ಫೈನಲ್​ ಫೈಟ್​​ನಲ್ಲಿ ಗಿಲ್ ನಿರಾಸೆ; 2ನೇ ಇನ್ನಿಂಗ್ಸ್​​ ಗಿಲ್​ ಪಾಲಿಗೆ ಅಗ್ನಿ ಪರೀಕ್ಷೆ

ಫೈನಲ್​ ಫೈಟ್​​ನಲ್ಲಿ ಗಿಲ್ ನಿರಾಸೆ; 2ನೇ ಇನ್ನಿಂಗ್ಸ್​​ ಗಿಲ್​ ಪಾಲಿಗೆ ಅಗ್ನಿ ಪರೀಕ್ಷೆ

ಟೀಮ್​ ಇಂಡಿಯಾ ಪರ ಇನ್ನಿಂಗ್ಸ್​​ ಆರಂಭಿಸೋದು ಯಾರು..? ವಿಶ್ವ ಟೆಸ್ಟ್​​ ಚಾಂಪಿಯನ್​ ಶಿಪ್​ ಫೈನಲ್​ಗೂ ಮುನ್ನ ಹೆಚ್ಚು ಚರ್ಚೆಯಾದ ವಿಚಾರ ಇದು. ರೋಹಿತ್​ ಶರ್ಮಾ ಒಂದು ಸ್ಥಾನಕ್ಕೆ ಫಿಕ್ಸ್​ ಆಗಿದ್ರೆ, ಇನ್ನೊಂದು ಸ್ಥಾನಕ್ಕೆ ಯಾರು ಅನ್ನೋದು ಕುತೂಹಲವಾಗಿತ್ತು. ಮಯಾಂಕ್​, ರಾಹುಲ್​, ಶುಭ್​ಮನ್​ ಗಿಲ್​ ನಡುವೆ ಒಂದು ಸ್ಥಾನಕ್ಕೆ ಫೈಟ್​​ ಏರ್ಪಟ್ಟಿತ್ತು. ಅಂತಿಮವಾಗಿ ಗಿಲ್​ಗೆ ಆಡೋ ಬಳಗದಲ್ಲಿ ಟಿಕೆಟ್​​ ಸಿಗ್ತು.

ಮಹತ್ವದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಯೋ ಅವಕಾಶಗಿಟ್ಟಿಸಿಕೊಂಡ ಗಿಲ್​, ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡೋ ಭರವಸೆ ಮೂಡಿಸಿದ್ರು. ಆರಂಭದಲ್ಲಿ ನರ್ವಸ್​​ ಆದಂತೆ ಕಂಡಿದ್ದ ಗಿಲ್​, ನಂತರದಲ್ಲಿ ಕಿವೀಸ್​​ ವೇಗಿಗಳನ್ನ ಸಮರ್ಥವಾಗಿ ಎದುರಿಸಿದ್ರು. ಆದ್ರೆ, ಬಿಗ್​ ಇನ್ನಿಂಗ್ಸ್​ ಕಟ್ಟುವಲ್ಲಿ ಎಡವಿದ್ರು. ಕೇವಲ 28 ರನ್​ಗಳಿಸಿ ನೇಲ್​ ವ್ಯಾಗ್ನರ್​​ಗೆ ವಿಕೆಟ್​​ ಒಪ್ಪಿಸಿದ್ರು.

WTC ಫೈನಲ್ ಮೊದಲ ಇನ್ನಿಂಗ್ಸ್​​ನಲ್ಲಿ ಗಿಲ್​

  • ರನ್ 28
  • ಎಸೆತ 64
  • 4/6 3/0
  • ಸ್ಟ್ರೈಕ್​ರೇಟ್​​ 43.57

ಪ್ರಾಮಿಸಿಂಗ್​ ಪ್ರದರ್ಶನ ನೀಡಿದ ಗಿಲ್​ಗೆ ವಾರ್ನಿಂಗ್​..!
ಫೈಪೋಟಿ ನಡುವೆ ಕಳೆದು ಹೋಗ್ತಾರಾ ಶುಭ್​ಮನ್​​..?

