ಫೋಟೋಶೂಟ್​ ವೇಳೆ ಪ್ರದರ್ಶನವಾಯಿತು ನಟಿಯ ಖಾಸಗಿ ಅಂಗ; ಚಿತ್ರರಂಗ ತೊರೆಯಲು ಸೂಚಿಸಿದ ತಾಯಿ | Payal Rajput break silence over wardrobe malfunction


ಫೋಟೋಶೂಟ್​ ವೇಳೆ ಪ್ರದರ್ಶನವಾಯಿತು ನಟಿಯ ಖಾಸಗಿ ಅಂಗ; ಚಿತ್ರರಂಗ ತೊರೆಯಲು ಸೂಚಿಸಿದ ತಾಯಿ

ಪಾಯಲ್​

ನಟಿಯರು ಫೋಟೋಶೂಟ್​ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ನಾನಾ ರೀತಿಯ ಬಟ್ಟೆ ಹಾಕಿ ಮಿಂಚುತ್ತಾರೆ. ಫೋಟೋಶೂಟ್​ನಿಂದ ಸಿನಿಮಾ ಆಫರ್​ ಬಂದ ಉದಾಹರಣೆ ಕೂಡ ಸಾಕಷ್ಟಿದೆ. ಈ ಮಧ್ಯೆ ಕೆಲವರು ಬಟ್ಟೆ ಜಾರಿ ಮುಜುಗರಕ್ಕೆ ಒಳಗಾಗಿದ್ದಿದೆ. ನಟಿ ಪಾಯಲ್​ ರಜಪೂತ್​ ಕೂಡ ಇತ್ತೀಚೆಗೆ ಇದೇ ರೀತಿಯ ಅವಮಾನ ಎದುರಿಸಿದ್ದರು. ಅವರು ತೊಟ್ಟಿದ್ದ ಬಟ್ಟೆಯೇ ಅವರಿಗೆ ಮುಳುವಾಗಿತ್ತು. ಈ ವಿಚಾರದಲ್ಲಿ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಈಗ ಚಿತ್ರರಂಗ ತೊರೆಯುವಂತೆ ಪಾಯಲ್​ ತಾಯಿ ಸೂಚಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪಾಯಲ್​ ಹೇಳಿಕೊಂಡಿದ್ದಾರೆ.

ಹಳದಿ ಬಣ್ಣದ ಕೋಟ್​ ರೀತಿಯ ಡ್ರೆಸ್​ ಧರಿಸಿ ಪಾಯಲ್​ ಇತ್ತೀಚೆಗೆ ಕ್ಯಾಮೆರಾಗೆ ಪೋಸ್​ ನೀಡಿದ್ದರು. ಈ ಕೋಟ್​​ಗೆ ಅವರು ಬಟನ್​ ಹಾಕಿರಲಿಲ್ಲ. ಫೋಟೋಶೂಟ್​ ಮಾಡುವಾಗ ಇವರ ಖಾಸಗಿ ಅಂಗ ಪ್ರದರ್ಶನವಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕ್ಷಣಮಾತ್ರದಲ್ಲಿ ವೈರಲ್​ ಆಗಿತ್ತು. ಈ ಫೋಟೋ ಹಾಗೂ ವಿಡಿಯೋಗಳನ್ನು ಹಲವರು ನಾನಾ ರೀತಿಯಲ್ಲಿ ಟ್ರೋಲ್​ ಮಾಡಿದ್ದರು. ಕೆಟ್ಟದಾಗಿ ಕಮೆಂಟ್​ಗಳನ್ನು ಮಾಡಿದ್ದರು. ಇದು ಪಾಯಲ್​ ತಾಯಿಯ ಗಮನಕ್ಕೂ ಬಂದಿದೆ. ಮಗಳನ್ನು ಕರೆದು ಅವರು ಬುದ್ಧಿವಾದ ಹೇಳಿದ್ದಾರೆ.

ಮಗಳನ್ನು ಈ ರೀತಿ ಟ್ರೋಲ್​ ಮಾಡಿದ್ದನ್ನು ಪಾಯಲ್​ ತಾಯಿಗೆ ಸಹಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಚಿತ್ರರಂಗ ತೊರೆಯುವಂತೆ ಅವರು ಸೂಚನೆ ನೀಡಿದ್ದಾರೆ. ಆದರೆ, ಇದನ್ನು ಪಾಯಲ್ ಒಪ್ಪಿಲ್ಲ. ಬದಲಿಗೆ ತಾಯಿಯ ಮನ ಒಲಿಸುವ ಕೆಲಸ ಮಾಡಿದ್ದಾರೆ. ಚಿತ್ರರಂಗದಲ್ಲಿ ಈ ರೀತಿಯ ಅವಮಾನಗಳನ್ನು ಎದುರಿಸಬೇಕಾಗುತ್ತದೆ ಎಂದು ಪಾಯಲ್​ ಅವರ ತಾಯಿಗೆ ಹೇಳಿದ್ದಾರೆ.

ಅಂಡರ್​ವರ್ಲ್ಡ್​​ ಡಾನ್​ ಆಗಿದ್ದ ಜಯರಾಜ್​ ಜೀವನ ಕಥೆ ಆಧರಿಸಿ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇದಕ್ಕೆ ‘ಹೆಡ್​ ಬುಷ್​’ ಎಂದು ನಾಮಕರಣ ಮಾಡಲಾಗಿದ್ದು, ಧನಂಜಯ ನಾಯಕ. ಈ ಸಿನಿಮಾದಲ್ಲಿ ಜಯರಾಜ್​ ಗರ್ಲ್​​ಫ್ರೆಂಡ್​ ಆಗಿ ಪಾಯಲ್​ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ.

TV9 Kannada


Leave a Reply

Your email address will not be published. Required fields are marked *