ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​​ ಪಂದ್ಯ ಜೂನ್​ 18ರಂದು ನಡೆಯಲಿದೆ. ಈ ಪಂದ್ಯದ ನಂತರ ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ನಡೆಯಲಿದೆ. ಐಸಿಸಿಯ ಮಹತ್ವದ ಪಂದ್ಯ ಮತ್ತು ಇಂಗ್ಲೆಂಡ್​ ಎದುರಿನ ಸರಣಿಗೆ ಈಗಾಗಲೇ ಟೀಮ್​​ ಇಂಡಿಯಾ ಪ್ರಕಟಗೊಂಡಿದ್ದು, ಜೂನ್​​ 2ರಂದು ಇಂಗ್ಲೆಂಡ್​​ಗೆ ಹಾರಲಿದೆ. ಮೇ 19ರಂದು ಕೆಲ ಆಟಗಾರರು ಮುಂಬೈನ ಹೋಟೆಲ್​ ಕ್ವಾರಂಟೀನ್​​ಗೆ ಒಳಪಟ್ಟಿದ್ದು, ಆಟಗಾರರನ್ನು ಗುಂಪುಗಳಾಗಿ ವಿಂಗಡಿಸಲಾಗಿದೆ. ಸೋಮವಾರ ಆಲ್​​ರೌಂಡರ್​ ರವೀಂದ್ರ ಜಡೇಜಾ, ಮುಂಬೈನಲ್ಲಿ ತಂಡವನ್ನು ಕೂಡಿಕೊಂಡ ಬೆನ್ನಲ್ಲೆ ಟೀಮ್‌ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಹೌದು..!! ಐಪಿಎಲ್​​ನಲ್ಲಿ ಅಪೆಂಡಿಸೈಟಿಸ್​​ಗೆ ಒಳಗಾಗಿದ್ದ ಕೆ.ಎಲ್​.ರಾಹುಲ್​​ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಇಂಗ್ಲೆಂಡ್​ಗೆ ಹಾರಲು ಸಿದ್ದರಾಗಿದ್ದಾರೆ. ಹಿಟ್​ಮ್ಯಾನ್​ ರೋಹಿತ್ ಶರ್ಮಾ ಮತ್ತು ಭರವಸೆಯ ಆಟಗಾರ ಶುಭ್ಮನ್ ಗಿಲ್ ಓಪನಿಂಗ್​​ಗೆ ಮೊದಲ ಆಯ್ಕೆಯಲ್ಲಿದ್ದಾರೆ. ಹೀಗಾಗಿ ರಾಹುಲ್​​ ಬ್ಯಾಕಪ್​​ ಓಪನರ್ ಆಗಿ ಇರಲಿದ್ದಾರೆ. ರಾಹುಲ್‌ ಸೇರಿದಂತೆ ಯಾಱರು ವೈದ್ಯಕೀಯ ಚಿಕಿತ್ಸೆಗೆ ಒಳಪಟ್ಟಿರುತ್ತಾರೋ ಅವರು, ಪೂರ್ತಿ ಚೇತರಿಸಿಕೊಂಡರಷ್ಟೇ ಇಂಗ್ಲೆಂಡ್‌ ಪ್ರವಾಸಕ್ಕೆ ಎಂಬ ಷರತ್ತಿನೊಂದಿಗೆ ಆಯ್ಕೆ ಮಾಡಲಾಗಿತ್ತು. ಇದೀಗ ರಾಹುಲ್​ ಜೊತೆಗೆ, ಕೊರೊನಾ ಪಾಸಿಟಿವ್​ ಬಂದಿದ್ದ ವೃದ್ದಿಮಾನ್​ ಸಾಹಾ, ಪ್ರಸಿದ್ಧ್​ ಕೃಷ್ಣಾ ಕೂಡ ಗುಣಮುಖರಾಗಿದ್ದು, ತಂಡಕ್ಕೆ ಸೇರಿಕೊಂಡಿದ್ದಾರೆ.

The post ಫಿಟ್ನೆಸ್​ನತ್ತ ಕೆ.ಎಲ್.ರಾಹುಲ್- ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್​ ಆಡ್ತಾರಾ ಕನ್ನಡಿಗ..? appeared first on News First Kannada.

Source: newsfirstlive.com

Source link