ಬೆಂಗಳೂರು: ಖಾಸಗಿ ಶಾಲೆಗಳು ಫೀಸ್​​ಗಾಗಿ ಪೋಷಕರಿಗೆ ಟಾರ್ಚರ್ ಮಾಡ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ.

ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿ ರಚನೆಗೆ ಅರ್ಜಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಸಮಿತಿ ಸೂಚನೆಯಂತೆ ಶುಲ್ಕ ನಿಗದಿ ಮಾಡಲು ಪರಿಶೀಲನೆಗೆ ಮನವಿ ಮಾಡಲಾಗಿದೆ. ಕೊರೊನಾ ವೇಳೆ ಪೋಷಕರಿಗೆ ಸಂಪೂರ್ಣ ಶುಲ್ಕ ಭರಿಸೋದು ಕಷ್ಟವಾಗ್ತಿದೆ. ಈ ಶುಲ್ಕ ನಿಗದಿ ಮಾಡಲು ಸಮಿತಿ ರಚನೆ ಅಗತ್ಯವೆಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದೆ. ಮಧ್ಯಂತರ ಪತ್ರದ ಮೂಲಕ ಸರ್ಕಾರದ ಆಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವದಗಿಯಿಂದ ಮನವಿ ಮಾಡಿಕೊಂಡರು.

ಈಗಾಗಲೇ ಶೇ‌. 70% ಸಮಶುಲ್ಕ ಕಟ್ಟಿಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿತ್ತು. ಪೋಷಕರಿಗೆ ಶೇಕಡಾ 30% ರಿಯಾಯಿತಿ ನೀಡಲು ಸೂಚಿಸಲಾಗಿತ್ತು. ಇದನ್ನ ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ರಿಟ್ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಕೇಸ್ ವಿಚಾರಣೆ ಮುಗಿಯುವತನಕ ಬಲವಂತ ಕ್ರಮ ತೆಗೆದುಕೊಳ್ಳದಂತೆ ಆದೇಶಿಸಿತ್ತು. ಅಲ್ಲದೇ ಮುಂದಿನ ವಿಚಾರಣೆಯನ್ನ ಜೂನ್ 21 ರಂದು ನಡೆಸಲು ನಿಗದಿ ಮಾಡಿತು.

ಸದ್ಯ ಖಾಸಗಿ ಶಾಲೆಗಳು ಶೇಕಡಾ 100% ಶುಲ್ಕಕ್ಕೆ ಪೋಷಕರ ಮೇಲೆ ಒತ್ತಡ ಹೇರಲಾಗುತ್ತಿದೆ ಅಂತಾ ರಾಜ್ಯ ಸರ್ಕಾರ & ಶಿಕ್ಷಣ ಇಲಾಖೆಗಳಿಗೆ ದೂರುಗಳ‌ ಮಹಾಪೂರವೇ ಹರಿದು ಬರುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಒಕ್ಕೂಟ & ಪೋಷಕರು ಬಗೆ ಹರಿಸಿಕೊಳ್ಳಲು ಹೇಳಿತ್ತು. ಆದರೆ ಇದಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಪಟ್ಟು ಬಿಟ್ಟಿಲ್ಲ. ಇಂತಹ ಸಂಧರ್ಭದಲ್ಲಿ ಸಮಿತಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದು ರಾಜ್ಯ ಸರ್ಕಾರ ಅರ್ಜಿಯಲ್ಲಿ ಹೇಳಿದೆ.

ಸೋಮವಾರ ಖಾಸಗಿ ಶಾಲೆ & ಪೋಷಕರ ಕಡೆಯ ವಕೀಲರು ಹಾಗೂ ಸರ್ಕಾರದ ವಕೀಲರು ವಾದಿಸಲಿದ್ದಾರೆ. ಸೋಮವಾರ ಹೈಕೋರ್ಟ್ ಖಾಸಗಿ ಶಾಲೆ ಫೀಸ್ ಬಗ್ಗೆ ಒಂದು ನಿರ್ಧಾರ ಸಾಧ್ಯತೆ ಇದೆ.

The post ಫೀಸ್​​ಗಾಗಿ ಖಾಸಗಿ ಶಾಲೆಗಳಿಂದ ಟಾರ್ಚರ್​; ‘ಶುಲ್ಕ ನಿಗದಿ ಸಮಿತಿ’ ರಚನೆಗೆ ಪ್ರಸ್ತಾಪಿಸಿದ ಸರ್ಕಾರ appeared first on News First Kannada.

Source: newsfirstlive.com

Source link