ನ್ಯೂಜಿಲೆಂಡ್​​ ವಿರುದ್ಧದ ಫೈನಲ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬಿಗ್​ ಸ್ಕೋರ್​​ ಕಲೆ ಹಾಕುವಲ್ಲಿ ವಿಫಲರಾದ ಗಿಲ್​, ಕಳಪೆ ಪ್ರದರ್ಶನವನ್ನೇನು ನೀಡಿಲ್ಲ. ಆದ್ರೂ ಟೀಕೆಗಳಿಗೆ ಆಹಾರವಾಗಿದ್ದಾರೆ. ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಅಶೋಕ್ ಮಲ್ಹೋತ್ರಾರೇ ಗಿಲ್​ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ತಂಡದಲ್ಲಿ ಆಡಬೇಕಂದ್ರೆ, ಬಿಗ್​ ಇನ್ನಿಂಗ್ಸ್​ ಕಟ್ಟಬೇಕು ಎಂದು ವಾರ್ನ್​ ಮಾಡಿದ್ದಾರೆ.
ಶುಭ್​ಮನ್​​ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳ ಬೇಕಂದ್ರೆ, 2ನೇ ಇನ್ನಿಂಗ್ಸ್​​ನಲ್ಲಿ ಬಿಗ್​ಸ್ಕೋರ್​​ ಕಲೆ ಹಾಕಲೇಬೇಕಿದೆ. ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದ ಗಬಾ ಫೈಟ್​​ನಲ್ಲಿ 91 ರನ್​ಗಳಿಸಿದ್ದು, ಬಿಟ್ರೆ ಉಳಿದ ಇನ್ನಿಂಗ್ಸ್​​ನಲ್ಲಿ 50+ ರನ್​ಗಳಲ್ಲಿ ವಿಫಲರಾಗಿದ್ದಾರೆ. ಇದೇ ಗಿಲ್​ಗೆ ಮುಳುವಾಗಿದೆ. ಆರಂಭಿಕ ಆಟಗಾರನಿಗೆ ಬಿಗ್​ ಸ್ಕೋರ್​ ಕಲೆ ಹಾಕೋ ಅವಕಾಶಗಳು ಹೆಚ್ಚಿದ್ರೂ ಗಿಲ್​ ಈ ವಿಚಾರದಲ್ಲಿ ವಿಫಲರಾಗಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ 6 ಇನ್ನಿಂಗ್ಸ್​​ಗಳಲ್ಲಿ ಬ್ಯಾಟ್​​ ಬೀಸಿ 259 ರನ್​ ಕಲೆಹಾಕಿದ್ದ ಗಿಲ್​, ನಂತರದ ಇಂಗ್ಲೆಂಡ್​​ ಸರಣಿಯಲ್ಲೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲಿಲ್ಲ. 7 ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್​ ಮಾಡೋ ಅವಕಾಶ ಸಿಕ್ಕರೂಗಳಿಸಿದ್ದು ಕೇವಲ 119 ರನ್​ಗಳನ್ನ ಮಾತ್ರ.

ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಗಿಲ್​

  • ಇನ್ನಿಂಗ್ಸ್​ 7
  • ರನ್​ 119
  • 4/6 15/3
  • ಸ್ಟ್ರೈಕ್​ರೇಟ್​​ 54.84

ಕಾದು ಕುಳಿತಿದ್ದಾರೆ ರಾಹುಲ್​ -ಮಯಾಂಕ್​
ಕೇವಲ ಬಿಗ್​ ಸ್ಕೋರ್​ ಕಲೆ ಹಾಕದಿದ್ದದ್ದು ಮಾತ್ರವಲ್ಲ, ಆರಂಭಿಕನ ಸ್ಥಾನಕ್ಕೆ ಇರುವ ಪೈಪೋಟಿಯೂ ಗಿಲ್​ ಸ್ಥಾನಕ್ಕೆ ಕುತ್ತು ತಂದಿದೆ. ಕನ್ನಡಿಗರಾದ ಮಯಾಂಕ್​ ಅಗರ್​ವಾಲ್, ಕೆಎಲ್​ ರಾಹುಲ್​, ಆರಂಭಿಕನ ಸ್ಥಾನಕ್ಕಿರುವ ಟಫ್​ ಕಾಂಪಿಟೇಟರ್​​ಗಳಾಗಿದ್ದಾರೆ. ಸದ್ಯ ಬೆಂಚ್​ಗೆ ಸೀಮಿತವಾಗಿರೋ ಮಯಾಂಕ್​-ರಾಹುಲ್​ ಕೂಡ ಬಿಗ್​ ಸ್ಕೋರ್​​​ ಕಲೆ ಹಾಕದ ಕಾರಣಕ್ಕೇ ಗೇಟ್​​​ಪಾಸ್​ ಪಡೆದವರೇ. ಹೀಗಾಗಿ ಅವಕಾಶ ಸಿಕ್ಕರೆ ಶುಭಮನ್​ 2ನೇ ಇನ್ನಿಂಗ್ಸ್​ನಲ್ಲಿ ಉತ್ತಮ ಗೇಮ್​ ಪ್ಲೇ ಮಾಡಲೇಬೇಕಿದೆ. ಒಟ್ಟಿನಲ್ಲಿ ಸ್ಥಾನಕ್ಕಿರುವ ಫೈಪೋಟಿ ಹಾಗೂ ಬಿಗ್​ಸ್ಕೋರ್​​ ಕಲೆ ಹಾಕುವಲ್ಲಿ ಅನುಭವಿಸ್ತಾ ಇರೋ ವಿಫಲತೆ ಗಿಲ್​ ಮೇಲೆ ಒತ್ತಡವನ್ನ ಹೆಚ್ಚಿಸಿರೋದಂತೂ ಸುಳ್ಳಲ್ಲ. ಆ ಒತ್ತಡವನ್ನ ನಿವಾರಿಸಿಕೊಳ್ಳಬೇಕಂದ್ರೆ ಸಾಲಿಡ್​ ಪರ್ಫಾಮೆನ್ಸ್​ ನೀಡೋದು ಕೂಡ ಗಿಲ್​ ಪಾಲಿಗೆ ಅನಿವಾರ್ಯವಾಗಿದೆ.

The post ಫೈನಲ್​ ಫೈಟ್​​ನಲ್ಲಿ ಗಿಲ್ ನಿರಾಸೆ; 2ನೇ ಇನ್ನಿಂಗ್ಸ್​​ ಗಿಲ್​ ಪಾಲಿಗೆ ಅಗ್ನಿ ಪರೀಕ್ಷೆ appeared first on News First Kannada.

Source: newsfirstlive.com

Source link