ಫೋಟೋದಲ್ಲಿರೋ 2 ಚಿರತೆಗಳನ್ನ ಗುರುತಿಸುತ್ತೀರಾ..?

ಫೋಟೋದಲ್ಲಿರೋ 2 ಚಿರತೆಗಳನ್ನ ಗುರುತಿಸುತ್ತೀರಾ..?

ಸಾಮಾಜಿಕ ಜಾಲತಾಣದಲ್ಲಿ ಪ್ರಕೃತಿ, ಅರಣ್ಯ, ನಿಸರ್ಗದ ಹಲವು ಫೋಟೋಗಳು ಆಗಿಂದಾಗ್ಗೆ ವೈರಲ್​ ಆಗುತ್ತಿರುತ್ತವೆ. ಕೆಲವು ಜನರಲ್ಲಿ ಕುತೂಹಲವನ್ನು ಮೂಡಿಸಿದರೆ ಕೆಲ ಚಿತ್ರಗಳು ಜನರ ಗಮನ ಸೆಳೆಯುತ್ತದೆ. ಅಂತಹದ್ದೇ ಫೋಟೋವೊಂದನ್ನು ಐಎಎಫ್​ ಅಧಿಕಾರಿ ಪ್ರವೀಣ್​​ ಕಸ್ವಾನ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಎರಡು ಚಿರತೆಗಳಿಗೆ ಗುರುತಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಫೋಟೋಗ್ರಾಫರ್ ಮೋಹನ್​ ಥಾಮಸ್​ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡು ಫೋಟೋದಲ್ಲಿರೋ ಯಂಗ್​ ಚಿರತೆಯನ್ನು ಗುರುತಿಸುತ್ತೀರಾ? ಎಂದು ಬರೆದುಕೊಂಡಿದ್ದರು. ಈ ಟ್ವೀಟ್​​ಅನ್ನು ಐಎಎಫ್​ ಅಧಿಕಾರಿ ಪ್ರವೀಣ್​​ ಕಸ್ವಾನ್ ಶೇರ್ ಮಾಡಿದ್ದು, ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿ ರೀ ಟ್ವೀಟ್​ ಮಾಡಿದ್ದಾರೆ.

ಫೋಟೋ ವೈರಲ್​ ಆಗುತ್ತಿರುವುದಕ್ಕೆ ಪ್ರಕ್ರಿಯೆ ನೀಡಿರುವ ಮೋಹನ್​ ಥಾಮಸ್ ಅವರು, ಜನರು ತಮ್ಮ ಫೋಟೋಗ್ರಾಫಿ ಬಗ್ಗೆ ಮೆಚ್ಚುಗೆ ಸೂಚಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಇಂತಹ ಫೋಟೋಗಳನ್ನು ನೋಡುವ ಮೂಲಕ ಜನರು ಪ್ರಾಣಿಗಳನ್ನು ಪ್ರೀತಿಸಲು ಪ್ರಾರಂಭಿ ಅವುಗಳನ್ನು ರಕ್ಷಣೆ ಮಾಡುವುದನ್ನು ಪ್ರಾರಂಭಿಸಿದರೇ ಇನ್ನು ಹೆಚ್ಚು ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.

ಅಂದಹಾಗೇ, ಫೋಟೋದಲ್ಲಿ ಒಂದು ಚಿರತೆ ಮರದ ಕೊಂಬೆಯ ಮೇಲೆ ಇರೋದನ್ನು ಕಾಣಬಹುದು. ಮತ್ತೊಂದು ಚಿರತೆ ಮರದ ಹಿಂಭಾಗದಲ್ಲಿ ಅಡಗಿ ಕಿಳಿತು ಇಣುಕಿ ನೋಡುತ್ತಿರುವುದನ್ನು ಕಾಣಬಹುದಾಗಿದೆ. ಈ ಫೋಟೋವನ್ನು 2013ರಲ್ಲಿ ಕರ್ನಾಟಕದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ.

The post ಫೋಟೋದಲ್ಲಿರೋ 2 ಚಿರತೆಗಳನ್ನ ಗುರುತಿಸುತ್ತೀರಾ..? appeared first on News First Kannada.

Source: newsfirstlive.com

Source link