ಫಿಟ್​​ ಇಲ್ಲದ ಪಾಂಡ್ಯಾಗೆ ಚಾನ್ಸ್​ ಸಿಗ್ತಿರೋದ್ಯಾಕೆ?​ ಗುಟ್ಟು ರಟ್ಟು ಮಾಡಿದ ಮಾಜಿ ಸೆಲೆಕ್ಟರ್


ಟೀಮ್​ ಇಂಡಿಯಾದಲ್ಲಿ ಒಂದೊಂದು ಸ್ಥಾನಕ್ಕಾಗಿ ನೇರಾನೇರ ಪೈಪೋಟಿ ಏರ್ಪಟ್ಟಿದೆ. ಇಷ್ಟಿದ್ದರೂ ತಂಡದಲ್ಲಿ ಫಿಟ್​ನೆಸ್​ ಸಮಸ್ಯೆ ಎದುರಿಸ್ತಿರೋ ಆಟಗಾರರಿಗೆ, ಸ್ಥಾನ ನೀಡಲಾಗ್ತಿದೆ. ಇದು ಪ್ರತಿಭಾನ್ವಿತ ಆಟಗಾರರಿಗೆ ಮಾಡ್ತಿರುವ ಮೋಸ ಅಂತ, ಮಾಜಿ ಸೆಲೆಕ್ಟರ್​ ಗುಡುಗಿದ್ದಾರೆ. ಹಾಗೇ ಫಿಟ್​​ನೆಸ್​ ವಿಷಯದಲ್ಲಿ ಆಟಗಾರನನೊಬ್ಬ ಮಾಡ್ತಿರುವ ಮೋಸದ ಗುಟ್ಟೊಂದನ್ನೂ, ಬಹಿರಂಗಪಡಿಸಿದ್ದಾರೆ.

ಹಾರ್ದಿಕ್​ ಪಾಂಡ್ಯ.. ಟೀಮ್​ ಇಂಡಿಯಾದ ಗ್ರೇಟ್​​ ಆಲ್​ರೌಂಡರ್​. ಇದು ಎರಡು ವರ್ಷಗಳ ಹಿಂದಿನ ಮಾತು. ಆದರೀಗ ಪ್ರತಿ ಸರಣಿ-ಟೂರ್ನಿಗಳಲ್ಲೂ ಹಾರ್ದಿಕ್​ಗೆ​ ಕಾಡ್ತಿದೆ ಫಿಟ್​​ನೆಸ್​ ಸಮಸ್ಯೆ. ಬೌಲಿಂಗ್​​​ ಮಾಡೋದಕ್ಕೂ ಅನ್​​ಫಿಟ್​, ಬ್ಯಾಟಿಂಗ್​​​ನಲ್ಲೂ ಫೆಲ್ಯೂರ್​​..! ಹೀಗಾಗಿ ಬರೋಡಾ ಸ್ಟಾರ್​​ ಫಿಟ್​​ನೆಸ್​ ಬಗ್ಗೆ, ಆರೋಪಗಳ ಮೇಲೆ ಆರೋಪಗಳು ಎದ್ದಿದ್ವು. ಇದೀಗ ಈ ಆಲ್​ರೌಂಡರ್​​ ಮೇಲೆ ಮತ್ತೊಂದು ದೊಡ್ಡ ಆರೋಪ ಬಂದಿದೆ.

ಸದ್ಯ ಹಾರ್ದಿಕ್​ ಮೇಲೆ ಆರೋಪ ಮಾಡಿರೋದು, ಮಾಜಿ ಸೆಲೆಕ್ಟರ್​​ ಸರಣ್​ದೀಪ್​ ಸಿಂಗ್​.! IPL​​, T20 ವಿಶ್ವಕಪ್​ನಲ್ಲಿ ಬೌಲ್​ ಮಾಡದ ಈ ಮಧ್ಯಮ ವೇಗಿ, ಪಾಕ್​ ವಿರುದ್ಧದ ಪಂದ್ಯದಲ್ಲಿ ಭುಜದ ನೋವಿಗೆ ತುತ್ತಾದ್ರು. ಹಾರ್ದಿಕ್​ ಇನ್ನು ಫಿಟ್​​ ಆಗಿಲ್ಲ ಅನ್ನೋದನ್ನ ಇದು ಸೂಚಿಸ್ತಿದೆ. ಹೀಗಾಗಿ ಸರಣ್​ದೀಪ್​, ಸೆಲೆಕ್ಷನ್​​ ಕಮಿಟಿ ಮತ್ತು ಟೀಮ್​​​ ಮ್ಯಾನೇಜ್‌ಮೆಂಟ್‌ ವಿರುದ್ಧ ಗುಡುಗಿದ್ದಾರೆ. ಮನಸ್ಸಿಗೆ ಬಂದಂತೆ ಆಟಗಾರರ ಆಯ್ಕೆ ಮಾಡಲಾಗ್ತಿದೆ ಅಂತಾನೂ ಕಿಡಿಕಾರಿದ್ದಾರೆ.

