‘ಫುಲ್ ಬಾಟಲ್​​ಗೆ ಲಿಪ್​ ಒತ್ತಿದ ರಚ್ಚು’ ರಚಿತಾ ಬೋಲ್ಡ್​​ ಲುಕ್​​ಗೆ ಮಂಗ್ಲಿ ಸಾಂಗ್ ಕಿಕ್..!


ಏಕ್​ ಲವ್​ ಯಾ ಚಿತ್ರದ ಮೂರನೇ ಹಾಡು ಇದೇ ತಿಂಗಳು 12ಕ್ಕೆ ರೀಲೀಸ್​ ಆಗ್ತಿದೆ. ಇದರ ಪ್ರೋಮೋವನ್ನ ಈಗ ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕ ಪ್ರೇಮ್​ ತಮ್ಮ ಬಾಮೈದ ರಾಣ ಅವರನ್ನ ಈ ಚಿತ್ರದ ಮೂಲಕ ಹೀರೋ ಆಗಿ ಲಾಂಚ್​ ಮಾಡುತ್ತಿದ್ದಾರೆ. ಚಿತ್ರದ ಟೀಸರ್​ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿವೆ.

ಸಂಗೀತ ನಿರ್ದೇಶಕ ಅರ್ಜನ್​ ಜನ್ಯ ಅವರ ಸಾರಥ್ಯದಲ್ಲಿ “ಏಕ್​ ಲವ್​ ಯಾ” ಚಿತ್ರದ ಹಾಡುಗಳು ಮೂಡಿಬರುತ್ತಿದೆ. ಇನ್ನು ‘ಕಣ್ಣೇ ಅದರಿಂದಿ’ ಹಾಡಿನ ಮೂಲಕ ಕನ್ನಡಿಗರ ಮನಸು ಗೆದ್ದ ಗಾಯಕಿ ಸತ್ಯವತಿ ಮಂಗ್ಲಿ ಏಕ್​ ಲವ್​ ಯಾ ಸಿನಿಮಾದಲ್ಲಿ ಎಣ್ಣೆ ಹಾಡೊಂದನ್ನು ಹಾಡಿದ್ದಾರೆ. ಅಂತ ಈ ಹಿಂದೆ ಸುದ್ದಿಯಾಗಿತ್ತು ಅದರಂತೇ ಇದೀಗ ಮಂಗ್ಲಿ ಹಾಡಿರುವ ಎಣ್ಣೆ ಸಾಂಗ್​ನ ಪ್ರೋಮೊ ರಿಲೀಸ್​ ಆಗಿದೆ.

ಇನ್ನು ಈ ಹಾಡು ಯುವತಿಯರ ಬ್ರೇಕ್​ ಅಪ್​ ಸಾಂಗ್ ಆಗಿದ್ದು, ನವೆಂಬರ್​ 4 ನೇ ತಾರೀಖು ಇದನ್ನ ರಿಲೀಸ್​ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಆದ್ರೆ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್ ಅವರ ಸಾವಿನ ನೋವಿನಲ್ಲಿದ ಚಿತ್ರತಂಡ ಹಾಡಿನ ರಿಲೀಸ್​ ಡೇಟ್​ ಅನ್ನು ಮುಂದೂಡಿ ನವೆಂಬರ್​ 12 ಕ್ಕೆ ಈ ಎಣ್ಣೆ ಹಾಡನ್ನು ರಿಲೀಸ್​ ಮಾಡುತ್ತಿದೇ.

ಡಿಂಪಲ್​ ಕ್ವೀನ್​ ರಚಿತಾ ರಾಮ್​ ಅವರು ಎಣ್ಣೆ ಬಾಟಲ್​ ಹಿಡಿದು ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಜನವರಿ 21ಕ್ಕೆ “ಏಕ್​ ಲವ್​ ಯಾ”. ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲು ಅಣಿಯಾಗುತ್ತಿದೆ.

The post ‘ಫುಲ್ ಬಾಟಲ್​​ಗೆ ಲಿಪ್​ ಒತ್ತಿದ ರಚ್ಚು’ ರಚಿತಾ ಬೋಲ್ಡ್​​ ಲುಕ್​​ಗೆ ಮಂಗ್ಲಿ ಸಾಂಗ್ ಕಿಕ್..! appeared first on News First Kannada.

News First Live Kannada


Leave a Reply

Your email address will not be published. Required fields are marked *