ಫಿಫಾ ಅಂಡರ್‌-17 ಮಹಿಳಾ ವಿಶ್ವಕಪ್‌: ನಿರ್ದೇಶಕಿ ರೋಮಾ ಖನ್ನಾ ರಾಜೀನಾಮೆ

ಹೊಸದಿಲ್ಲಿ: ಫಿಪಾ ಅಂಡರ್‌-17 ಮಹಿಳಾ ವಿಶ್ವಕಪ್‌ ಮತ್ತು ಎಎಫ್ಸಿ ಮಹಿಳಾ ಏಶ್ಯನ್‌ ಕೂಟದ ನಿರ್ದೇಶಕಿಯಾಗಿದ್ದ ರೋಮಾ ಖನ್ನಾ ತಮ್ಮ ಸ್ಥಾನಕ್ಕೆ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ.

“ನನ್ನ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ಎಐಎಫ್ಎಫ್ ಮತ್ತು ಫಿಫಾಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತದಲ್ಲಿ ಪಂದ್ಯಾವಳಿಯನ್ನು ನಡೆಸುವುದು ಹೆಮ್ಮೆ ಮತ್ತು ಗೌರವದ ವಿಚಾರವಾಗಿದೆ. ನಾನು ಸ್ಥಳೀಯ ಸಂಘಟನಾ ಸಮಿತಿಯಲ್ಲಿ ಮಾಡಿದ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ’ ಎಂದು ರೋಮಾ ಖನ್ನಾ ಹೇಳಿದ್ದಾರೆ.

“ಖನ್ನಾ ಭಾರತದ ಫ‌ುಟ್‌ಬಾಲ್‌ನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ರಾಜೀನಾಮೆ ಬೇಸರ ಮೂಡಿಸಿದೆ. ಆದರೆ ಅವರ ವೈಯಕ್ತಿಕ ನಿರ್ಧಾರವನ್ನು ಗೌರವಿಸುತ್ತೇವೆ ಮತ್ತು ಅವರಿಗೆ ಶುಭ ಹಾರೈಸುತ್ತೇವೆ’ ಎಂದು ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಕುಶಲ್‌ ದಾಸ್‌ ಹೇಳಿದರು.

ಕ್ರೀಡೆ – Udayavani – ಉದಯವಾಣಿ
Read More