ಚೆನ್ನೈ: ಮಹಾಮಾರಿ ಕೊರೊನಾ ದೇಶವನ್ನು ವಕ್ಕರಿಸಿದ ಬಳಿಕ ಅನೇಕರು ಕೋವಿಡ್ ಗೆ ಬಲಿಯಾದ್ರೆ ಇನ್ನೂ ಕೆಲವರು ಬದುಕುವ ದಾರಿ ಕಾಣದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಇದೀಗ ಬೆಂಗಾಲಿ ಕಿರುತೆರೆ ನಟರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ನಟನನ್ನು ಸುವೋ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ಗೆ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಲೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಟಯರ್ ಸ್ಫೋಟಗೊಂಡು ಅಂಬುಲೆನ್ಸ್ ಮರಕ್ಕೆ ಡಿಕ್ಕಿ – ತುಂಬು ಗರ್ಭಿಣಿ ಸಹಿತ ಮೂವರ ದುರ್ಮರಣ

ಜೀವನದಲ್ಲಿ ಜಿಗುಪ್ಸೆಗೊಂಡು ನಟ ಫೇಸ್ ಬುಕ್ ಲೈವ್ ನಲ್ಲಿದ್ದಾಗಲೇ ನಿದ್ದೆ ಮಾತ್ರೆ ತೆಗೆದುಕೊಂಡು ಸಾವಿನ ದಾರಿ ಹಿಡಿಯಲು ಮುಂದಾಗಿದ್ದಾರೆ. ಲೈವ್ ನಲ್ಲಿ ನಟ, ಯಾಕೋ ಗೊತ್ತಿಲ್ಲ ನನಗೆ ಕಟ್ಟಡದಿಂದ ಹಾರಿ, ಕೈ ಕಟ್ ಮಾಡಿಕೊಂಡು ಹಿಂಸಾತ್ಮಕವಾಗಿ ಸಾಯಲು ಮನಸ್ಸಿಲ್ಲ. ಇದು ನನಗೆ ಇಷ್ಟನೂ ಇಲ್ಲ. ನನಗೆ ಕೊನೆಯ ಆಯ್ಕೆ ಸಿಕ್ಕಿದ್ದು ನಿದ್ದೆ ಮಾತ್ರೆ. ಹೀಗಾಗಿ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಯಾರಿಗೆ ಅತೀ ಹೆಚ್ಚು ಬಿಪಿ ಇದೆಯೋ ಅವರು ಹೃದಯಾಘಾತವಾಗಿ ಸಾಯುತ್ತಾರೆ ಎಂದೆಲ್ಲ ಹೇಳಿದ್ದಾರೆ.

ನಟನ ಮಾತುಗಳನ್ನು ಕೇಳಿದ ಅಭಿಮಾನಿಗಳು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಅಲ್ಲದೆ ಅನುಮಾನಗೊಂಡು ಕೂಡಲೇ ಸ್ಥಳೀಯ ಪೊಲಿಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಇತ್ತ ನಟನ ಆತ್ಮಹತ್ಯೆಯ ಯತ್ನದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜೀವ ಕಾಪಾಡಿದ್ದಾರೆ. ಸದ್ಯ ನಟನ ಆರೋಗ್ಯ ಸ್ಥಿತಿ ಸುಧಾರಿಸಿದೆ.

ತನಿಖೆಯ ವೇಳೆ ಕಳೆದ ಆಗಸ್ಟ್ ತಿಂಗಳಿನಿಂದ ಯಾವುದೇ ಅವಕಾಶಗಳು ಸಿಗದೆ ನೊಂದಿರುವುದಾಗಿ ಪೊಲೀಸರ ಮುಂದೆ ನಟ ತಿಳಿಸಿದ್ದಾರೆ. ಮಂಗಳ್ ಚಂಡಿ, ಮಾನಸ ಹೀಗೆ ಹಲವಾರು ಸಿರಿಯಲ್ ಗಳಲ್ಲಿ ಸುವೋ ನಟಿಸಿ ಮನೆ ಮಾತಾಗಿದ್ದಾರೆ.

The post ಫೇಸ್‍ಬುಕ್ ಲೈವ್ ವೇಳೆ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ appeared first on Public TV.

Source: publictv.in

Source link