ಚಿಕ್ಕಮಗಳೂರು: ಕೋವಿಡ್​ ಸೋಂಕಿತರಿಗೆ ಫುಡ್​ಕಿಟ್​ ನೀಡಿದ್ದೇವೆ ಆದ್ದರಿಂದ ಪಡಿತರ ಕೊಡಲ್ಲ ಅಂತ ರೇಷನ್​ ನೀಡಲು ನ್ಯಾಯಬೆಲೆ ಅಂಗಡಿಯೊಂದು ನಿರಾಕರಿಸಿರುವ ​ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದಲ್ಲಿ 47 ಕುಟುಂಬದ 75 ಜನರಿಗೆ ಪಾಸಿಟಿವ್ ಬಂದಿತ್ತು. ಎಲ್ಲರಿಗೂ ಕ್ವಾರಂಟೈನ್ ಮಾಡಿದ್ದ ತಾಲೂಕು ಆಡಳಿತ ಫುಡ್​ ಕಿಟ್ ನೀಡಿತ್ತು. ಈ ಹಿನ್ನೆಲೆ ಈಗ ರೇಷನ್​ ಕೊಡಲ್ಲ ಅಂತ ಸೊಸೈಟಿಯವರು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಕ್ವಾರಂಟೈನ್​ನಲ್ಲಿದ್ದ ಕುಟುಂಬಗಳಿಗೆ ತಾಲೂಕು ಆಡಳಿತ 10 ಕೆ.ಜಿ. ಅಕ್ಕಿ, ಎಣ್ಣೆ, ಬೇಳೆ, ಉಪ್ಪು ಸೇರಿ ವಿವಿಧ ಸಾಮಾಗ್ರಿಗಳ ಕಿಟ್ ನೀಡಿತ್ತು. ಆದ್ರೆ ಈಗ ಜನರಿಗೆ ರೇಷನ್​ ಕಟ್​ ಮಾಡಿರುವುದಕ್ಕೆ ಗರಂ ಆಗಿರುವ ಜನರು ಸೊಸೈಟಿ ಮುಂದೆ ಧರಣಿ ಕುಳಿತು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

The post ‘ಫುಡ್​ ಕಿಟ್ ಕೊಟ್ಟಿದ್ದೀವಿ.. ರೇಷನ್ ಕೊಡೋದಿಲ್ಲ’ ಎಂದ ಸೊಸೈಟಿ ಎದುರು ಧರಣಿ ಕೂತ ಜನರು appeared first on News First Kannada.

Source: newsfirstlive.com

Source link