‘ಆಯ್ಕೆ ಸಮಿತಿ ನಿರ್ಧಾರ ಪ್ರಶ್ನಿಸುವಂತಿದೆ’
‘ಹಾರ್ದಿಕ್ ಫಿಟ್‌ನೆಸ್ ಸಮಸ್ಯೆ ಬಗ್ಗೆ ಚರ್ಚೆ ನಡೀತಿದ್ದು, ಈ ಕುರಿತು ಆಯ್ಕೆ ಸಮಿತಿಯನ್ನ ಪ್ರಶ್ನಿಸಬೇಕಾಗಿದೆ. ಹಾರ್ದಿಕ್​ ಸಂಪೂರ್ಣ ಫಿಟ್ ಅಂತ ಆಯ್ಕೆ ಸಮಿತಿಯ ಅಧ್ಯಕ್ಷರು ಹೇಳಿದ್ರು. ಇದೀಗ ಫಿಟ್‌ನೆಸ್ ಎಲ್ಲಿದೆ ಎಂದು ಪ್ರಶ್ನಿಸುವಂತಾಗಿದೆ. ಸೆಲೆಕ್ಷನ್​ ಕಮಿಟಿ ಏನಾದ್ರು ಹೇಳಲಿ, ಪಾಂಡ್ಯ​ ಬೌಲಿಂಗ್​ ಮಾಡೋದಕ್ಕೆ ಅನ್​ಫಿಟ್​​ ಅನ್ನೋದು ಗೊತ್ತಾಗುತ್ತೆ. ಇದು ಯುವ ಆಟಗಾರರಿಗೆ ಮೋಸ ಮಾಡಿದಂತೆ ಅನ್ನೋದು ಭಾಸವಾಗ್ತಿದೆ’
            -ಸರಣ್​ದೀಪ್​ ಸಿಂಗ್​, ಮಾಜಿ ಸೆಲೆಕ್ಟರ್​

 

ಇದಷ್ಟೆ ಅಲ್ಲ..! ಮಾಜಿ ಸೆಲೆಕ್ಟರ್ ಸರಣ್​ ದೀಪ್​ ಸಿಂಗ್,​ ಫಿಟ್​​​ನೆಸ್​ ಪರೀಕ್ಷೆಗೆ ಹಾರ್ದಿಕ್ NCAಗೆ ಹೋಗದಿರುವ ಗುಟ್ಟನ್ನೂ ಬಹಿರಂಗಪಡಿಸಿದ್ದಾರೆ.

ಹಾರ್ದಿಕ್​ NCAಗೆ ಹೋಗೋದೇ ಇಲ್ಲ..!

‘ಫಿಟ್​ನೆಸ್​ ಸಮಸ್ಯೆ ಎದುರಿಸೋವಾಗ NCAಗೆ ಹೋಗೋದು ಕಡ್ಡಾಯ. ಆದ್ರೆ ಹಾರ್ದಿಕ್​ NCAಗೆ ಹೋಗೋದೇ ಇಲ್ಲ. IPLನ​​ ಮುಂಬೈ ಇಂಡಿಯನ್ಸ್​ ಸಿಬ್ಬಂದಿಗೆ ಆಮೀಷ ತೋರಿಸಿ ಚಿಕಿತ್ಸೆ ಪಡೆದು ಸಿದ್ಧರಾಗ್ತಾರೆ. ರೋಹಿತ್ ಶರ್ಮಾ​​ಗೂ ಗೊತ್ತಾಗದಂತೆ ಈ ವಿಷಯ ಮುಚ್ಚಿಟ್ಟಿದ್ದಾರೆ. ಜೊತೆಗೆ ಸರಿಯಾದ ಆಯ್ಕೆಗೆ ಟೀಮ್​ ಮ್ಯಾನೇಜ್​ಮೆಂಟ್​ ನಿರ್ಲಕ್ಷ್ಯವಹಿಸ್ತಿದೆ. ಆದರೆ ಆಯ್ಕೆ ಸಮಿತಿ ಕಟ್ಟುನಿಟ್ಟಾಗಿರಬೇಕು. ಆಟಗಾರರು ಫಿಟ್​ ಆಗಿದ್ರೆ ಬಹಿರಂಗಪಡಿಸಿ, ಇಲ್ಲವಾದಲ್ಲಿ ಇಡೀ ತಂಡದ ಸಂಯೋಜನೆಗೆ ಅಡ್ಡಿಯಾಗುತ್ತೆ’
      -ಸರಣ್​ದೀಪ್​ ಸಿಂಗ್​, ಮಾಜಿ ಸೆಲೆಕ್ಟರ್​

ಹಾರ್ದಿಕ್​​ ಬೇಜವಾಬ್ದಾರಿತನ, ಪ್ರತಿಸಲ ಇದನ್ನೇ ರಿಪೀಟ್​ ಮಾಡೋದ್ರಿಂದ ಪದೆಪದೇ ಇಂಜುರಿಗೆ ಒಳಗಾಗ್ತಿದ್ದಾರೆ. ಇದರಿಂದ ಸಂಪೂರ್ಣ ಚೇತರಿಕೆ ಕಾಣುವಲ್ಲಿ ವಿಫಲರಾಗುತ್ತಿದ್ದಾರೆ. ಇಷ್ಟಾದರೂ ಆಯ್ಕೆ ಸಮಿತಿ ಮತ್ತು ಟೀಮ್​ ಮ್ಯಾನೇಜ್​ಮೆಂಟ್,​ ಹಾರ್ದಿಕ್​ ಪಾಂಡ್ಯಾಗೇ ಹೆಚ್ಚು ಒಲವು ನೀಡೋದು ಸರಿಯಲ್ಲ. ಇದು ಪ್ರತಿಭಾನ್ವಿತ ಆಟಗಾರರಿಗೆ ಮೋಸ ಮಾಡಿದಂತಾಗುತ್ತೆ. ಹಾಗಾಗಿ ಮುಂದಾದರೂ ಸೆಲೆಕ್ಷನ್​ ಕಮಿಟಿಯ ನಿರ್ಧಾರಗಳು ಬದಲಾಗಲಿ ಅನ್ನೋದೇ, ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

News First Live Kannada


Leave a Reply

Your email address will not be published. Required fields are marked *