ಫೀಸ್ ಕಟ್ಟಲು ಪೋಷಕರಿಗೆ ಸಾಲ ಕೊಡಿಸಿದ್ರೆ ಹುಷಾರ್​ -ಖಾಸಗಿ ಶಾಲೆಗಳಿಗೆ ವಾರ್ನಿಂಗ್

ಫೀಸ್ ಕಟ್ಟಲು ಪೋಷಕರಿಗೆ ಸಾಲ ಕೊಡಿಸಿದ್ರೆ ಹುಷಾರ್​ -ಖಾಸಗಿ ಶಾಲೆಗಳಿಗೆ ವಾರ್ನಿಂಗ್

ಕೋಲಾರ: ಪೋಷಕರಿಂದ ಫೀಸ್​ಗಾಗಿ ಖಾಸಗಿ ಶಾಲೆಗಳು ವಸೂಲಿಗಿಳಿದಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್.. ಖಾಸಗಿ ಶಾಲೆಗಳು ಪೋಷಕರನ್ನ ಫೈನಾನ್ಸ್​ನವರಿಂದ ಸಾಲ ಕೊಡಿಸುತ್ತಿರುವುದು ಗೊತ್ತಾಗಿದೆ.. ನಿನ್ನೆ ಮುಖ್ಯಮಂತ್ರಿಗಳಿಗೆ ಈ ವಿಚಾರ ಗೊತ್ತಾಗಿ ಬಹಳ ಖಾರವಾಗಿ ಹೇಳಿದ್ದಾರೆ.

ಇದಾವುದಕ್ಕೂ ನಾವು ಅವಕಾಶ ಕೊಡುವುದಿಲ್ಲ.. ಸಂಬಂಧಪಟ್ಟವರಿಗೆ ನೋಟಿಸ್ ಕೊಡುತ್ತೇವೆ. ಪೋಷಕರ ಆರ್ಥಿಕ ಪರಿಸ್ಥಿತಿ ಹಾಗು ಶಿಕ್ಷಕರಿಗೆ ವೇತನ ಪಾವತಿಯಾಗದೆ ಇರುವುದು ತಿಳಿದಿದೆ. ಈ ಎರಡು ವಿಚಾರ ಬ್ಯಾಲೆನ್ಸ್ ಮಾಡಬೇಕಾಗಿದೆ. ಹಾಗಾಗಿ ಕಳೆದ ವರ್ಷ ಫೀಸ್ ವಿಚಾರ ಕೋರ್ಟ್​ಗೆ ಹೋಗಿದೆ. ಸರ್ಕಾರ ಶೇ.30 ರಷ್ಟು ಶುಲ್ಕ ಜಾರಿ ಮಾಡಿ ಅದೇಶ ಹೊರಡಿಸಲಾಗಿದೆ.

ಆದ್ರೆ ಒಂದಷ್ಟು ಸಂಘಟನೆಗಳು ಹಾಗೂ ಖಾಸಗಿ ಶಾಲೆಯವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವರ್ಷವೂ ಕೂಡ ಇದೇ ಪರಿಸ್ಥಿತಿ ಇದೆ. ಹಾಗಾಗಿ ಶಾಲೆ ಆಡಳಿತ ಮಂಡಳಿ ಹಾಗೂ ಪೋಷಕರೇ ಇದನ್ನ ಬಗೆಹರಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ.

The post ಫೀಸ್ ಕಟ್ಟಲು ಪೋಷಕರಿಗೆ ಸಾಲ ಕೊಡಿಸಿದ್ರೆ ಹುಷಾರ್​ -ಖಾಸಗಿ ಶಾಲೆಗಳಿಗೆ ವಾರ್ನಿಂಗ್ appeared first on News First Kannada.

Source: newsfirstlive.com

Source link