್ಳುವುದಾಗಿ ಹಾರೈಸಿದ್ದಾರೆ.

 

 

The post ಫಾಫ್ ಡುಪ್ಲೆಸಿ ತಲೆಗೆ ಪೆಟ್ಟು- ನೆನಪಿನ ಶಕ್ತಿ ಕಳೆದುಕೊಂಡ್ರಾ ಆಫ್ರಿಕನ್ ಆಟಗಾರ..? appeared first on News First Kannada.

Source: newsfirstlive.com

Source link