‘ಫಾರ್ REGN’ ಚಿತ್ರದ ಎರಡನೇ ಸಾಂಗ್ ರೆಕಾರ್ಡಿಂಗ್ ಶುರು!

‘ಫಾರ್ REGN’ ಚಿತ್ರದ ಎರಡನೇ ಸಾಂಗ್ ರೆಕಾರ್ಡಿಂಗ್ ಶುರು!

ಬೆಂಗಳೂರು: ಇತ್ತೀಚೆಗಷ್ಟೆ ‘ಫಾರ್ REGN’ ತಂಡ ಮೊದಲ ಹಾಡನ್ನು ರೆಕಾರ್ಡಿಂಗ್ ಮುಗಿಸಿ, ಸಿನಿಮಾ ಪ್ರಿಯರಿಗೆ ಒಳ್ಳೆಯ ಸುದ್ದಿಯನ್ನು ನೀಡಿತ್ತು. ಇದರ ಬೆನ್ನಲ್ಲೆ ಈಗ ಮತ್ತೊಂದು ಹೊಸ ಸುದ್ದಿಯನ್ನ ನೀಡಿದೆ‌.

ಹೌದು‌.. ‘ಫಾರ್ REGN’ ಚಿತ್ರದ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದ್ದು, ಚಿತ್ರದ ಸಾಂಗ್ ರೆಕಾರ್ಡಿಂಗ್ ಭರದಿಂದ ಸಾಗಿದೆ. ನಿಶ್ಚಲ್ ಫಿಲಮ್ಸ್ ಬ್ಯಾನರ್ ಅಲ್ಲಿ ಮೂಡಿ ಬರುತ್ತಿರುವ ‘ಫಾರ್ REGN’ ಚಿತ್ರತಂಡದ ಎರಡನೇ ಹಾಡು ಲೂಪ್ ಎಂಟರ್ಟೈನ್ಮೆಂಟ್ ಸ್ಟೋಡಿಯೋದಲ್ಲಿ ಸಾಂಗ್ ರೆಕಾರ್ಡಿಂಗ್ ಆಗಿದೆ.

ಹರೀಶ್ ಆರ್.ಕೆ. ಸಂಗೀತ ನಿರ್ದೇಶನ ಹೊಂದಿರುವ ಸಖತ್ ಮಾಸ್ ಸಾಂಗ್ ‘ಡೊಂಟ್ ವರಿ ಬ್ರೋ’ ಹಾಡನ್ನು ರ್‍ಯಾಪರ್‌ ಚಂದನ್‌ ಶೆಟ್ಟಿ ಹಾಡಿದ್ದಾರೆ. ಹಾಡಿನ ಕುರಿತು ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದ ಚಂದನ್ ಶೆಟ್ಟಿ.. ಕಥೆಗೆ ತಕ್ಕಂತೆ ಭರಾಟೆ ಖ್ಯಾತಿಯ ಚೇತನ ಕುಮಾರ್ ಸಾಹಿತ್ಯವನ್ನು ಬರೆದಿದ್ದಾರೆ. ನವೀನ್ ದ್ವಾರಕನಾಥ್ ನಿರ್ದೇಶಕ ರಾಗಿದ್ದು,ನವೀನ್ ರಾವ್ ನಿರ್ಮಾಪಕ ರಾಗಿದ್ದಾರೆ. ಅದೇ ರೀತಿ ಪ್ರಥ್ವಿ ಅಂಬಾರ ಹಾಗೂ ಮಿಲನಾ ನಾಗರಾಜ ನಟ ,ನಟಿಯಾಗಿ ಬಣ್ಣ ಹಚ್ಚಿದ್ದಾರೆ.

The post ‘ಫಾರ್ REGN’ ಚಿತ್ರದ ಎರಡನೇ ಸಾಂಗ್ ರೆಕಾರ್ಡಿಂಗ್ ಶುರು! appeared first on News First Kannada.

Source: newsfirstlive.com

Source link