ಫುಡ್​ ಡೆಲಿವರಿಗಾಗಿ 30,000 ಕಿ.ಮೀ ಪ್ರಯಾಣಿಸಿದ ಈ ಯುವತಿ – Woman travels more than 30000 kms to complete food delivery Watch


Food Delivery Agent : ಸಿಂಗಾಪುರದಿಂದ ಅಂಟಾರ್ಟಿಕಾ ತನಕ, ವಾಯುಮಾರ್ಗ, ಭೂಮಾರ್ಗ, ಜಲಮಾರ್ಗದ ಮೂಲಕ ಪ್ರಯಾಣಿಸಿ, ಹಿಮಪ್ರದೇಶದಲ್ಲಿ ನಡೆದು ತನ್ನ ಗ್ರಾಹಕರಿಗೆ ಆಹಾರವನ್ನು ತಲುಪಿಸುತ್ತಾಳೆ ಈ ಯುವತಿ! ನೋಡಿ ವಿಡಿಯೋ.

ಫುಡ್​ ಡೆಲಿವರಿಗಾಗಿ 30,000 ಕಿ.ಮೀ ಪ್ರಯಾಣಿಸಿದ ಈ ಯುವತಿ

Woman travels more than 30,000 kms to complete food delivery.

Viral Video : ಎಷ್ಟೆಷ್ಟೋ ದೂರದಿಂದ ಫುಡ್​ ಏಜಂಟರುಗಳು ನಮಗೆ ಆಹಾರವನ್ನು ಸರಿಯಾದ ಸಮಯದಲ್ಲಿ ತಲುಪಿಸಿ ಹೋಗುತ್ತಾರೆ. ಆದರೆ ಸಾವಿರಾರು ಕಿ.ಮೀಟರ್​ಗಟ್ಟಲೆ ಪ್ರಯಾಣಿಸಿದವರನ್ನು ಈತನಕ ಕೇಳಿದ್ದಿರಾ ಅಥವಾ ನೋಡಿದ್ದಿರಾ? ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಯುವತಿ ಫುಡ್​ ಡೆಲಿವರಿಗಾಗಿ ಪ್ರಯಾಣಿಸಿದ್ದು ಬರೋಬ್ಬರಿ 30,000 ಕಿ.ಮೀ! ಸಿಂಗಾಪುರದಿಂದ ಅಂಟಾರ್ಟಿಕಾತನಕ ಈಕೆ ಪ್ರಯಾಣಿಸಿದ ಮಾಂಟೇಜ್​ ಅನ್ನೂ ಇನ್​ಸ್ಟಾಗ್ರಾಂನಲ್ಲಿ ನೋಡಬಹುದಾಗಿದೆ.

ಸಿಂಗಾಪುರದಿಂದ ವಿಮಾನದಲ್ಲಿ ಪ್ರಯಾಣ ಪ್ರಾರಂಭಿಸಿ, ಹ್ಯಾಂಬರ್ಗ್​ಗೆ ಹೋಗುತ್ತಾಳೆ. ನಂತರ ಬ್ಯೂಯಾನಸ್ ಏರ್ಸ್, ಉಷೂಯಾ ನಂತರ ಅಂಟಾರ್ಟಿಕಾಗೆ ಬರುತ್ತಾಳೆ. ಭೂಮಾರ್ಗ, ಜಲಮಾರ್ಗ, ವಾಯುಮಾರ್ಗ ಕೊನೆಗೆ ಹಿಮಪ್ರದೇಶದಲ್ಲಿ ಪ್ರಯಾಣಿಸಿ ಗ್ರಾಹಕರಿಗೆ ಆಹಾರವನ್ನು ತಲುಪಿಸುತ್ತಾಳೆ.

ಈತನಕ ಸುಮಾರು 40,000 ಜನರು ಈ ವಿಡಿಯೋ ನೋಡಿದ್ದಾರೆ. 6,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಹಲವರು ಇದನ್ನು ಅದ್ಭುತ ಎಂದಿದ್ದಾರೆ. ಇನ್ನೂಕೆಲವರು ಹುಚ್ಚುತನ ಎಂದಿದ್ದಾರೆ. ಡೆಲಿವರಿಯ ಚಾರ್ಜ್​ ಎಷ್ಟಾಗಿತ್ತು ಎಂದು ಕೇಳಿದ್ದಾರೆ ಕೆಲವರು.

ಇದನ್ನು ನೋಡಿದ ನೀವು ಏನು ಹೇಳುತ್ತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *