ಬೆಂಗಳೂರು: ಇತ್ತೀಚಿಗೆ ನನ್ನನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿ ಮಾಡಿಲ್ಲ. ಏಕೆ ನನ್ನ ಹೆಸರು ತಳುಕು ಹಾಕಿಕೊಂಡಿದೆ? ಎಂದು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿ ಮಾಡಿರುವ ಫೋಟೋ ವೈರಲ್​ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು.. ಯಾಕೆ ಈ ಫೋಟೋ ವೈರಲ್ ಮಾಡುತ್ತಿದ್ದಾರೆ ಗೊತ್ತಿಲ್ಲ. ಪ್ರತಿ ದಿನ ನೂರಾರು ಜನ ನನ್ನ ಭೇಟಿ ಮಾಡುತ್ತಾರೆ. ಈ ವೇಳೆ ನನ್ನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ ಎಂದರು.

ನಾನು ರಾಜಕಾರಣವನ್ನ ನೇರವಾಗಿ ಮಾಡುತ್ತೇನೆ. ಬಹಶಃ ಈ ದೇಶದಲ್ಲಿ ಮುಕ್ತವಾಗಿ ರಾಜಕಾರಣ ಮಾಡೋದು ನನ್ನ ಬಿಟ್ಟರೆ ಬೇರೆ ಯಾರೂ ಇಲ್ಲವೇನೋ? ನಿನ್ನೆಯಿಂದ ನಡೆಯುತ್ತಿರುವ ಘಟನೆಯ ಬಗ್ಗೆ ಆ ಫೋಟೊ ಇಟ್ಟುಕೊಂಡು ನನ್ನ ಹೆಸರು ತಳುಕು ಹಾಕುವ ಕೆಲಸ ಮಾಡಬೇಡಿ. ಹಲವಾರು ಬಾರಿ ಇಂದ್ರಜಿತ್ ಭೇಟಿ ಮಾಡಿದ್ದಾರೆ. ಇತ್ತೀಚೆಗೆ ನಾನು ಅವರನ್ನು ಭೇಟಿ ಮಾಡಿಲ್ಲ.

ಇದನ್ನೂ ಓದಿ: ಕುಮಾರಸ್ವಾಮಿ-ಇಂದ್ರಜಿತ್ ಭೇಟಿ ಫೋಟೋ ವೈರಲ್; ಹೊಸ ಚರ್ಚೆಗೆ ನಾಂದಿ

ಹಲವಾರು ಬಾರಿ ಭೇಟಿ ಮಾಡಿ ಸಂದರ್ಶನ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತನ್ನಾಡಿದ್ದಾರೆ. ಇಂದ್ರಜಿತ್ ಲಂಕೇಶ್ ಅವರಿಗೆ ಮನವಿ ಮಾಡುತ್ತೇನೆ. ಈ ಫೋಟೋ ಯಾರು ಯಾವ ಕಾರಣಕ್ಕೆ ಬಳಸಿಕೊಂಡು ಉಪಯೋಗ ಮಾಡಿಕೊಳ್ಳಲು ಹೊರಟಿದ್ದಾರೆ? ಸತ್ಯ ಅವರೇ ತಿಳಿಸುವುದು ಒಳ್ಳೆಯದು ಎಂದಿದ್ದಾರೆ.

The post ಫೋಟೋ ವೈರಲ್: ‘ಇಂದ್ರಜಿತ್​ ಅವ್ರೇ ಸತ್ಯ ತಿಳಿಸೋದು ಒಳ್ಳೆಯದು’ ಎಂದ ಹೆಚ್​ಡಿಕೆ appeared first on News First Kannada.

Source: newsfirstlive.com

Source link