ಹೈದರಾಬಾದ್​: ತನ್ನ ಪ್ರೇಯಸಿಯನ್ನು ನೋಡಲು ಅಕ್ರಮವಾಗಿ ಗಡಿದಾಟ್ಟಿದ್ದ ವ್ಯಕ್ತಿ ಬರೋಬ್ಬರಿ 4 ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ವಾಪಸ್​ ಆಗಿದ್ದಾನೆ.

ತೆಲಂಗಾಣದ ಮಧಾಪುರ್​​​ನಲ್ಲಿ 2017ರಲ್ಲಿ ಏಕಾಏಕಿ ನಾಪತ್ತೆಯಾಗಿದ್ದ 32 ವರ್ಷದ ವೈನ್ಡಮ್ ಪ್ರಶಾಂತ್, ಸ್ವಿಟ್ಜರ್ಲೆಂಡ್​​ನಲ್ಲಿದ್ದ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಅಕ್ರಮವಾಗಿ ಗಡಿದಾಟಿ ಪಾಕ್​​ ಸೈನಿಕರ ಕೈಗೆ ಸಿಕ್ಕಿಬಿದ್ದಿದ್ದ.

ಈ ವೇಳೆ ಆತ ತಾನು ಪಾಕಿಸ್ತಾನದ ಜೈಲಿನಲ್ಲಿ ಇರುವುದಾಗಿ ಕುಟುಂಬಸ್ಥರಿಗೆ ವಿಡಿಯೋ ಸಂದೇಶ ಕಳುಹಿಸಿದ್ದ. ಇದರಂತೆ ಕುಟುಂಬಸ್ಥರು ಮಧಾಪುರ್​​ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ನಾಪತ್ತೆಯಾಗಿದ್ದ ಪ್ರಶಾಂತ್​ ಹುಡುಕಾಟ ಆರಂಭಿಸದ್ದರು. ಇತ್ತ ಪ್ರಶಾಂತ್ ತಂದೆ ವಿದೇಶಾಂಗ ಇಲಾಖೆಗೂ ಪತ್ರ ಬರೆದು ಮಗನನ್ನು ವಾಪಸ್​ ಕರೆಯಿಸಲು ನೆರವು ಕೋರಿದ್ದರು.

4 ವರ್ಷ ಜೈಲು ಶಿಕ್ಷೆ
ಅಕ್ರಮವಾಗಿ ಗಡಿದಾಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ 4 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಪ್ರಶಾಂತ್​​ ಅವರನ್ನು ನಿನ್ನೆ ಗಡಿಯಲ್ಲಿ ಪಾಕಿಸ್ತಾನದ ಪೊಲೀಸರು ಭಾರತದ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದರು. ಇಂದು ಹೈದರಾಬಾದ್ ಪೊಲೀಸರ ಆತನನ್ನು ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಪ್ರಶಾಂತ್ ಮರಳಿ ಭಾರತಕ್ಕೆ ವಾಪಸ್​​ ಆಗಲು ತೆಲಂಗಾಣ ಸರ್ಕಾರ ಹಾಗೂ ವಿದೇಶಾಂಗ ಇಲಾಖೆ ಮಹತ್ವದ ಕಾರ್ಯ ನಿರ್ವಹಿಸಿತ್ತು. ಭಾರತಕ್ಕೆ ವಾಪಸ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್​, ಲಹೋರ್​ ಜೈಲಿನಲ್ಲಿ ಅಧಿಕಾರಿಗಳು, ಪೊಲೀಸರು ತನ್ನನ್ನು ಉತ್ತಮವಾಗಿ ನಡೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಅಂದಹಾಗೇ, ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ಪ್ರಶಾಂತ್​ ಪ್ರೀತಿಸುತ್ತಿದ್ದರು. ಆ ಯುವತಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದಳು. ಆದರೆ ಅನಿವಾರ್ಯಗಳಿಂದ ತಾನು ಸ್ವಿಟ್ಜರ್ಲೆಂಡ್​​​​ಗೆ ತೆರಳುತ್ತಿದ್ದಾಗಿ ಹೇಳಿದ್ದಳು. ಆದ್ದರಿಂದ ಪ್ರಶಾಂತ್ ಕೂಡ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಸ್ವಿಟ್ಜರ್ಲೆಂಡ್ ತೆರಳಲು ನಿರ್ಧರಿಸಿ ಮನೆ ಬಿಟ್ಟಿದ್ದ. ಆದರೆ ಮಾರ್ಗದ ನಡುವೆ ಪಾಕಿಸ್ತಾನ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

The post ಫೇಸ್​ಬುಕ್​​ನಲ್ಲಿ ಪ್ರೀತಿ.. ಪ್ರೇಯಸಿ ನೋಡಲು ಗಡಿದಾಟಿದ್ದ ಪ್ರೇಮಿ 4 ವರ್ಷಗಳ ಬಳಿಕ ಪಾಕ್​ನಿಂದ ವಾಪಸ್ appeared first on News First Kannada.

Source: newsfirstlive.com

Source link