ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿಯೇ ಸದ್ದಾಗುತ್ತಿರುವ ಮಧ್ಯೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ನನ್ನ ಫೋನ್ ಟ್ಯಾಪ್ ಆಗಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.. ಟೆಲಿಫೋನ್ ಕದ್ದಾಲಿಕೆ ಹಗರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಡ ಹೇರಿದ್ದಾರೆ.

2020 ರಲ್ಲಿ ಫೋನ್ ಕದ್ದಾಲಿಕೆಯ ಪ್ರಕರಣವನ್ನು ಯಡಿಯೂರಪ್ಪನವರ ಸರ್ಕಾರ ಸಿಬಿಐಗೆ ವಹಿಸಿತು, ತನಿಖೆ ಇನ್ನೂ ನಡೆಯುತ್ತಿದೆ. ಈಗ 2021ರಲ್ಲೂ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿರುವ ಫೋನ್ ಕದ್ದಾಲಿಕೆ ಪ್ರಕರಣವನ್ನು ಹಿಂದಿನ ರೀತಿಯಲ್ಲಿಯೇ ಯಡಿಯೂರಪ್ಪನವರ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು ಎಂದು ಟ್ವಿಟರ್ ಮೂಲಕ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

 

The post ಫೋನ್ ಟ್ಯಾಪಿಂಗ್ ಹಗರಣವನ್ನ ಸಿಬಿಐಗೆ ನೀಡಿ.. ಡಿಕೆಎಸ್​ ಒತ್ತಾಯ appeared first on News First Kannada.

Source: newsfirstlive.com

Source link